ಸಾಗರನಂದಿಯ ನಾಟಕಲಕ್ಷಣರತ್ನಕೋಶ ಗ್ರಂಥ: Difference between revisions
(Created page with " Authored by ಡಾ.ಮನೋರಮಾ ಬಿ.ಎನ್. Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ, ನಾಟಕ ಅಂದರೆ ರಂಗಭೂಮಿಯ ಲಕ್ಷಣಗಳ ಅಮೂಲ್ಯ ರತ್ನಗಳ ಒಂದು ಕೋಶ ಇಲ್ಲವೇ ನಾಟಕ ಕ್ಷೇತ್ರಕ್ಕೆ ಸಂದ ಅ...") |
No edit summary |
||
| (5 intermediate revisions by the same user not shown) | |||
| Line 1: | Line 1: | ||
Authored by ಡಾ.ಮನೋರಮಾ ಬಿ.ಎನ್. | Authored by ಡಾ.ಮನೋರಮಾ ಬಿ.ಎನ್. | ||
Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ, | Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ<ref>ಶಾಸ್ತ್ರರಂಗ ಯೂಟ್ಯೂಬ್ ಸೀರಿಸ್ . ಭಾಗ ೩: ಉತ್ತರ/ಪಾಂಚಾಲೀ(Video series)-ಸಂಚಿಕೆ 37 [https://www.youtube.com/channel/UCzsvThi5o-5X1-5kp7jaxVQ @noopurabhramari1212]</ref>, | ||
ನಾಟಕ ಅಂದರೆ ರಂಗಭೂಮಿಯ ಲಕ್ಷಣಗಳ ಅಮೂಲ್ಯ ರತ್ನಗಳ ಒಂದು ಕೋಶ ಇಲ್ಲವೇ ನಾಟಕ ಕ್ಷೇತ್ರಕ್ಕೆ ಸಂದ ಅಮೂಲ್ಯಲಕ್ಷಣಭಂಡಾರ ಎಂಬರ್ಥದ ಗ್ರಂಥವಿದು. | ನಾಟಕ ಅಂದರೆ ರಂಗಭೂಮಿಯ ಲಕ್ಷಣಗಳ ಅಮೂಲ್ಯ ರತ್ನಗಳ ಒಂದು ಕೋಶ ಇಲ್ಲವೇ ನಾಟಕ ಕ್ಷೇತ್ರಕ್ಕೆ ಸಂದ ಅಮೂಲ್ಯಲಕ್ಷಣಭಂಡಾರ ಎಂಬರ್ಥದ ಗ್ರಂಥವಿದು. ಸಾಗರನಂದಿ ಇದರ ರಚನಾಕಾರ. | ||
== ಸಾಗರ ನಂದಿ- ಗ್ರಾಂಥಿಕ ವಿವರಗಳು == | == ಸಾಗರ ನಂದಿ- ಗ್ರಾಂಥಿಕ ವಿವರಗಳು == | ||
ನಂದಿನ್ ಎನ್ನುವುದು ಜೈನ ಅಥವಾ ಬೌದ್ಧ ವಾಂಶಿಕರನ್ನು ಸೂಚಿಸುತ್ತದೆ ಎಂಬ ಅನುಮಿತಿಗಳನ್ನು ಇತಿಹಾಸಕಾರರು ಮಾಡಿದ್ದಾರೆ. ಆದರೆ ಗ್ರಂಥವು ಶಿವನಸ್ತುತಿಯೊಂದಿಗೆ ಆರಂಭಗೊಳ್ಳುವುದನ್ನು ಗಮನಿಸಿದಾಗ ರಾಜವಂಶದಲ್ಲಿ ಜನಿಸಿದ ಕ್ಷತ್ರಿಯ ಪುರುಷ ಈ ಸಾಗರನಂದಿಯಾಗಿದ್ದಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರೆ ಈತ ಇದ್ದ ನಿರ್ದಿಷ್ಟ ಪ್ರದೇಶ ಯಾವುದೆಂದು ತಿಳಿದುಬರುವುದಿಲ್ಲ. ಹಾಗಿದ್ದೂ ಉತ್ತರ ಭಾರತಕ್ಕೆ ಸಲ್ಲುವವನೆಂದೇ ಲಕ್ಷಣವಿವರಗಳಿಂದ ಅಂದಾಜಿಸಬಹುದು. | ನಂದಿನ್ ಎನ್ನುವುದು ಜೈನ ಅಥವಾ ಬೌದ್ಧ ವಾಂಶಿಕರನ್ನು ಸೂಚಿಸುತ್ತದೆ ಎಂಬ ಅನುಮಿತಿಗಳನ್ನು ಇತಿಹಾಸಕಾರರು ಮಾಡಿದ್ದಾರೆ. ಆದರೆ ಗ್ರಂಥವು ಶಿವನಸ್ತುತಿಯೊಂದಿಗೆ ಆರಂಭಗೊಳ್ಳುವುದನ್ನು ಗಮನಿಸಿದಾಗ ರಾಜವಂಶದಲ್ಲಿ ಜನಿಸಿದ ಕ್ಷತ್ರಿಯ ಪುರುಷ ಈ ಸಾಗರನಂದಿಯಾಗಿದ್ದಿರಬಹುದು ಎಂಬ ಅನುಮಾನ ಮೂಡುತ್ತದೆ. ನಂದಿ ವಂಶ ಅಥವಾ ನಂದಿನ್ ಎಂಬ ಬಿರುದುಳ್ಳ ವೀಸೀ ಮನೆತನದಲ್ಲಿ ಹುಟ್ಟಿದವ ಸಾಗರನಂದಿ. ಆದರೆ ಈತ ಇದ್ದ ನಿರ್ದಿಷ್ಟ ಪ್ರದೇಶ ಯಾವುದೆಂದು ತಿಳಿದುಬರುವುದಿಲ್ಲ. ಹಾಗಿದ್ದೂ ಉತ್ತರ ಭಾರತಕ್ಕೆ ಸಲ್ಲುವವನೆಂದೇ ಲಕ್ಷಣವಿವರಗಳಿಂದ ಅಂದಾಜಿಸಬಹುದು. | ||
ನಾಟಕಲಕ್ಷಣರತ್ನಕೋಶದ ರಚನೆಯ ಕಾಲ ಹತ್ತು-ಹನ್ನೊಂದನೇ ಶತಮಾನದ ಆಸುಪಾಸಿನಲ್ಲಿ ಅಗಿರುವಂತಿದೆ. ಹಾಗೆಂದೇ ಅಭಿನವಗುಪ್ತನ ಅಭಿನವಭಾರತೀ ಮತ್ತು ಭೋಜರಾಜನ ಗ್ರಂಥ ಶೃಂಗಾರಪ್ರಕಾಶಕ್ಕೂ ನಾಟಕಲಕ್ಷಣರತ್ನಕೋಶಕ್ಕೂ ಹಲವು ಲಕ್ಷಣಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದು. ಅಂತೆಯೇ ಕೋಹಲೋಕ್ತವೆನ್ನಬಹುದಾದ ಅನೇಕ ಲಕ್ಷಣಗಳನ್ನು ಬರೆದಿದ್ದಾನೆ ಸಾಗರನಂದಿ. ಮಾತೃಗುಪ್ತ, ರಾಹುಲ, ಕಾತ್ಯಾಯನ, ನಖಕುಟ್ಟ, ಅಶ್ಮಕುಟ್ಟ, ಗರ್ಗ, ಬಾದರಾಯಣ, ಶಾತಕರ್ಣಿ, ಚಾರಾಯಣ, ಶ್ರೀಹರ್ಷ, ವಿಕ್ರಮ ಮೊದಲಾದ ಪೂರ್ವಸೂರಿ ಭರತಶಾಸ್ತ್ರಜ್ಞರನ್ನು ಕೂಡಾ ಹೇರಳವಾಗಿ ಉಲ್ಲೇಖಿಸಿದ್ದಾನೆ. | ನಾಟಕಲಕ್ಷಣರತ್ನಕೋಶದ ರಚನೆಯ ಕಾಲ ಹತ್ತು-ಹನ್ನೊಂದನೇ ಶತಮಾನದ ಆಸುಪಾಸಿನಲ್ಲಿ ಅಗಿರುವಂತಿದೆ. ಹಾಗೆಂದೇ ಅಭಿನವಗುಪ್ತನ ಅಭಿನವಭಾರತೀ ಮತ್ತು ಭೋಜರಾಜನ ಗ್ರಂಥ ಶೃಂಗಾರಪ್ರಕಾಶಕ್ಕೂ ನಾಟಕಲಕ್ಷಣರತ್ನಕೋಶಕ್ಕೂ ಹಲವು ಲಕ್ಷಣಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದು. ಅಂತೆಯೇ ಕೋಹಲೋಕ್ತವೆನ್ನಬಹುದಾದ ಅನೇಕ ಲಕ್ಷಣಗಳನ್ನು ಬರೆದಿದ್ದಾನೆ ಸಾಗರನಂದಿ. ಮಾತೃಗುಪ್ತ, ರಾಹುಲ, ಕಾತ್ಯಾಯನ, ನಖಕುಟ್ಟ, ಅಶ್ಮಕುಟ್ಟ, ಗರ್ಗ, ಬಾದರಾಯಣ, ಶಾತಕರ್ಣಿ, ಚಾರಾಯಣ, ಶ್ರೀಹರ್ಷ, ವಿಕ್ರಮ ಮೊದಲಾದ ಪೂರ್ವಸೂರಿ ಭರತಶಾಸ್ತ್ರಜ್ಞರನ್ನು ಕೂಡಾ ಹೇರಳವಾಗಿ ಉಲ್ಲೇಖಿಸಿದ್ದಾನೆ. | ||
== ನಾಟಕಲಕ್ಷಣರತ್ನಕೋಶ- ಗ್ರಂಥವೈಶಿಷ್ಟ್ಯ == | == ನಾಟಕಲಕ್ಷಣರತ್ನಕೋಶ- ಗ್ರಂಥವೈಶಿಷ್ಟ್ಯ == | ||
ಸಂಧಿ-ಸಂಧ್ಯಂಗ- ಅವಸ್ಥಾಭೇದ-ಅರ್ಥಪ್ರಕೃತಿ ವಿವರಗಳು; ಭಾವ-ರಸ-ಅಲಂಕಾರ-ನಾಯಕ ನಾಯಿಕಾ ಗುಣನಿರೂಪಣ- ಸಾತ್ತ್ವತೀ, ಆರಭಟೀ, ಕೈಶಿಕೀ, ಭಾರತೀ ಎಂಬ ಚತುರ್ವೃತ್ತಿಗಳು, ದಶರೂಪಕಾದಿಭೇದಗಳು ಮೊದಲಾದ ರಂಗಭೂಮಿಗೆ ಸಂಬಂಧಿಸಿದ ನಾಟ್ಯಶಾಸ್ತ್ರೀಯ ವಿವರಗಳನ್ನು ಒಳಗೊಂಡಿದೆ ಈ ಕೃತಿ. ಈ ಲಕ್ಷಣ ವಿವರಗಳಿಗೆ ಉದಾಹರಣೆ ಅಥವಾ ವಿನಿಯೋಗ ಎಂಬಂತೆ ಸಾಗರನಂದಿಯು ನಾಟಕಲಕ್ಷಣರತ್ನಕೋಶವೆಂಬ ಗ್ರಂಥದಲ್ಲಿ ಉಲ್ಲೇಖಿಸಿದ ನಾಟಕಾದಿ ರಂಗಭೂಮಿಯ ರಚನೆಗಳ ಬಗ್ಗೆ ಒಂದು ಸಲ ದೃಷ್ಟಿ ಹಾಯಿಸುವುದಾದರೆ -ಕಾಳಿದಾಸನ ವಿಕ್ರಮೋರ್ವಶೀಯ, ಶಾಕುಂತಲಾ, ಭವಭೂತಿಯ ಉತ್ತರರಾಮಚರಿತ, ಮಾಲತೀಮಾಧವ, ಶ್ರೀಹರ್ಷನ ರತ್ನಾವಲೀ ಮತ್ತು ನಾಗಾನಂದ, ಭಾಸನ ಸ್ವಪ್ನವಾಸವದತ್ತ-ಚಾರುದತ್ತ, ವಿಶಾಖದತ್ತನ ಮುದ್ರಾರಾಕ್ಷಸ, ರಾಘವಾಭ್ಯುದಯ ಮತ್ತು ದೇವೀಚಂದ್ರಗುಪ್ತಮ್, ಶೂದ್ರಕನ ಮೃಚ್ಛಕಟಿಕ, ದಿಙಗನ ಕುಂದಮಾಲಾ, ರಾಜಶೇಖರನ ಕರ್ಪೂರಮಂಜರೀ, ವಿದ್ಧಶಾಲಭಂಜಿಕಾ, ಭಟ್ಟನಾರಾಯಣನ ವೇಣೀಸಂಹಾರ, ಮಾಯುರಾಜನ ಉದಾತ್ತರಾಘವ ಮತ್ತು ತಾಪಸವತ್ಸರಾಜ, ಸುಭಟ ಕವಿಯ ದೂತಾಂಗದ, ಯಶೋವರ್ಮನ ರಾಮಾಭ್ಯುದಯ. ಇಷ್ಟೇ ಅಲ್ಲ, ಉಪಾಹರಣ, ಊರ್ವಶೀಮರ್ದನ, ಕನಕಾವತೀಮಾಧವ, ಕಾಲವತೀ, ಕಾಮದತ್ತಾ, ಕೇಲಿರೈವತಕ, ಕ್ರೀಡಾರಸಾತಲ, ಕೃತ್ಯರಾವಣಮ್, ಕೀಚಕ ಭೀಮ, ಛಲಿತರಾಮ, ಜಾನಕೀರಾಘವ, ದೇವದತ್ತಕೃತಿ, ದೇವೀಮಹಾದೇವ, ನಲವಿಜಯ, ನರಕೋದ್ಧರಣ, ಪದ್ಮಾವತೀ ಪರಿಣಯ, ಪತ್ರಲೇಖ, ಪಾಲಚರಿತ, ಪ್ರ್ರಾಮೇಯಿ, ಪುಷ್ಪದೂಪಿತಕ, ಭಗವದಜ್ಜುಕೀಯ, ಭೀಮವಿಜಯ, ಮದನಮಂಜುಲಾ, | ಸಂಧಿ-ಸಂಧ್ಯಂಗ- ಅವಸ್ಥಾಭೇದ-ಅರ್ಥಪ್ರಕೃತಿ ವಿವರಗಳು; ಭಾವ-ರಸ-ಅಲಂಕಾರ-ನಾಯಕ ನಾಯಿಕಾ ಗುಣನಿರೂಪಣ- ಸಾತ್ತ್ವತೀ, ಆರಭಟೀ, ಕೈಶಿಕೀ, ಭಾರತೀ ಎಂಬ ಚತುರ್ವೃತ್ತಿಗಳು, ದಶರೂಪಕಾದಿಭೇದಗಳು ಮೊದಲಾದ ರಂಗಭೂಮಿಗೆ ಸಂಬಂಧಿಸಿದ ನಾಟ್ಯಶಾಸ್ತ್ರೀಯ ವಿವರಗಳನ್ನು ಒಳಗೊಂಡಿದೆ ಈ ಕೃತಿ. ಈ ಲಕ್ಷಣ ವಿವರಗಳಿಗೆ ಉದಾಹರಣೆ ಅಥವಾ ವಿನಿಯೋಗ ಎಂಬಂತೆ ಸಾಗರನಂದಿಯು ನಾಟಕಲಕ್ಷಣರತ್ನಕೋಶವೆಂಬ ಗ್ರಂಥದಲ್ಲಿ ಉಲ್ಲೇಖಿಸಿದ ನಾಟಕಾದಿ ರಂಗಭೂಮಿಯ ರಚನೆಗಳ ಬಗ್ಗೆ ಒಂದು ಸಲ ದೃಷ್ಟಿ ಹಾಯಿಸುವುದಾದರೆ -ಕಾಳಿದಾಸನ ವಿಕ್ರಮೋರ್ವಶೀಯ, ಶಾಕುಂತಲಾ, ಭವಭೂತಿಯ ಉತ್ತರರಾಮಚರಿತ, ಮಾಲತೀಮಾಧವ, ಶ್ರೀಹರ್ಷನ ರತ್ನಾವಲೀ ಮತ್ತು ನಾಗಾನಂದ, ಭಾಸನ ಸ್ವಪ್ನವಾಸವದತ್ತ-ಚಾರುದತ್ತ, ವಿಶಾಖದತ್ತನ ಮುದ್ರಾರಾಕ್ಷಸ, ರಾಘವಾಭ್ಯುದಯ ಮತ್ತು ದೇವೀಚಂದ್ರಗುಪ್ತಮ್, ಶೂದ್ರಕನ ಮೃಚ್ಛಕಟಿಕ, ದಿಙಗನ ಕುಂದಮಾಲಾ, ರಾಜಶೇಖರನ ಕರ್ಪೂರಮಂಜರೀ, ವಿದ್ಧಶಾಲಭಂಜಿಕಾ, ಭಟ್ಟನಾರಾಯಣನ ವೇಣೀಸಂಹಾರ, ಮಾಯುರಾಜನ ಉದಾತ್ತರಾಘವ ಮತ್ತು ತಾಪಸವತ್ಸರಾಜ, ಸುಭಟ ಕವಿಯ ದೂತಾಂಗದ, ಯಶೋವರ್ಮನ ರಾಮಾಭ್ಯುದಯ. ಇಷ್ಟೇ ಅಲ್ಲ, ಉಪಾಹರಣ, ಊರ್ವಶೀಮರ್ದನ, ಕನಕಾವತೀಮಾಧವ, ಕಾಲವತೀ, ಕಾಮದತ್ತಾ, ಕೇಲಿರೈವತಕ, ಕ್ರೀಡಾರಸಾತಲ, ಕೃತ್ಯರಾವಣಮ್, ಕೀಚಕ ಭೀಮ, ಛಲಿತರಾಮ, ಜಾನಕೀರಾಘವ, ದೇವದತ್ತಕೃತಿ, ದೇವೀಮಹಾದೇವ, ನಲವಿಜಯ, ನರಕೋದ್ಧರಣ, ಪದ್ಮಾವತೀ ಪರಿಣಯ, ಪತ್ರಲೇಖ, ಪಾಲಚರಿತ, ಪ್ರ್ರಾಮೇಯಿ, ಪುಷ್ಪದೂಪಿತಕ, ಭಗವದಜ್ಜುಕೀಯ, ಭೀಮವಿಜಯ, ಮದನಮಂಜುಲಾ, ಮದನಿಕಾಕಾಮುಕ, ಮಾರೀಚವಂಚಿತಕ, ಮಾಯಾಕಾಪಾಲಿಕ, ಮಾಯಾಮದಾಲಸಾ, ರಂಭಾನಳಕುಬರ, ರಾಧಾ, ರಾಮವಿಕ್ರಮ, ರಾಮಾನಂದ, ರೇವತೀಪರಿಣಯ, ಲಲಿತ ನಾಗರ, ವಕುಲವೀಥೀ, ವಾಲೀವಧ, ವಿಂದುಮತಿ, ವಿಲಾಸವತೀ, ವೀಣಾವತೀ, ವೃತ್ರೋದ್ಧರಣ, ಶಕಾನಂದ, ಶರ್ಮಿಷ್ಠಾಪರಿಣಯ, ಶಶಿವಿಲಾಸ, ಶಶಿಕಾಮದತ್ತಾ, ಶೃಂಗಾರತಿಲಕಾ, ಸತ್ಯಭಾಮಾ ಎಂಬುದಾಗಿ ಪ್ರಾಚೀನ ಭಾರತ ರಂಗಭೂಮಿಯಲ್ಲಿ ಬಳಕೆಯಲ್ಲಿದ್ದ ಅನೇಕಾನೇಕ ರಚನೆಗಳನ್ನು ಲಕ್ಷಣಸಂಬಂಧಿಯಾಗಿ ಉಲ್ಲೇಖಿಸಿದ್ದಾನೆ. | ||
ಇವುಗಳಲ್ಲಿ ನಾಟಕ, ಪ್ರಕರಣ, ಸಮವಕಾರ, ಈಹಾಮೃಗ, ವ್ಯಾಯೋಗ, ಪ್ರಹಸನ, ಡಿಮ, ಭಾಣ, ವೀಥೀ, ಅಂಕ ಎಂಬಿತ್ಯಾದಿ ದಶರೂಪಕಗಳಷ್ಟೇ ಅಲ್ಲದೆ ಉಪರೂಪಕ ಪ್ರಭೇದಗಳೂ ಇರುವುದು ತಿಳಿಯುತ್ತದೆ. ಈ ಉಪರೂಪಕಗಳು ಅಂದರೆ ಭರತನ ನಾಟ್ಯಶಾಸ್ತ್ರದ ಅನಂತರದ ಕಾಲದಲ್ಲಿ ದಶರೂಪಕವನ್ನೇ ಹೋಲುವ ಆದರೆ ಕಥಾವಸ್ತು ಮತ್ತು ಕೆಲವೊಂದು ಸನ್ನಿವೇಶಗಳಲ್ಲಿ ಭಿನ್ನವೆನಿಸಿಕೊಂಡವು. ಕೊಂಚ ಮಟ್ಟಿಗೆ ನೃತ್ಯಪ್ರಧಾನವಾಗಿದ್ದ ರಂಗಭೂಮಿಯ ರಚನೆಗಳು ಇವು. ಅಭಿನವಗುಪ್ತನ ಅಭಿನವಭಾರತೀ, ಭೋಜರಾಜನ ಶೃಂಗಾರಪ್ರಕಾಶ, ಹೇಮಚಂದ್ರನ ಕಾವ್ಯಾನುಶಾಸನ, ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣ, ಶಾರದಾತನಯನ ಭಾವಪ್ರಕಾಶ, ವಿಶ್ವನಾಥ ಕವಿರಾಜನ ಸಾಹಿತ್ಯದರ್ಪಣ ಕೂಡಾ ಇಂಥ ಉಪರೂಪಕಗಳ ವಿಚಾರವನ್ನು ಲಕ್ಷಣೀಕರಿಸಿದೆ. ಹೀಗೆ ಕಂಡುಬರುವ ಉಪರೂಪಕಗಳ ಪೈಕಿ ಉಲ್ಲೋಪ್ಯಕ, ಗೋಷ್ಠಿ, ಭಾಣೀ, ಭಾಣಿಕಾ, ತ್ರೋಟಕ, ಧುರ್ಮೀಲಿಕಾ, ರಾಸಕ, ನಾಟ್ಯರಾಸಕ, ಪ್ರಸ್ಥಾನ, ಪ್ರೇಕ್ಷಣಕ, ಶ್ರೀಗದಿತ, ಹಲ್ಲೀಸಕ, ಶಿಲ್ಪಕ, ಸಟ್ಟಕ, ಸಲ್ಲಾಪಕ ಮೊದಲಾದ ಅನೇಕ ಉಪರೂಪಕಗಳ ಲಕ್ಷಣಗಳನ್ನು ಗಮನಿಸುವುದಕ್ಕೆ ನಾಟಕಲಕ್ಷಣರತ್ನಕೋಶವು ಕೂಡಾ ಮಹತ್ತ್ವದ ಗ್ರಂಥ. | ಇವುಗಳಲ್ಲಿ ನಾಟಕ, ಪ್ರಕರಣ, ಸಮವಕಾರ, ಈಹಾಮೃಗ, ವ್ಯಾಯೋಗ, ಪ್ರಹಸನ, ಡಿಮ, ಭಾಣ, ವೀಥೀ, ಅಂಕ ಎಂಬಿತ್ಯಾದಿ ದಶರೂಪಕಗಳಷ್ಟೇ ಅಲ್ಲದೆ ಉಪರೂಪಕ ಪ್ರಭೇದಗಳೂ ಇರುವುದು ತಿಳಿಯುತ್ತದೆ. ಈ ಉಪರೂಪಕಗಳು ಅಂದರೆ ಭರತನ ನಾಟ್ಯಶಾಸ್ತ್ರದ ಅನಂತರದ ಕಾಲದಲ್ಲಿ ದಶರೂಪಕವನ್ನೇ ಹೋಲುವ ಆದರೆ ಕಥಾವಸ್ತು ಮತ್ತು ಕೆಲವೊಂದು ಸನ್ನಿವೇಶಗಳಲ್ಲಿ ಭಿನ್ನವೆನಿಸಿಕೊಂಡವು. ಕೊಂಚ ಮಟ್ಟಿಗೆ ನೃತ್ಯಪ್ರಧಾನವಾಗಿದ್ದ ರಂಗಭೂಮಿಯ ರಚನೆಗಳು ಇವು. ಅಭಿನವಗುಪ್ತನ ಅಭಿನವಭಾರತೀ, ಭೋಜರಾಜನ ಶೃಂಗಾರಪ್ರಕಾಶ, ಹೇಮಚಂದ್ರನ ಕಾವ್ಯಾನುಶಾಸನ, ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣ, ಶಾರದಾತನಯನ ಭಾವಪ್ರಕಾಶ, ವಿಶ್ವನಾಥ ಕವಿರಾಜನ ಸಾಹಿತ್ಯದರ್ಪಣ ಕೂಡಾ ಇಂಥ ಉಪರೂಪಕಗಳ ವಿಚಾರವನ್ನು ಲಕ್ಷಣೀಕರಿಸಿದೆ. ಹೀಗೆ ಕಂಡುಬರುವ ಉಪರೂಪಕಗಳ ಪೈಕಿ ಉಲ್ಲೋಪ್ಯಕ, ಗೋಷ್ಠಿ, ಭಾಣೀ, ಭಾಣಿಕಾ, ತ್ರೋಟಕ, ಧುರ್ಮೀಲಿಕಾ, ರಾಸಕ, ನಾಟ್ಯರಾಸಕ, ಪ್ರಸ್ಥಾನ, ಪ್ರೇಕ್ಷಣಕ, ಶ್ರೀಗದಿತ, ಹಲ್ಲೀಸಕ, ಶಿಲ್ಪಕ, ಸಟ್ಟಕ, ಸಲ್ಲಾಪಕ ಮೊದಲಾದ ಅನೇಕ ಉಪರೂಪಕಗಳ ಲಕ್ಷಣಗಳನ್ನು ಗಮನಿಸುವುದಕ್ಕೆ ನಾಟಕಲಕ್ಷಣರತ್ನಕೋಶವು ಕೂಡಾ ಮಹತ್ತ್ವದ ಗ್ರಂಥ. | ||
| Line 21: | Line 21: | ||
Natyashastra with Abhinavabharati Commentary. 2012. Ed R S Nagar. Delhi : Parimal Publication | Natyashastra with Abhinavabharati Commentary. 2012. Ed R S Nagar. Delhi : Parimal Publication | ||
https://www.noopurabhramari.com/shaastraranga-episode-36-sagaranandi-natakalakshanaratnakosha/ | |||
[[index.php?title=Category:Art and Culture]] | |||
[[index.php?title=Category:Art and Culture]] | |||
Latest revision as of 11:40, 30 October 2024
Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1],
ನಾಟಕ ಅಂದರೆ ರಂಗಭೂಮಿಯ ಲಕ್ಷಣಗಳ ಅಮೂಲ್ಯ ರತ್ನಗಳ ಒಂದು ಕೋಶ ಇಲ್ಲವೇ ನಾಟಕ ಕ್ಷೇತ್ರಕ್ಕೆ ಸಂದ ಅಮೂಲ್ಯಲಕ್ಷಣಭಂಡಾರ ಎಂಬರ್ಥದ ಗ್ರಂಥವಿದು. ಸಾಗರನಂದಿ ಇದರ ರಚನಾಕಾರ.
ಸಾಗರ ನಂದಿ- ಗ್ರಾಂಥಿಕ ವಿವರಗಳು
ನಂದಿನ್ ಎನ್ನುವುದು ಜೈನ ಅಥವಾ ಬೌದ್ಧ ವಾಂಶಿಕರನ್ನು ಸೂಚಿಸುತ್ತದೆ ಎಂಬ ಅನುಮಿತಿಗಳನ್ನು ಇತಿಹಾಸಕಾರರು ಮಾಡಿದ್ದಾರೆ. ಆದರೆ ಗ್ರಂಥವು ಶಿವನಸ್ತುತಿಯೊಂದಿಗೆ ಆರಂಭಗೊಳ್ಳುವುದನ್ನು ಗಮನಿಸಿದಾಗ ರಾಜವಂಶದಲ್ಲಿ ಜನಿಸಿದ ಕ್ಷತ್ರಿಯ ಪುರುಷ ಈ ಸಾಗರನಂದಿಯಾಗಿದ್ದಿರಬಹುದು ಎಂಬ ಅನುಮಾನ ಮೂಡುತ್ತದೆ. ನಂದಿ ವಂಶ ಅಥವಾ ನಂದಿನ್ ಎಂಬ ಬಿರುದುಳ್ಳ ವೀಸೀ ಮನೆತನದಲ್ಲಿ ಹುಟ್ಟಿದವ ಸಾಗರನಂದಿ. ಆದರೆ ಈತ ಇದ್ದ ನಿರ್ದಿಷ್ಟ ಪ್ರದೇಶ ಯಾವುದೆಂದು ತಿಳಿದುಬರುವುದಿಲ್ಲ. ಹಾಗಿದ್ದೂ ಉತ್ತರ ಭಾರತಕ್ಕೆ ಸಲ್ಲುವವನೆಂದೇ ಲಕ್ಷಣವಿವರಗಳಿಂದ ಅಂದಾಜಿಸಬಹುದು.
ನಾಟಕಲಕ್ಷಣರತ್ನಕೋಶದ ರಚನೆಯ ಕಾಲ ಹತ್ತು-ಹನ್ನೊಂದನೇ ಶತಮಾನದ ಆಸುಪಾಸಿನಲ್ಲಿ ಅಗಿರುವಂತಿದೆ. ಹಾಗೆಂದೇ ಅಭಿನವಗುಪ್ತನ ಅಭಿನವಭಾರತೀ ಮತ್ತು ಭೋಜರಾಜನ ಗ್ರಂಥ ಶೃಂಗಾರಪ್ರಕಾಶಕ್ಕೂ ನಾಟಕಲಕ್ಷಣರತ್ನಕೋಶಕ್ಕೂ ಹಲವು ಲಕ್ಷಣಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದು. ಅಂತೆಯೇ ಕೋಹಲೋಕ್ತವೆನ್ನಬಹುದಾದ ಅನೇಕ ಲಕ್ಷಣಗಳನ್ನು ಬರೆದಿದ್ದಾನೆ ಸಾಗರನಂದಿ. ಮಾತೃಗುಪ್ತ, ರಾಹುಲ, ಕಾತ್ಯಾಯನ, ನಖಕುಟ್ಟ, ಅಶ್ಮಕುಟ್ಟ, ಗರ್ಗ, ಬಾದರಾಯಣ, ಶಾತಕರ್ಣಿ, ಚಾರಾಯಣ, ಶ್ರೀಹರ್ಷ, ವಿಕ್ರಮ ಮೊದಲಾದ ಪೂರ್ವಸೂರಿ ಭರತಶಾಸ್ತ್ರಜ್ಞರನ್ನು ಕೂಡಾ ಹೇರಳವಾಗಿ ಉಲ್ಲೇಖಿಸಿದ್ದಾನೆ.
ನಾಟಕಲಕ್ಷಣರತ್ನಕೋಶ- ಗ್ರಂಥವೈಶಿಷ್ಟ್ಯ
ಸಂಧಿ-ಸಂಧ್ಯಂಗ- ಅವಸ್ಥಾಭೇದ-ಅರ್ಥಪ್ರಕೃತಿ ವಿವರಗಳು; ಭಾವ-ರಸ-ಅಲಂಕಾರ-ನಾಯಕ ನಾಯಿಕಾ ಗುಣನಿರೂಪಣ- ಸಾತ್ತ್ವತೀ, ಆರಭಟೀ, ಕೈಶಿಕೀ, ಭಾರತೀ ಎಂಬ ಚತುರ್ವೃತ್ತಿಗಳು, ದಶರೂಪಕಾದಿಭೇದಗಳು ಮೊದಲಾದ ರಂಗಭೂಮಿಗೆ ಸಂಬಂಧಿಸಿದ ನಾಟ್ಯಶಾಸ್ತ್ರೀಯ ವಿವರಗಳನ್ನು ಒಳಗೊಂಡಿದೆ ಈ ಕೃತಿ. ಈ ಲಕ್ಷಣ ವಿವರಗಳಿಗೆ ಉದಾಹರಣೆ ಅಥವಾ ವಿನಿಯೋಗ ಎಂಬಂತೆ ಸಾಗರನಂದಿಯು ನಾಟಕಲಕ್ಷಣರತ್ನಕೋಶವೆಂಬ ಗ್ರಂಥದಲ್ಲಿ ಉಲ್ಲೇಖಿಸಿದ ನಾಟಕಾದಿ ರಂಗಭೂಮಿಯ ರಚನೆಗಳ ಬಗ್ಗೆ ಒಂದು ಸಲ ದೃಷ್ಟಿ ಹಾಯಿಸುವುದಾದರೆ -ಕಾಳಿದಾಸನ ವಿಕ್ರಮೋರ್ವಶೀಯ, ಶಾಕುಂತಲಾ, ಭವಭೂತಿಯ ಉತ್ತರರಾಮಚರಿತ, ಮಾಲತೀಮಾಧವ, ಶ್ರೀಹರ್ಷನ ರತ್ನಾವಲೀ ಮತ್ತು ನಾಗಾನಂದ, ಭಾಸನ ಸ್ವಪ್ನವಾಸವದತ್ತ-ಚಾರುದತ್ತ, ವಿಶಾಖದತ್ತನ ಮುದ್ರಾರಾಕ್ಷಸ, ರಾಘವಾಭ್ಯುದಯ ಮತ್ತು ದೇವೀಚಂದ್ರಗುಪ್ತಮ್, ಶೂದ್ರಕನ ಮೃಚ್ಛಕಟಿಕ, ದಿಙಗನ ಕುಂದಮಾಲಾ, ರಾಜಶೇಖರನ ಕರ್ಪೂರಮಂಜರೀ, ವಿದ್ಧಶಾಲಭಂಜಿಕಾ, ಭಟ್ಟನಾರಾಯಣನ ವೇಣೀಸಂಹಾರ, ಮಾಯುರಾಜನ ಉದಾತ್ತರಾಘವ ಮತ್ತು ತಾಪಸವತ್ಸರಾಜ, ಸುಭಟ ಕವಿಯ ದೂತಾಂಗದ, ಯಶೋವರ್ಮನ ರಾಮಾಭ್ಯುದಯ. ಇಷ್ಟೇ ಅಲ್ಲ, ಉಪಾಹರಣ, ಊರ್ವಶೀಮರ್ದನ, ಕನಕಾವತೀಮಾಧವ, ಕಾಲವತೀ, ಕಾಮದತ್ತಾ, ಕೇಲಿರೈವತಕ, ಕ್ರೀಡಾರಸಾತಲ, ಕೃತ್ಯರಾವಣಮ್, ಕೀಚಕ ಭೀಮ, ಛಲಿತರಾಮ, ಜಾನಕೀರಾಘವ, ದೇವದತ್ತಕೃತಿ, ದೇವೀಮಹಾದೇವ, ನಲವಿಜಯ, ನರಕೋದ್ಧರಣ, ಪದ್ಮಾವತೀ ಪರಿಣಯ, ಪತ್ರಲೇಖ, ಪಾಲಚರಿತ, ಪ್ರ್ರಾಮೇಯಿ, ಪುಷ್ಪದೂಪಿತಕ, ಭಗವದಜ್ಜುಕೀಯ, ಭೀಮವಿಜಯ, ಮದನಮಂಜುಲಾ, ಮದನಿಕಾಕಾಮುಕ, ಮಾರೀಚವಂಚಿತಕ, ಮಾಯಾಕಾಪಾಲಿಕ, ಮಾಯಾಮದಾಲಸಾ, ರಂಭಾನಳಕುಬರ, ರಾಧಾ, ರಾಮವಿಕ್ರಮ, ರಾಮಾನಂದ, ರೇವತೀಪರಿಣಯ, ಲಲಿತ ನಾಗರ, ವಕುಲವೀಥೀ, ವಾಲೀವಧ, ವಿಂದುಮತಿ, ವಿಲಾಸವತೀ, ವೀಣಾವತೀ, ವೃತ್ರೋದ್ಧರಣ, ಶಕಾನಂದ, ಶರ್ಮಿಷ್ಠಾಪರಿಣಯ, ಶಶಿವಿಲಾಸ, ಶಶಿಕಾಮದತ್ತಾ, ಶೃಂಗಾರತಿಲಕಾ, ಸತ್ಯಭಾಮಾ ಎಂಬುದಾಗಿ ಪ್ರಾಚೀನ ಭಾರತ ರಂಗಭೂಮಿಯಲ್ಲಿ ಬಳಕೆಯಲ್ಲಿದ್ದ ಅನೇಕಾನೇಕ ರಚನೆಗಳನ್ನು ಲಕ್ಷಣಸಂಬಂಧಿಯಾಗಿ ಉಲ್ಲೇಖಿಸಿದ್ದಾನೆ.
ಇವುಗಳಲ್ಲಿ ನಾಟಕ, ಪ್ರಕರಣ, ಸಮವಕಾರ, ಈಹಾಮೃಗ, ವ್ಯಾಯೋಗ, ಪ್ರಹಸನ, ಡಿಮ, ಭಾಣ, ವೀಥೀ, ಅಂಕ ಎಂಬಿತ್ಯಾದಿ ದಶರೂಪಕಗಳಷ್ಟೇ ಅಲ್ಲದೆ ಉಪರೂಪಕ ಪ್ರಭೇದಗಳೂ ಇರುವುದು ತಿಳಿಯುತ್ತದೆ. ಈ ಉಪರೂಪಕಗಳು ಅಂದರೆ ಭರತನ ನಾಟ್ಯಶಾಸ್ತ್ರದ ಅನಂತರದ ಕಾಲದಲ್ಲಿ ದಶರೂಪಕವನ್ನೇ ಹೋಲುವ ಆದರೆ ಕಥಾವಸ್ತು ಮತ್ತು ಕೆಲವೊಂದು ಸನ್ನಿವೇಶಗಳಲ್ಲಿ ಭಿನ್ನವೆನಿಸಿಕೊಂಡವು. ಕೊಂಚ ಮಟ್ಟಿಗೆ ನೃತ್ಯಪ್ರಧಾನವಾಗಿದ್ದ ರಂಗಭೂಮಿಯ ರಚನೆಗಳು ಇವು. ಅಭಿನವಗುಪ್ತನ ಅಭಿನವಭಾರತೀ, ಭೋಜರಾಜನ ಶೃಂಗಾರಪ್ರಕಾಶ, ಹೇಮಚಂದ್ರನ ಕಾವ್ಯಾನುಶಾಸನ, ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣ, ಶಾರದಾತನಯನ ಭಾವಪ್ರಕಾಶ, ವಿಶ್ವನಾಥ ಕವಿರಾಜನ ಸಾಹಿತ್ಯದರ್ಪಣ ಕೂಡಾ ಇಂಥ ಉಪರೂಪಕಗಳ ವಿಚಾರವನ್ನು ಲಕ್ಷಣೀಕರಿಸಿದೆ. ಹೀಗೆ ಕಂಡುಬರುವ ಉಪರೂಪಕಗಳ ಪೈಕಿ ಉಲ್ಲೋಪ್ಯಕ, ಗೋಷ್ಠಿ, ಭಾಣೀ, ಭಾಣಿಕಾ, ತ್ರೋಟಕ, ಧುರ್ಮೀಲಿಕಾ, ರಾಸಕ, ನಾಟ್ಯರಾಸಕ, ಪ್ರಸ್ಥಾನ, ಪ್ರೇಕ್ಷಣಕ, ಶ್ರೀಗದಿತ, ಹಲ್ಲೀಸಕ, ಶಿಲ್ಪಕ, ಸಟ್ಟಕ, ಸಲ್ಲಾಪಕ ಮೊದಲಾದ ಅನೇಕ ಉಪರೂಪಕಗಳ ಲಕ್ಷಣಗಳನ್ನು ಗಮನಿಸುವುದಕ್ಕೆ ನಾಟಕಲಕ್ಷಣರತ್ನಕೋಶವು ಕೂಡಾ ಮಹತ್ತ್ವದ ಗ್ರಂಥ.
ಪರಾಮರ್ಶನ ಗ್ರಂಥಗಳು
Natakalakshanaratnakosha of Sagaranandin. 1972. Babulal Shukla Shastri (Ed). Chowkambha Sanskrit Series. https://archive.org/details/in.ernet.dli.2015.408248
Nataka Lakshan Ratna Kosha. 1974. Ed Siddheshwar Chattopadhyaya. Calcutta : Punthi Pusthak
Natyashastra with Abhinavabharati Commentary. 2012. Ed R S Nagar. Delhi : Parimal Publication
https://www.noopurabhramari.com/shaastraranga-episode-36-sagaranandi-natakalakshanaratnakosha/ index.php?title=Category:Art and Culture index.php?title=Category:Art and Culture
- ↑ ಶಾಸ್ತ್ರರಂಗ ಯೂಟ್ಯೂಬ್ ಸೀರಿಸ್ . ಭಾಗ ೩: ಉತ್ತರ/ಪಾಂಚಾಲೀ(Video series)-ಸಂಚಿಕೆ 37 @noopurabhramari1212