ಭಾವಭಟ್ಟ ಅಥವಾ ಅನುಪಸಿಂಹನ ಸಂಗೀತ ಗ್ರಂಥಗಳು: Difference between revisions

From enIKSwiki
Jump to navigation Jump to search
mNo edit summary
No edit summary
 
Line 37: Line 37:
A comparative study of some of the leading music, systems of the 15th, 16th, 17th and 18th Centuries. by V N Bhatakande. https://www.ibiblio.org/guruguha/MusicResearchLibrary/Books-English/BkE-BhatkhandeVN-ComparativeStudyLeadingMusicSystems-15to18C-0009.pdf  
A comparative study of some of the leading music, systems of the 15th, 16th, 17th and 18th Centuries. by V N Bhatakande. https://www.ibiblio.org/guruguha/MusicResearchLibrary/Books-English/BkE-BhatkhandeVN-ComparativeStudyLeadingMusicSystems-15to18C-0009.pdf  


ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ  ೪೫ : - <nowiki>https://www.youtube.com/channel/UCzsvThi5o-5X1-5kp7jaxVQ</nowiki> / @noopurabhramari1212[[index.php?title=Category:Art and Culture]]
ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ  ೪೫ : - @noopurabhramari1212[[index.php?title=Category:Art and Culture]]

Latest revision as of 11:41, 30 October 2024

Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1]

ಸಂಗೀತ ಕ್ಷೇತ್ರದ ರಂಜನೀಯವಾದ ಪ್ರಸ್ತುತಿ ಎಂಬ ಅರ್ಥದ ಸಂಗೀತವಿನೋದ, ಸಂಗೀತ ಕ್ಷೇತ್ರದ ಸವಿಲಾಸ, ಸಮುದ್ರ, ಪ್ರೌಢಿಮೆ ಎಂಬ ಅರ್ಥವುಳ್ಳ ಅನುಪ ಸಂಗೀತ ವಿಲಾಸ, ಅನುಪ ಸಂಗೀತ ರತ್ನಾಕರ ಮತ್ತು ಅನುಪ ಸಂಗೀತ ಅಂಕುಶ ಅಥವಾ ಅನುಪಂಕುಶ ಅಥವಾ ಭಾವಮಂಜರಿ ಎಂಬ ಹೆಸರಿನ ಗ್ರಂಥಗಳು ಭಾವಭಟ್ಟನದ್ದೆಂದು ಹೇಳಲಾಗುತ್ತದೆ. ಅಂತೆಯೇ ಭಾವಭಟ್ಟನ ಪೋಷಕನಾದ ರಾಜಸ್ಥಾನದ ಬಿಕಾನೇರ್‌ನ ರಾಜ ಅನುಪಸಿಂಹನ ಹೆಸರಿನಲ್ಲಿಯೂ ಈ ಗ್ರಂಥಗಳ ಕರ್ತೃತ್ವವನ್ನು ಸೂಚಿಸಲಾಗುತ್ತದೆ. 

ಈ ರೀತಿಯ ಚರ್ಯೆ ಲಕ್ಷಣಪ್ರಪಂಚದಲ್ಲೇನು ಹೊಸತಲ್ಲ. ಕಾರಣ, ಎಷ್ಟೋ ರಾಜರ ಸಾಂಸ್ಕೃತಿಕ- ಸಾಹಿತ್ಯಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಸ್ಮರಿಸುವಂತೆ ಅವರ ಹೆಸರಿನಲ್ಲಿ ವಿದ್ವಾಂಸರು ಗ್ರಂಥಗಳನ್ನು ಬರೆದವರಿದ್ದಾರೆ. ಪಂಡಿತಮಂಡಲಿಗಳೂ ಕೂಡಾ ಇದೇ ರೀತಿಯಾಗಿ ಕೆಲಸ ಮಾಡಿ ರಾಜರ ಹೆಸರಿನಲ್ಲಿ ಗ್ರಂಥಗಳನ್ನು ಅಂಕಿತಗೊಳಿಸಿದವರಿದ್ದಾರೆ. ಸ್ವತಃ ಅನುಪಸಿಂಹನೇ ಭಾವ ಭಟ್ಟನಿಗೆ ಅನೇಕ ಸಂಗೀತ ಕೃತಿಗಳನ್ನು ಬರೆಯಲು ಆದೇಶಿಸಿ ಮಾರ್ಗದರ್ಶಿಸಿದ್ದನಂತೆ. ಗೀತಗೋವಿಂದದ ವ್ಯಾಖ್ಯಾನ ಬರೆಯಲೂ ತಿಳಿಸಿದ್ದನಂತೆ. ಹಾಗಾಗಿ ಅನುಪಸಿಂಹನ ಹೆಸರಿನಲ್ಲಿ ಸಂಗೀತವಿನೋದವೇ ಮೊದಲಾದ ಗ್ರಂಥಗಳು ಕಂಡುಬಂದಿದ್ದರೆ ಅದು ಆಶ್ಚರ್ಯವಲ್ಲ. ಇದು ತನ್ನ ವಿದ್ಯೆಯನ್ನು ಪುರಸ್ಕರಿಸಿ ಆಶ್ರಯವನ್ನಿತ್ತ ಒಡೆಯನ ಕೃತಜ್ಞತಾ ಸಮರ್ಪಣೆಯ ರೀತಿಯೆಂದೇ ತರ್ಕಿಸಬಹುದು. ಹಾಗೆಂದೇ ಅನುಪಸಿಂಹನನ್ನು ಧಾರಾಳವಾಗಿ ಹೊಗಳಿದ್ದಾನೆ ಕೂಡಾ.

ಶ್ರೀಮದನೂಪಸಿಂಹಜ್ಞಾಯ ಗ್ರಂಥದ್ವಯಂ ಕೃತಮ್ || ಏಕೋಯನೂಪವಿಲಾಸಖ್ಯೋ ಅನುಪರತ್ನಾಕರಃ ಪರಃ | ಅನೂಪಾಂಕುಶನಾಮಯಂ ಗ್ರಂಥೋ ನಿಷ್ಪಾದ್ಯತೇಯಧುನಾ || ಹೇಳಿಕೊಂಡಿದ್ದಾನೆ.

ಇದರೊಂದಿಗೆ ಮುರಳಿಪ್ರಕಾಶ ಎಂಬ ಕೊಳಲಿಗೆ ಮೀಸಲಾದ ಕೃತಿ, ಧ್ರುಪದ್ ಗಾಯನದ ಕುರಿತಾದ ನಷ್ಟೋದ್ದಿಷ್ಟಪ್ರಬೋಧಕ ಶ್ರೌಪದಟಿಕಾ ಎಂಬ ಅನುಷ್ಟುಪ್ ಛಂದಸ್ಸಿನಲ್ಲಿರುವ ಗ್ರಂಥ ಹಾಗೂ ಧ್ರುವಪದ ತಿಲಕ ಎಂಬ ಗ್ರಂಥ ಭಾವಭಟ್ಟನ ರಚನೆಯಾಗಿತ್ತೆಂದು ತಿಳಿಯುತ್ತದೆ.

ಭಾವಭಟ್ಟ- ಜೀವನ, ಸಾಧನೆ

ಭಾವಭಟ್ಟನು ತಾನು ಅಭಿರದೇಶದಲ್ಲಿ ಧವಳ ಎಂಬ ಊರಿನವನೆಂದು, ಕೃಷ್ಣಾತ್ರ ಗೋತ್ರಕ್ಕೆ ಸೇರಿದ ಬ್ರಾಹ್ಮಣನೆಂದೂ ಹೇಳುತ್ತಾನೆ. ಭಾವಭಟ್ಟನ ತಾತ ತಾನಾ ಭಟ್ಟ ; ತಂದೆ ಜನಾರ್ದನ ಭಟ್ಟರು. ಮೊಘಲ್ ರಾಜ ಶಹಜಹಾನ್‌ನ ಆಸ್ಥಾನ-ಸಂಗೀತಗಾರರಾಗಿ ಜನಾರ್ದನ ಭಟ್ಟ ಸಂಗೀತರಾಯ ಎಂಬ ಹೆಸರಿನಿಂದ ಖ್ಯಾತರಾಗಿದ್ದರೆಂದೂ ತಿಳಿಯುತ್ತದೆ. ಭಾವಭಟ್ಟನು ಕೂಡಾ ಅನುಷ್ಟುಪ್ ಚಕ್ರವರ್ತಿ ಅಂದರೆ ಅನುಷ್ಟುಪ್ ಛಂದಸ್ಸಿನಲ್ಲಿ ಪ್ರಾವಣ್ಯವುಳ್ಳವ ಎಂಬ ಅರ್ಥದ ಬಿರುದನ್ನು ಘನಶ್ಯಾಮ ಪಂಡಿತ ಎಂಬುವರಿಂದ ಪಡೆದಿದ್ದ. ಅಂದರೆ ಭಾವಭಟ್ಟ ಸಂಗೀತಶಾಸ್ತ್ರದಲ್ಲಷ್ಟೇ ಅಲ್ಲದೆ ಅಲಂಕಾರ ಮತ್ತು ತರ್ಕ ಶಾಸ್ತ್ರಗಳಲ್ಲಿಯೂ ವಿದ್ವಾಂಸ, ಇತಿಹಾಸ ಪುರಾಣಗಳಲ್ಲಿ ವಿದ್ವತ್ತು ಇದ್ದ ಓರ್ವ ಕವಿ ಎನ್ನುವುದೂ ಗ್ರಂಥಗಳಿಂದ ತಿಳಿಯುತ್ತದೆ. ಜೊತೆಗೆ ತನ್ನ ತಂದೆಯಂತೆಯೇ ಸಂಗೀತರಾಯ ಎಂಬ ಬಿರುದಿನಿಂದ ಮಾನ್ಯವಾಗಿದ್ದ. ಹೀಗಾಗಿ ಷಹಜಹಾನ್ ಆಸ್ಥಾನದಲ್ಲಿದ್ದ ಭಾವಭಟ್ಟ ತದನಂತರದಲ್ಲಿ ಅನುಪಸಿಂಹನ ಆಸ್ಥಾನಕ್ಕೆ ತೆರಳಿದ್ದನ್ನೂ ಗುರುತಿಸಬಹುದು.

ಗ್ರಂಥ ಲಕ್ಷಣ ಮತ್ತು ಅಧ್ಯಾಯಗಳು

ಜಮ್ಮು ಮತ್ತು ಕಾಶ್ಮೀರದ ಮಹಾರಾಜರ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿರುವ ಅನುಪಂಕುಶ ಗ್ರಂಥದ ಹಸ್ತಪ್ರತಿಯು ಸ್ವರ ಮತ್ತು ರಾಗದ ಕುರಿತಾಗಿ ಎರಡು ಅಧ್ಯಾಯಗಳಲ್ಲಿದೆ. ರಾಗದ ಅಧ್ಯಾಯವನ್ನು ಆಲಾಪನ ಮಂಜರಿ ಎಂದು ಕರೆಯಲಾಗಿದೆ. ಅನುಪ ಸಂಗೀತಾ ರತ್ನಾಕರ ಗ್ರಂಥ ಕೂಡಾ ಸ್ವರ ಮತ್ತು ರಾಗಗಳ ಕುರಿತು ಎರಡು ಅಧ್ಯಾಯಗಳಲ್ಲಿದೆ. ಅನುಪ ಸಂಗೀತ ವಿಲಾಸವು ಶ್ರುತಿ, ಸ್ವರ ಮತ್ತು ರಾಗ ಎಂಬ ಮೂರು ಅಧ್ಯಾಯಗಳಲ್ಲಿದೆ. ಅಂತೆಯೇ ಆ ಕಾಲದ ದ್ರುಪದ್ ಸಂಗೀತದ ಹಲವು ಅಂಶಗಳನ್ನು ಭಾವಭಟ್ಟನ ಗ್ರಂಥಗಳಲ್ಲಿ ಗುರುತಿಸಬಹುದು. ಗೀತಗೋವಿಂದ ಕಾವ್ಯಕ್ಕೆ ಬರೆದ ಭಾವಭಟ್ಟನ ವ್ಯಾಖ್ಯೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜರ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ.

ಶಾರ್ಙ್ಗದೇವನ ಸಂಗೀತರತ್ನಾಕರವನ್ನು ಬಹುಮಟ್ಟಿಗೆ ಅನುಕರಿಸುವ ಭಾವಭಟ್ಟನ ಗ್ರಂಥಗಳಲ್ಲಿ ಸಂಗೀತ ಪಾರಿಜಾತ, ರಾಗಮಂಜರಿ, ರಾಗಮಾಲಾ, ಸಂಗೀತ ದರ್ಪಣ, ಸದ್ರಾಗಚಂದ್ರೋದಯ, ನರ್ತನನಿರ್ಣಯ, ಹೃದಯಪ್ರಕಾಶ, ರಾಗತತ್ತ್ವವಿಬೋಧ, ರಾಗ ಕುತೂಹಲ ಮತ್ತು ಸಂಕೀರ್ಣ ರಾಗಧ್ಯಾಯ ಎಂಬ ಅನೇಕ ಗ್ರಂಥಗಳಲ್ಲಿರುವ ನಾದ, ರಾಗ, ತಾನ, ಪ್ರಬಂಧ, ಮೂರ್ಛನ, ತಾಲದ ಲಕ್ಷಣಗಳನ್ನು ಗುರುತಿಸಬಹುದು. ಅದರಲ್ಲೂ ಭಾವಭಟ್ಟನ ಸಂಗೀತವಿನೋದ ಗ್ರಂಥವು ದಾಕ್ಷಿಣಾತ್ಯ ಗ್ರಂಥಗಳಾದ ಶಾರ್ಙ್ಗದೇವನ ಸಂಗೀತರತ್ನಾಕರ, ಪಂಡರೀಕವಿಠಲನ ನರ್ತನನಿರ್ಣಯ, ದೇವೇಂದ್ರ ಮತ್ತು ದೇವಣಭಟ್ಟರ ಹೆಸರಿನಲ್ಲಿರುವ ಸಂಗೀತಮುಕ್ತಾವಳಿ, ಚತುರ ದಾಮೋದರನ ಸಂಗೀತದರ್ಪಣ, ವೇದಸೂರಿಯ ಸಂಗೀತಮಕರಂದ ಮುಂತಾದ ದಾಕ್ಷಿಣಾತ್ಯ ಗ್ರಂಥಗಳು ತಿಳಿಸುವ ಕೆಲವು ಲಕ್ಷಣಗಳನ್ನೂ ಹೇಳಿದೆ. ಆ ಪೈಕಿ ಅಭಿನಯ ಹಾಗೂ ನೃತ್ತ ಹಸ್ತಾಭಿನಯಗಳು, ತಿರುಗುವ ಚಲನೆಗಳುಳ್ಳ ಲಾಗಗಳು ಹಾಗೂ ಲಾಸ್ಯಾಂಗಗಳು ಮುಖ್ಯವಾದವು. ಆದರೆ ಅವುಗಳನ್ನು ಹಿಂದಿಗೆ ಹತ್ತಿರವಾದ ಪರಿಭಾಷೆಗಳಿಂದ ಹೆಸರಿಸುತ್ತದೆ. ಅಂತೆಯೇ ಧುವಾಡ ಎಂಬ ಭ್ರಮರಿಯುತವಾದ ನೃತ್ಯವನ್ನು ಭೌರಿ ಎಂಬ ಹೆಸರಿನಿಂದ ಪ್ರತ್ಯೇಕವಾಗಿ ಗುರುತಿಸಿ ಅದರ ವಿವಿಧ ಚಲನೆಗಳನ್ನೂ ತಿಳಿಸಿದೆ.[2] ಇದರಿಂದ ದಾಕ್ಷಿಣಾತ್ಯದ ಎಷ್ಟೋ ಪರಿಭಾಷೆಗಳು ಮತ್ತು ಲಕ್ಷ್ಯ ಲಕ್ಷಣಗಳು ಉತ್ತರದಲ್ಲೂ ಸಮಾನವಾದ ಬರೆವಣಿಗೆಗಳನ್ನು ಕಂಡುಕೊಂಡಿತ್ತು ಎನ್ನುವುದು ತಿಳಿಯುತ್ತದೆ.

ಸಮಾಪನ

ಭಾವಭಟ್ಟನ ಗ್ರಂಥಗಳಲ್ಲಿ ದಾಕ್ಷಿಣಾತ್ಯ ಗ್ರಂಥಗಳ ಪ್ರಭಾವ, ಪರಿಣಾಮ, ಪ್ರಸಿದ್ಧಿಗಳನ್ನೂ ಮನಗಾಣಬಹುದು. ಒಟ್ಟಿನಲ್ಲಿ ಪ್ರದೇಶಗಳು ಬೇರೆ ಬೇರೆಯಿರಬಹುದು. ಪರಂಪರೆಗಳು ಸಾವಿರವಿರಬಹುದು ಆದರೆ ಭಾರತದ ನಾಡಿ ಒಂದೇ, ನೀತಿ ಒಂದೇ, ಸತ್ಯ ಒಂದೇ, ಅಂತರಂಗ ಒಂದೇ ಎನ್ನುವುದು ಯಾವುದೇ ಕಾಲವಿರಲಿ, ಮನವರಿಕೆಯಾಗುತ್ತದೆ.

ಭಾವಭಟ್ಟನ ಕೃತಿಗಳ ಹಸ್ತಪ್ರತಿಗಳು ಬಿಕಾನೇರ್, ಕಲ್ಕತ್ತಾ ಏಷ್ಯಾಟಿಕ್ ಸೊಸೈಟಿ, ಪೂನಾ ಭಂಡಾರ್ಕರ್ ಸಂಸ್ಥೆಯ ಗ್ರಂಥಾಲಯಗಳಲ್ಲಿವೆ. ಆದರೆ ಇವುಗಳು ಪ್ರಕಟಿತ ರೂಪಕ್ಕೆ ಇನ್ನೂ ಸಮಗ್ರವಾಗಿ ಬಂದಿಲ್ಲ ಎನ್ನುವುದು ಬೇಸರದ ಸಂಗತಿ. ಇಷ್ಟೇ ಅಲ್ಲ., ಇಂಥ ಅಭಾಗ್ಯ ರಾಗ, ತಾಳ, ವಾದ್ಯ, ನೃತ್ಯಗಳ ಬಗ್ಗೆ ಬರೆದ ನೂರಾರು ಪ್ರಾಚೀನ ಗ್ರಂಥಗಳದ್ದು ಕೂಡಾ.

ಪರಾಮರ್ಶನ ಗ್ರಂಥಗಳು

Sangita Ratnakara . Vol 1. Chapter 1 https://archive.org/details/SangitaRatnakara http://musicresearchlibrary.net/omeka/items/show/1901 https://archive.org/details/sangitaratnakaraofsankasangaradevashringyr.k.vol1mlbd

Later sangita literature : Raghavan, V. https://archive.org/details/dli.ministry.16048

Anupasimha, “Sangitavinoda of Anupasimha 1 - SVUORI-7545,” MusicResearchLibrary, accessed August 14, 2024, http://musicresearchlibrary.net/omeka/items/show/1218 http://musicresearchlibrary.net/omeka/items/show/1219

Bhava Bhatta, “AnupasangItavilasa of Bhava Bhatta - 1921,” MusicResearchLibrary, accessed August 14, 2024, http://musicresearchlibrary.net/omeka/items/show/2721

Bhava Bhatta, “Anupasangitaratnakara of Bhava Bhatta - 1919,” MusicResearchLibrary, accessed August 14, 2024, http://musicresearchlibrary.net/omeka/items/show/2720

A comparative study of some of the leading music, systems of the 15th, 16th, 17th and 18th Centuries. by V N Bhatakande. https://www.ibiblio.org/guruguha/MusicResearchLibrary/Books-English/BkE-BhatkhandeVN-ComparativeStudyLeadingMusicSystems-15to18C-0009.pdf

ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೫ : - @noopurabhramari1212index.php?title=Category:Art and Culture

  1. ↑ ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ; ಸಂಚಿಕೆ ೪೫- ಭಾವಭಟ್ಟನ ಸಂಗೀತವಿನೋದ& ಇತರ ಗ್ರಂಥಗಳು https://www.noopurabhramari.com/shaastraranga-45-bhavabhatta-sangita-vinoda-and-other-musical-texts-of-western-regions-of-ancient-india/
  2. ↑ ಈ ರೀತಿಯಾದ ಆಂಗಿಕಾಭಿನಯ, ನೃತ್ಯವಿಶೇಷಗಳ ಕುರಿತ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/want-to-subscribe-noopura-bhramari-and-purchase-the-dance-books/