ಕೊಡಗಿನ ಹುತ್ತರಿ ಸುಗ್ಗಿ: Difference between revisions

From enIKSwiki
Jump to navigation Jump to search
mNo edit summary
mNo edit summary
 
(2 intermediate revisions by the same user not shown)
Line 1: Line 1:

Authored by ಡಾ.ಮನೋರಮಾ ಬಿ.ಎನ್.  
Authored by ಡಾ.ಮನೋರಮಾ ಬಿ.ಎನ್.  
Published by  [https://www.noopurabhramari.com/huttarisuggihosatinahuggi/ ನೂಪುರಭ್ರಮರಿ], ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ.   
Published by  [https://www.noopurabhramari.com/huttarisuggihosatinahuggi/ ನೂಪುರಭ್ರಮರಿ], ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ.<ref>( ಈ ಲೇಖನದ ಕೆಲವು ಭಾಗಗಳು ವಿಜಯಕರ್ನಾಟಕ ಪತ್ರಿಕೆಯ ಬೋಧಿವೃಕ್ಷದಲ್ಲಿ  2016 ನವೆಂಬರ್ ಮತ್ತು 2017 ರ ಡಿಸೆಂಬರ್ 7ರಂದು ಪ್ರಕಟವಾಗಿದೆ.)https://www.noopurabhramari.com/huttarisuggihosatinahuggi/</ref>  

ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಮನ್ನಣೆ ಪಡೆದ ಕೊಡಗಿನ ಪ್ರಮುಖ ಹಬ್ಬವೇ ಹುತ್ತರಿ.ಕೊಡಗಿನ ನೆಲದಲ್ಲಿ ಸುಗ್ಗಿಯನ್ನು ಆಚರಿಸುವ ಹಬ್ಬವಿದು.  ಅಂತೆಯೇ ಇದು ಕೊಡವರ ಹಬ್ಬವೂ ಹೌದು. ಕೊಡವಮನೆತನದವರಿಗಂತೂ ಹುತ್ತರಿಯೇ ಯುಗಾದಿ. ಹುತ್ತರಿಯೇ ದೀಪಾವಳಿ. ಕೊಡವರಿಗೆ ಹುತ್ತರಿಯೇ ಹಬ್ಬಗಳ ರಾಜ.  ಕಾರ್ತಿಕಪೌರ್ಣಿಮೆಯ ರೋಹಿಣೀ ನಕ್ಷತ್ರದ ದಿನ ( ನವೆಂಬರ್ ತಿಂಗಳು) ಈ ಹಬ್ಬದ ಆಚರಣೆಯಾಗುತ್ತದೆ. ಅಂದು ಕೊಡಗಿನಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರಿಗೆ ವಿಶೇಷ ರಜೆಯನ್ನು ನೀಡಲಾಗುತ್ತದೆ.   
ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಮನ್ನಣೆ ಪಡೆದ ಕೊಡಗಿನ ಪ್ರಮುಖ ಹಬ್ಬವೇ ಹುತ್ತರಿ.ಕೊಡಗಿನ ನೆಲದಲ್ಲಿ ಸುಗ್ಗಿಯನ್ನು ಆಚರಿಸುವ ಹಬ್ಬವಿದು.  ಅಂತೆಯೇ ಇದು ಕೊಡವರ ಹಬ್ಬವೂ ಹೌದು. ಕೊಡವಮನೆತನದವರಿಗಂತೂ ಹುತ್ತರಿಯೇ ಯುಗಾದಿ. ಹುತ್ತರಿಯೇ ದೀಪಾವಳಿ. ಕೊಡವರಿಗೆ ಹುತ್ತರಿಯೇ ಹಬ್ಬಗಳ ರಾಜ. ಮಳೆಗಾಲದಲ್ಲಿ ನಾಟಿ ಮುಗಿಸಿದ ಸಂತೋಷದಲ್ಲಿ ಕೈಲ್ ಮುಹೂರ್ತವನ್ನು ಆಚರಿಸಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಬೆಳೆ ಕಟಾವು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಅಂದರೆ ಕಾರ್ತಿಕಪೌರ್ಣಿಮೆಯ ಕೃತ್ತಿಕೆ- ರೋಹಿಣೀ ನಕ್ಷತ್ರದ ದಿನ ( ನವೆಂಬರ್ ತಿಂಗಳು) ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಕೊಡಗಿನಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರಿಗೆ ವಿಶೇಷ ರಜೆಯನ್ನು ನೀಡಲಾಗುತ್ತದೆ.   

== ಹಬ್ಬದ ವಿಧಿವಿಧಾನಗಳು ==
== ಹಬ್ಬದ ವಿಧಿವಿಧಾನಗಳು ==
ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ- ಪುತ್ತರಿ. ಕನ್ನಡದಲ್ಲಿ ಹುತ್ತರಿ. ಹೊಸ ಅಕ್ಕಿಯ (ಪುದಿಯ ಅರಿ) ಜೊತೆಗೆ ಬೆರೆಯುವುದೇ ಹುತ್ತರಿ. ಇಂಥ ಸುಗ್ಗಿಯನ್ನು ಹುಗ್ಗಿಯಾಗಿಸಲು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ.  ಮನೆಗೆ ಸುಣ್ಣ-ಬಣ್ಣ ಬಳಿದು ಸುಗ್ಗಿಯನ್ನು ಹುಗ್ಗಿಯಾಗಿಸಿ ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿರುತ್ತಾರೆ. ಮನೆಯ ಅಂಗಣ, ಕೊಟ್ಟಿಗೆ, ಕಣಗಳನ್ನು ಸಾರಿಸಿ ಸ್ವಚ್ಛಗೊಳಿಸುತ್ತಾರೆ.  
ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ- ಪುತ್ತರಿ. ಕನ್ನಡದಲ್ಲಿ ಹುತ್ತರಿ. ಹೊಸ ಅಕ್ಕಿಯ (ಪುದಿಯ ಅರಿ) ಜೊತೆಗೆ ಬೆರೆಯುವುದೇ ಹುತ್ತರಿ. ಇಂಥ ಸುಗ್ಗಿಯನ್ನು ಹುಗ್ಗಿಯಾಗಿಸಲು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ.  ಮನೆಗೆ ಸುಣ್ಣ-ಬಣ್ಣ ಬಳಿದು ಸುಗ್ಗಿಯನ್ನು ಹುಗ್ಗಿಯಾಗಿಸಿ ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿರುತ್ತಾರೆ. ಮನೆಯ ಅಂಗಣ, ಕೊಟ್ಟಿಗೆ, ಕಣಗಳನ್ನು ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಅಕ್ಕಿ ಹುರಿದು ಹಿಟ್ಟು ತಯಾರಿಸಿಕೊಳ್ಳುತ್ತಾರೆ.  

ಬಂಧು-ಬಾಂಧವ ಊರವರೊಂದಿಗೆ ಹುತ್ತರಿಯ ಆಚರಣೆಯಿರುತ್ತದೆ. ಕುಟುಂಬದ ಪ್ರತಿಸದಸ್ಯನೂ ಹುತ್ತರಿ ಹಬ್ಬಕ್ಕೆ "ಐನ್ ಮನೆ"(ಕುಟುಂಬದ ಹಿರಿಮನೆ)ಗೆ ಬಂದೇ ಬರಬೇಕು; ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ! ಎಲ್ಲರೂ ಸೇರಿದಾಗ ರೋಹಿಣೀ ನಕ್ಷತ್ರದ ರಾತ್ರೆ ಅಂದರೆ ಹುತ್ತರಿಯ ದಿನ ಮನೆಯ ‘ನೆಲ್ಲಕ್ಕಿ’ ನಡುಬಾಡೆ (ಮನೆಯ ನಡುವಿನ ಕೋಣೆ)ಯಲ್ಲಿ ’ತೂಕ್ ಬೊಳಕ್’ ಲಕ್ಷ್ಮೀ ತೂಗುದೀಪ (ಕಾವೇರಿ ದೀಪ) ತೂಗುತ್ತದೆ. ಅದರ ಮುಂದೆ ಪ್ರಾರ್ಥನೆ ಮಾಡುತ್ತಾರೆ.  ಕೆಳಗೆ ಹಾಸಿದ ಚಾಪೆಯಲ್ಲಿ ಹುತ್ತರಿ ಕುಕ್ಕೆ. ಅದರೊಳಗೆ ಮಾವಿನೆಲೆ, ಅಶ್ವತ್ಥ, ಅತ್ತಿ, ಆಲ, ಇಟ್ಟುಗ ಅಥವಾ ಹಲಸು, ಕುಂಬಳಿ, ಕಾಡು ಗೇರುಮರದ ಎಲೆಗಳ ಪಂಚ ಪತ್ರೆಯನ್ನು ದಡ್ಡಾಲ ಮರದ ಬಳ್ಳಿಯಲ್ಲಿ ಪುತ್ತರಿನಾರೆಂದು ಕಟ್ಟಿದ ‘ನೆರೆಕಟ್ಟು’. ಹೊಸಕ್ಕಿಯನುಂಡು ಹೊಸತಾಗುವ ಕಾಲವದು. ಹುತ್ತರಿಯ ಊಟಕ್ಕೆ ಹೊಸ ಅಕ್ಕಿಯನ್ನು ಸ್ವಲ್ಪವಾದರೂ ಸೇರಿಸಲೇಬೇಕು ಎಂಬ ಕಟ್ಟಳೆಯಿದೆ. ಹಾಗಾಗಿಯೇ  ಅಚ್ಚೇರಿ/ಕುಕ್ಕೆಯ ತುಂಬಾ ಹಳೆಯ ಭತ್ತವನ್ನೂ ಅದರ ಮೇಲೆ ಸೇರಿನ ಅರ್ಧಕ್ಕೆ ಅಕ್ಕಿ ತುಂಬಿ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡಲಾಗುತ್ತದೆ. ಇದಕ್ಕೆ ’ತಳಿಯತಕ್ಕಿ ಬೊಳಕ್ ’ ಎನ್ನುವರು. ’ಕುತ್ತಿ’ ಎಂಬುದರಲ್ಲಿ  ಒಂದಷ್ಟು ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು, ತಂಬಿಟ್ಟು ಮುಂತಾದ ಫಲವಸ್ತುಗಳು. ಕುಡುಗೋಲು, ಮಣ್ಣಿನ ಸಣ್ಣ ಕುಡಿಕೆಯಲ್ಲಿ ( ಪುತ್ತರಿ ಕುಡಿಕೆ) ಹುರಿದಕ್ಕಿಯ ಹಿಟ್ಟನ್ನೂ ತುಂಬಿಸಿಡುತ್ತಾರೆ.  ’ನೆರೆ ಕಟ್ಟಿದ’ ಮೇಲೆ ಪೀರಕೆಯನ್ನು ಅಡ್ಡಕ್ಕೆ ಕತ್ತರಿಸಿ ಅದನ್ನು ಈ ಹಿಟ್ಟಿನಲ್ಲಿ ಅದ್ದಿ ಕುಡುಗೋಲು, ಕುತ್ತಿ, ಸೇರು, ಕುಕ್ಕೆ, ಕುಡಿಕೆ ಮತ್ತು ಮನೆಯ ಕಿಟಕಿ ಬಾಗಿಲುಗಳಿಗೆ ತಗಿಸಿ ಮುದ್ರೆಯಂತೆ ಒತ್ತುತ್ತಾರೆ. ಇವುಗಳ ಪಾರುಪತ್ಯವೆಲ್ಲವೂ ಮನೆಯ ಯಜಮಾನನದ್ದೇ.  
ಬಂಧು-ಬಾಂಧವ ಊರವರೊಂದಿಗೆ ಹುತ್ತರಿಯ ಆಚರಣೆಯಿರುತ್ತದೆ. ಕುಟುಂಬದ ಪ್ರತಿಸದಸ್ಯನೂ ಹುತ್ತರಿ ಹಬ್ಬಕ್ಕೆ "ಐನ್ ಮನೆ" ಗೆ (ಕುಟುಂಬದ ಹಿರಿಮನೆ) ಬಂದೇ ಬರಬೇಕು; ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ! ಎಲ್ಲರೂ ಸೇರಿದಾಗ ರೋಹಿಣೀ ನಕ್ಷತ್ರದ ರಾತ್ರೆ ಅಂದರೆ ಹುತ್ತರಿಯ ದಿನ ಮನೆಯ ‘ನೆಲ್ಲಕ್ಕಿ’ ನಡುಬಾಡೆ (ಮನೆಯ ನಡುವಿನ ಕೋಣೆ)ಯಲ್ಲಿ ’ತೂಕ್ ಬೊಳಕ್’ ಲಕ್ಷ್ಮೀ ತೂಗುದೀಪ (ಕಾವೇರಿ ದೀಪ) ತೂಗುತ್ತದೆ. ಅದರ ಮುಂದೆ ಪ್ರಾರ್ಥನೆ ಮಾಡುತ್ತಾರೆ.  ಕೆಳಗೆ ಹಾಸಿದ ಚಾಪೆಯಲ್ಲಿ ಹುತ್ತರಿ ಕುಕ್ಕೆ. ಅದರೊಳಗೆ ಮಾವಿನೆಲೆ, ಅಶ್ವತ್ಥ, ಅತ್ತಿ, ಆಲ, ಇಟ್ಟುಗ ಅಥವಾ ಹಲಸು, ಕುಂಬಳಿ, ಕಾಡು ಗೇರುಮರದ ಎಲೆಗಳ ಪಂಚ ಪತ್ರೆಯನ್ನು ದಡ್ಡಾಲ ಮರದ ಬಳ್ಳಿಯಲ್ಲಿ ಪುತ್ತರಿನಾರೆಂದು ಕಟ್ಟಿದ ‘ನೆರೆಕಟ್ಟು’. ಹೊಸಕ್ಕಿಯನುಂಡು ಹೊಸತಾಗುವ ಕಾಲವದು. ಹುತ್ತರಿಯ ಊಟಕ್ಕೆ ಹೊಸ ಅಕ್ಕಿಯನ್ನು ಸ್ವಲ್ಪವಾದರೂ ಸೇರಿಸಲೇಬೇಕು ಎಂಬ ಕಟ್ಟಳೆಯಿದೆ. ಹಾಗಾಗಿಯೇ  ಅಚ್ಚೇರಿ/ಕುಕ್ಕೆಯ ತುಂಬಾ ಹಳೆಯ ಭತ್ತವನ್ನೂ ಅದರ ಮೇಲೆ ಸೇರಿನ ಅರ್ಧಕ್ಕೆ ಅಕ್ಕಿ ತುಂಬಿ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡಲಾಗುತ್ತದೆ. ಇದಕ್ಕೆ ’ತಳಿಯತಕ್ಕಿ ಬೊಳಕ್ ’ ಎನ್ನುವರು. ’ಕುತ್ತಿ’ ಎಂಬುದರಲ್ಲಿ  ಒಂದಷ್ಟು ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು, ತಂಬಿಟ್ಟು ಮುಂತಾದ ಫಲವಸ್ತುಗಳು. ಕುಡುಗೋಲು, ಮಣ್ಣಿನ ಸಣ್ಣ ಕುಡಿಕೆಯಲ್ಲಿ ( ಪುತ್ತರಿ ಕುಡಿಕೆ) ಹುರಿದಕ್ಕಿಯ ಹಿಟ್ಟನ್ನೂ ತುಂಬಿಸಿಡುತ್ತಾರೆ.  ’ನೆರೆ ಕಟ್ಟಿದ’ ಮೇಲೆ ಪೀರಕೆಯನ್ನು ಅಡ್ಡಕ್ಕೆ ಕತ್ತರಿಸಿ ಅದನ್ನು ಈ ಹಿಟ್ಟಿನಲ್ಲಿ ಅದ್ದಿ ಕುಡುಗೋಲು, ಕುತ್ತಿ, ಸೇರು, ಕುಕ್ಕೆ, ಕುಡಿಕೆ ಮತ್ತು ಮನೆಯ ಕಿಟಕಿ ಬಾಗಿಲುಗಳಿಗೆ ತಗಿಸಿ ಮುದ್ರೆಯಂತೆ ಒತ್ತುತ್ತಾರೆ. ಇವುಗಳ ಪಾರುಪತ್ಯವೆಲ್ಲವೂ ಮನೆಯ ಯಜಮಾನನದ್ದೇ.  

== ಪೂಜೆಯ ಕ್ರಮ ==
== ಪೂಜೆಯ ಕ್ರಮ ==
ಕೊಡವನಾಡಿಗೆ ಅನ್ನ(ಇಗ್ಗು) ಕೊಡುವ (ತಪ್ಪ) ದೇವರು ಪಾಡಿಯ ಇಗ್ಗುತ್ತಪ್ಪ. ಈತ ಉದ್ಭವ ಲಿಂಗದ ರೂಪದಲ್ಲಿರುವ  ಸುಬ್ರಹ್ಮಣ್ಯ ಸ್ವಾಮಿಯೇ ಆಗಿದ್ದಾನೆ. ಹುತ್ತರಿಯ ಮೊದಲ ದಿನ ‘ಪಾಡಿ ಪೊಳ್ದ್’ ಅಥವಾ ’ದೇವ ಪೊಳ್ದ್’- ಇಗ್ಗುತಪ್ಪ ಅಂದರೆ ಸುಬ್ರಹ್ಮಣ್ಯ ದೇವರಿಗೆ ಮೀಸಲು. ಪಾಡಿಯ ದೇವಸ್ಥಾನದ ಗದ್ದೆಯಿಂದ ಕದಿರು ತಂದು ಅನ್ನದೈವ ಸುಬ್ರಹ್ಮಣ್ಯನಿಗೆ ಸಮರ್ಪಿಸಲಾಗುತ್ತದೆ.  ಇದಲ್ಲದೆ ಕೊಡಗಿನ ಇನ್ನಿತರ ಊರಿನ ದೇವಸ್ಥಾನಗಳಲ್ಲೂ ಈ ಹುತ್ತರಿಯ ಕ್ರಮಗಳು ಜರುಗುತ್ತವೆ. ಆಯಾ ದೇವಸ್ಥಾನದಲ್ಲಿ ಪೂಜೆ ಮಾಡಿ ದೇವರಿಗೆ ಪ್ರಾರ್ಥ ನೆ ಮಾಡಿಕೊಂಡು ಬ್ರಾಹ್ಮಣ ಅರ್ಚಕರು ತೀರ್ಥ ಪ್ರಸಾದ ಗಂಧಗಳನ್ನು ಜನರಿಗೆ ವಿತರಿಸುತ್ತಾರೆ.<ref name=":0" />  ಊರಿನವರು ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಾಳೆಹಣ್ಣು ಮೊದಲಾದವನ್ನು ಬ್ರಾಹ್ಮಣರಿಗೆ ಕಾಣಿಕೆಯಾಗಿ ಕೊಡುತ್ತಾರೆ.   
[[File:ಹುತ್ತರಿ ಹಬ್ಬದ ಕದಿರು ತೆಗೆದ ಸಂಭ್ರಮ.jpg|thumb|ಹುತ್ತರಿ ಹಬ್ಬದ ಕದಿರು ತೆಗೆದ ಸಂಭ್ರಮ]]
ಕೊಡವನಾಡಿಗೆ ಅನ್ನ(ಇಗ್ಗು) ಕೊಡುವ (ತಪ್ಪ) ದೇವರು ಪಾಡಿಯ ಇಗ್ಗುತ್ತಪ್ಪ. ಈತ ಉದ್ಭವ ಲಿಂಗದ ರೂಪದಲ್ಲಿರುವ  ಸುಬ್ರಹ್ಮಣ್ಯ ಸ್ವಾಮಿಯೇ ಆಗಿದ್ದಾನೆ. ಹುತ್ತರಿಯ ಮೊದಲ ದಿನ ‘ಪಾಡಿ ಪೊಳ್ದ್’ ಅಥವಾ ’ದೇವ ಪೊಳ್ದ್’- ಇಗ್ಗುತಪ್ಪ ಅಂದರೆ ಸುಬ್ರಹ್ಮಣ್ಯ ದೇವರಿಗೆ ಮೀಸಲು. ಪಾಡಿಯ ದೇವಸ್ಥಾನದ ಗದ್ದೆಯಿಂದ ಕದಿರು ತಂದು ಅನ್ನದೈವ ಸುಬ್ರಹ್ಮಣ್ಯನಿಗೆ ಸಮರ್ಪಿಸಲಾಗುತ್ತದೆ.  ಇದಲ್ಲದೆ ಕೊಡಗಿನ ಇನ್ನಿತರ ಊರಿನ ದೇವಸ್ಥಾನಗಳಲ್ಲೂ ಈ ಹುತ್ತರಿಯ ಕ್ರಮಗಳು ಜರುಗುತ್ತವೆ. ಆಯಾ ದೇವಸ್ಥಾನದಲ್ಲಿ ಪೂಜೆ ಮಾಡಿ ದೇವರಿಗೆ ಪ್ರಾರ್ಥ ನೆ ಮಾಡಿಕೊಂಡು ಬ್ರಾಹ್ಮಣ ಅರ್ಚಕರು ತೀರ್ಥ ಪ್ರಸಾದ ಗಂಧಗಳನ್ನು ಜನರಿಗೆ ವಿತರಿಸುತ್ತಾರೆ.<ref name=":0">https://www.facebook.com/100000332230718/videos/2076335215720866/<nowiki/>ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಬಿ.ಜಿ. ನಾರಾಯಣ ಭಟ್ಟರು ಮಾಡಿದ ಪ್ರಾರ್ಥನೆ. (2018 ನವೆಂಬರ್ ಹುತ್ತರಿ ಕಾರ್ತಿಕ ಪೌರ್ಣಮಿ ದಿನ)
 
</ref>  ಊರಿನವರು ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಾಳೆಹಣ್ಣು ಮೊದಲಾದವನ್ನು ಬ್ರಾಹ್ಮಣರಿಗೆ ಕಾಣಿಕೆಯಾಗಿ ಕೊಡುತ್ತಾರೆ.   

ಕೊಡಗು ಅರಸರ ಕಾಲದಲ್ಲಿ ಅರಮನೆಯಲ್ಲೂ ಈ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದನ್ನು”ಅರಮನೆಯ ಪೊಳ್ದು’ ಎನ್ನುತ್ತಿದ್ದರು. ಅರಮನೆ ಪೊಳ್ದು ಕಳೆದ ಬಳಿಕ ಊರ ಜನ ಹಬ್ಬ ಮಾಡುತ್ತಿದ್ದರು. ಈಗ ಈ ರಿವಾಜು ಇಲ್ಲ.   

ಎರಡನೇ ದಿನ ‘ನಾಡ್ ಪೊಳ್ದ್’- ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ಹಬ್ಬದ ದಿನದಂದು ’ತೂಕ್ ಬೊಳಕ್’  ಮುಂದೆ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಅದಾಗಿ ಹೊಸ ಕದಿರನ್ನು ತರು ಬೇಡಿಕೊಳ್ಳುತ್ತಾರೆ. ಕುಕ್ಕೆ, ದೀಪ, ಚಾಪೆ ಕೋವಿ ಮೊದಲಾದವನ್ನೆಲ್ಲಾ ತೆಗೆದುಕೊಂಡು ಸ್ತ್ರೀ ಪುರುಷರೆಲ್ಲರೂ ಗದ್ದೆಗೆ ಹೋಗಿ  ಭೂತಾಯಿಗೆ ನಮಿಸುತ್ತಾರೆ. ಕದಿರಿನ ಬುಡ ಲಕ್ಷ್ಮೀಸ್ಥಾನ. ಅದಕ್ಕೂ ಪ್ರಾರ್ಥನೆ ಮಾಡಿ ಹಣ್ಣುಕಾಯಿಗಳನ್ನರ್ಪಿಸಿ ಹಾಲುಜೇನು ಸುರಿದು ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಿ ‘ಪೊಲಿ ಪೊಲಿಯೇ ದೇವಾ’ ಎಂದೆಲ್ಲಾ ದೊಡ್ಡಾಗಿ ಕೂಗುತ್ತಾ ಪ್ರಾರ್ಥಿಸಿ ಪಾಡ್ದನಗಳನ್ನು ಹಾಡುತ್ತಾರೆ. ಪೊಲಿ ಎಂದರೆ ಹೆಚ್ಚಾಗು ಎಂದರ್ಥ. ಹೀಗೆ ಇಗ್ಗುತಪ್ಪನನ್ನು ನೆನೆಯುತ್ತಾ, ಸಂಪತ್ತಿನ ಆಶಯದ ಪಾಡ್ದನಗಳನ್ನು ಹಾಡುತ್ತಾ, ದುಡಿ ಬಾರಿಸುತ್ತಾ ಕದಿರನ್ನು  ಕುತ್ತಿಯಿಂದ ಕೊಯ್ಯುತ್ತಾರೆ.  ಕೂಡಲೇ ಕೋವಿಯನ್ನು ಹಿಡಿದುಕೊಂಡಿವವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುತ್ತಾನೆ.  ಮನೆಗೆ ಬರುವ ದಾರಿಯಲ್ಲಿ ”ಕಾರಣ’ ರೆಂದು ನಂಬಿಕೊಂಡು ಬರಲಾಗುವ ಪೂರ್ವಜರನ್ನು ನೆನಪಿಸುವ ಸಾಂಕೇತಿಕ ಗುಡಿ-”ಕೈಮಡ’ ದ ಬಾಗಿಲಿಗೆ ಕದಿರನ್ನು ಕಟ್ಟಲಾಗುತ್ತದೆ.   
ಎರಡನೇ ದಿನ ‘ನಾಡ್ ಪೊಳ್ದ್’- ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ಶುದ್ಧವಾಗಿರುವ ಬಿಳಿ ಕುಪ್ಪಸದಟ್ಟಿ ತೊಟ್ಟ ಹಿರಿಯ ವ್ಯಕ್ತಿಯು ಹಬ್ಬದ ದಿನದಂದು ’ತೂಕ್ ಬೊಳಕ್’  ಮುಂದೆ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಅದಾಗಿ ಹೊಸ ಕದಿರನ್ನು ತರು ಬೇಡಿಕೊಳ್ಳುತ್ತಾರೆ. ಕುಕ್ಕೆ, ದೀಪ, ಚಾಪೆ ಕೋವಿ ಮೊದಲಾದವನ್ನೆಲ್ಲಾ ತೆಗೆದುಕೊಂಡು ಸ್ತ್ರೀ ಪುರುಷರೆಲ್ಲರೂ ಗದ್ದೆಗೆ ಹೋಗಿ  ಭೂತಾಯಿಗೆ ನಮಿಸುತ್ತಾರೆ. ಕದಿರಿನ ಬುಡ ಲಕ್ಷ್ಮೀಸ್ಥಾನ. ಅದಕ್ಕೂ ಪ್ರಾರ್ಥನೆ ಮಾಡಿ ಹಣ್ಣುಕಾಯಿಗಳನ್ನರ್ಪಿಸಿ ಹಾಲುಜೇನು ಸುರಿದು ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಿ ‘ಪೊಲಿ ಪೊಲಿಯೇ ದೇವಾ’ ಎಂದೆಲ್ಲಾ ದೊಡ್ಡಾಗಿ ಕೂಗುತ್ತಾ ಪ್ರಾರ್ಥಿಸಿ ಪಾಡ್ದನಗಳನ್ನು ಹಾಡುತ್ತಾರೆ. ಪೊಲಿ ಎಂದರೆ ”ಹೆಚ್ಚಾಗುವುದು’  ಅಂದರೆ ಸುಭಿಕ್ಷ ಹೆಚ್ಚಲಿ ಎಂದರ್ಥ. ಹೀಗೆ ಇಗ್ಗುತಪ್ಪನನ್ನು ನೆನೆಯುತ್ತಾ, ಸಂಪತ್ತಿನ ಆಶಯದ ಪಾಡ್ದನಗಳನ್ನು ಹಾಡುತ್ತಾ, ದುಡಿ ಬಾರಿಸುತ್ತಾ ಕದಿರನ್ನು  ಕುತ್ತಿಯಿಂದ ಕೊಯ್ಯುತ್ತಾರೆ.  ಕೂಡಲೇ ಕೋವಿಯನ್ನು ಹಿಡಿದುಕೊಂಡಿವವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುತ್ತಾನೆ.  ಇದು ಸಂಭ್ರಮದ ಸಿಡಿಗುಂಡು ಹೌದು; ಕದಿರು ಕೊಯ್ದೆವು ಎಂಬ ಸಂದೇಶವೂ ಹೌದು. ಮನೆಗೆ ಬರುವ ದಾರಿಯಲ್ಲಿ ”ಕಾರಣ’ ರೆಂದು ನಂಬಿಕೊಂಡು ಬರಲಾಗುವ ಪೂರ್ವಜರನ್ನು ನೆನಪಿಸುವ ಸಾಂಕೇತಿಕ ಗುಡಿ-”ಕೈಮಡ’ ದ ಬಾಗಿಲಿಗೆ ಕದಿರನ್ನು ಕಟ್ಟಲಾಗುತ್ತದೆ.   

ಲಾಭಕ್ಕೂ ಬೆಸಸಂಖ್ಯೆಗೂ ಎಲ್ಲಿಲ್ಲದ ಅನುಬಂಧ. ಕದಿರನ್ನು ಬೆಸಸಂಖ್ಯೆಯಲ್ಲಿ ಕೊಯ್ಯುವ ಕ್ರಮ ಅದಕ್ಕಾಗಿಯೇ. ಕೊಯ್ದ ಕದಿರನ್ನೊಯ್ಯುವವನ ಕಾಲು ತೊಳೆದು ಗಿಂಡಿಯಲ್ಲಿ ಹಾಲು ನೀಡಿ, ಆರತಿ ಬೆಳಗಿ, ಕದಿರಿನ ಧಾನ್ಯಲಕ್ಷ್ಮಿಯನ್ನು ಮನೆಯ ಮುತೈದೆ ಮನೆತುಂಬಿಸಿಕೊಳ್ಳುವುದು; ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ,ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ ಹೀಗೆ ಸಂಪತ್ತಿನ ಸೂಚಕವಾಗಿ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿನಾರಿನಿಂದ ಕಟ್ಟುವುದು ಕ್ರಮ. ಈಗೆಲ್ಲಾ ಮನೆಯ ಮುಂಬಾಗಿಲಿಗೆ ನೇಯ್ದು ತೋರಣ ಮಾಡುವ ಕಲಾತ್ಮಕತೆಯೂ ಜೊತೆಯಾಗಿದೆ.  
ಲಾಭಕ್ಕೂ ಬೆಸಸಂಖ್ಯೆಗೂ ಎಲ್ಲಿಲ್ಲದ ಅನುಬಂಧ. ಕದಿರನ್ನು ಬೆಸಸಂಖ್ಯೆಯಲ್ಲಿ ಕೊಯ್ಯುವ ಕ್ರಮ ಅದಕ್ಕಾಗಿಯೇ. ಕೊಯ್ದ ಕದಿರನ್ನೊಯ್ಯುವವನ ಕಾಲು ತೊಳೆದು ಗಿಂಡಿಯಲ್ಲಿ ಹಾಲು ನೀಡಿ, ಆರತಿ ಬೆಳಗಿ, ಕದಿರಿನ ಧಾನ್ಯಲಕ್ಷ್ಮಿಯನ್ನು ಮನೆಯ ಮುತೈದೆ ಮನೆತುಂಬಿಸಿಕೊಳ್ಳುವುದು; ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ,ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಬಾವಿ, ವಾಹನ, ಕಚೇರಿ.., ಹೀಗೆ ಸಂಪತ್ತಿನ ಸೂಚಕವಾಗಿ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿನಾರಿನಿಂದ ಕಟ್ಟುವುದು ಕ್ರಮ. ಈಗೆಲ್ಲಾ ಮನೆಯ ಮುಂಬಾಗಿಲಿಗೆ ನೇಯ್ದು ತೋರಣ ಮಾಡುವ ಕಲಾತ್ಮಕತೆಯೂ ವಿಶೇಷವಾಗಿ ಕಂಡುಬರುತ್ತದೆ. .  

== ಆಹಾರ ವೈವಿಧ್ಯ ==
== ಆಹಾರ ವೈವಿಧ್ಯ ==
ಕುಟುಂಬ-ಸ್ನೇಹಿತ- ಬಂಧು-ಬಾಂಧವ ಊರವರೊಂದಿಗೆ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ಹಂಚಿ ಫಲಹಾರ ಮಾಡುವುದೂ ಕೂಡಾ ಹಬ್ಬದ ಒಂದು ವಿಧಿ. ಕಾಡಿನ ಕತ್ತಲೆಯ ಭಯವನ್ನು ನಿವಾರಿಸಿಕೊಂಡು ಪ್ರಕೃತಿಕದತ್ತವಾದ ಔಷಧಿಯುಕ್ತ ಗೆಣಸನ್ನು ಅಗೆದು ತಂದು ತಿನ್ನುವುದೇ ಈ ಸುಗ್ಗಿ ಹುಗ್ಗಿಯ ವಿಶೇಷತೆ.
ಕುಟುಂಬ-ಸ್ನೇಹಿತ- ಬಂಧು-ಬಾಂಧವ ಊರವರೊಂದಿಗೆ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ಹಂಚಿ ಫಲಹಾರ ಮಾಡುವುದೂ ಕೂಡಾ ಹಬ್ಬದ ಮುಖ್ಯ ವಿಧಿ. ಕಾಡಿನ ಕತ್ತಲೆಯ ಭಯವನ್ನು ನಿವಾರಿಸಿಕೊಂಡು ಪ್ರಕೃತಿಕದತ್ತವಾದ ಔಷಧಿಯುಕ್ತ ಗೆಣಸನ್ನು ಅಗೆದು ತಂದು ತಿನ್ನುವುದೇ ಈ ಸುಗ್ಗಿ ಹುಗ್ಗಿಯ ವಿಶೇಷತೆ. ಬೇರೆ ದಿನಗಳಲ್ಲಿ ಇದನ್ನು ಮಾಡುವುದಿಲ್ಲ. ಪ್ರಾಚೀನದಲ್ಲಿ ಗುಡ್ಡ ಬೆಟ್ಟಗಳಲಿ ವಾಸಿಸುತ್ತಿದ್ದ ಕೊಡವರ ಆಹಾರಕ್ರಮವನ್ನು ನೆನಪಿಸುವಂಥ ಸಾಂಕೇತಿಕ ಆಚರಣೆಯಿದು.  

ಕದಿರು ಕಟ್ಟಿದ ಬಳಿಕ ಹೂರಣಕ್ಕೆ ಅಣಿಯಾಗುವ ಹೊತ್ತು. ಬೆಲ್ಲ ಸೇರಿಸಿದ ಅಕ್ಕಿ ಪಾಯಸ, ಅಕ್ಕಿಹಿಟ್ಟಿನ ಸಿಹಿತಿಂಡಿ ತಂಬಿಟ್ಟು ಪ್ರಧಾನ  ಭಕ್ಷ್ಯ.  ಅಡಿಗೆಯಲ್ಲಿ ಅಕ್ಕಿಯೇ ಪ್ರಧಾನ. ಹುರಿದ ಅಕ್ಕಿಹಿಟ್ಟು  ಮತ್ತು ಬಾಳೆಹಣ್ಣೀನ ಭಕ್ಷ್ಯ ತಂಬಿಟ್ಟು. ಇವನ್ನು ಮೊದಲು ದೇವರ ಕೋಣೆ-”ಮೀದಿಕೋಂಬರೆ’ ಮತ್ತು ಕೈಮಡದಲ್ಲಿ ಮನೆಯ ಮುತ್ತೈದೆ  ನೈವೇದ್ಯ ರೀತಿ ಇಟ್ಟು ಬರುತ್ತಾಳೆ. ಆದಾಗಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸ, ಎಳ್ಳು ತುಪ್ಪ, ತಂಬಿಟ್ಟನ್ನು ಸೇರಿಸಿ  ಫಲಾಹಾರ ಮಾಡುತ್ತಾರೆ.   
ಕದಿರು ಕಟ್ಟಿದ ಬಳಿಕ ಹೂರಣಕ್ಕೆ ಅಣಿಯಾಗುವ ಹೊತ್ತು. ಬೆಲ್ಲ ಸೇರಿಸಿದ ಅಕ್ಕಿ ಪಾಯಸ, ಅಕ್ಕಿಹಿಟ್ಟಿನ ಸಿಹಿತಿಂಡಿ ತಂಬಿಟ್ಟು ಪ್ರಧಾನ  ಭಕ್ಷ್ಯ.  ಅಡಿಗೆಯಲ್ಲಿ ಅಕ್ಕಿಯೇ ಪ್ರಧಾನ. ಹುರಿದ ಅಕ್ಕಿಹಿಟ್ಟು, ಏಲಕ್ಕಿ ಮತ್ತು ಕಳಿತ ಬಾಳೆಹಣ್ಣನ್ನು ಕಲಸಿ ತುಪ್ಪದಿಂದ  ಉಂಡೆಯಾಗಿಸಿ ತಯಾರಿಸುವ ಭಕ್ಷ್ಯವೇ ತಂಬಿಟ್ಟು. ಇವನ್ನು ಮೊದಲು ದೇವರ ಕೋಣೆ-”ಮೀದಿಕೋಂಬರೆ’ ಮತ್ತು ಕೈಮಡದಲ್ಲಿ ಮನೆಯ ಮುತ್ತೈದೆ  ನೈವೇದ್ಯ ರೀತಿ ಇಟ್ಟು ಬರುತ್ತಾಳೆ. ಆದಾಗಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸ, ಎಳ್ಳು ತುಪ್ಪ, ತಂಬಿಟ್ಟನ್ನು ಸೇರಿಸಿ  ಫಲಾಹಾರ ಮಾಡುತ್ತಾರೆ.   

ಗತಿಸಿದ ಹಿರಿಯರ ನೆನಪಿಗೆ ’ಏಳಕ್ಕಿಪುಟ್ಟು’  ( ಎಳ್ಳು+ ಅಕ್ಕಿ = ಎಳ್ಳಕ್ಕಿ) ಎಂಬ ವಿಶೇಷ ಖಾದ್ಯವನ್ನೂ ಮಾಡಲಾಗುತ್ತದೆ. ಅಕ್ಕಿ ಹಿಟ್ಟು ಮಾಡಿ ಎಳ್ಳು, ಶುಂಠಿ, ತೆಂಗಿನ ತುರಿ, ಬಾಳೆಹಣ್ಣು, ಹಾಲು, ಜೇಣು, ಕಲ್ಲುಸಕ್ಕರೆ, ಹಾಗಲಕಾಯಿ ಮುಳ್ಳು, ಪೆರಂಬು ತುದಿ ಚಿಗುರು ಇನ್ನೂ ಮೊದಲಾದವನ್ನು ಸೇರಿಸಿ ಮಾಡಿದ ಭಕ್ಶ್ಯವೇ ಏಳಕ್ಕಿ ಪುಟ್ಟು. ಚಾಪೆ ಹಾಸಿ ಅಶ್ವತ್ಥದೆಲೆಗಳ ಮೇಲೆ ಇಟ್ಟು, ಒಂದೊಂದನ್ನು ಕೈಯಲ್ಲಿರಿಸಿಕೊಂಡು  ತೀರಿಹೋದವರ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆದು ಪಿತೃಗಳಿಗೆ ತೃಪ್ತಿ, ಶಾಂತಿಯನ್ನು ಕೋರುವುದೂ ಹಬ್ಬದ ಒಂದು ಭಾಗವೇ ಆಗಿದೆ. ಹೀಗೆ ಎಸೆದ ಪುಟ್ಟು ಮಾಡಿನಲ್ಲಿ ಅಂಟಿಕೊಂಡರೆ ಪಿತೃಗಳು ಸ್ವೀಕರಿಸಿದರೆಂಬ ನಂಬಿಕೆಯಿದೆ.   

Line 29: Line 32:

== ಹುತ್ತರಿ ಕುಣಿತ ಮತ್ತು ಕಲೆ ==
== ಹುತ್ತರಿ ಕುಣಿತ ಮತ್ತು ಕಲೆ ==
ಕದಿರು ತೆಗೆಯುವ ದಿನಕ್ಕೆ ಒಂದು ವಾರದ ಮೊದಲಿಗೇ ಈ ಹಾಡು-ಕುಣಿತಗಳ ತಾಲೀಮು ‘ಈಡು ತೆಗೆಯುವದು’ ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಏಳು-ಏಳೂವರೆಗೆ ಪ್ರತೀ ಕುಟುಂಬದಿಂದ ಒಬ್ಬನಂತೆ ಭಾಗವಹಿಸಿ ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದ್’ನಲ್ಲಿ ತರಬೇತಿ ಪಡೆಯುವುದು ಇದರ ವಿಶೇಷ. ಈ ಮಂದ್ (ಮೈದಾನ)ಗಳಲ್ಲಿ ಸಾಮ್ಯವಾಗಿ ನಾಲ್ಕರು ಊರುಗಳ ಜನ ಭಾಗವಹಿಸುತ್ತಾರೆ.  ಇಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಗ್ರಾಮ/ಊರಿನ ಯುವಕರು ಪಾಲ್ಗೊಂಡು ನಾಡಿಗೆ ಕೀರ್ತಿ ತರಬೇಕೆಂಬುದು ಈ ಆಚರಣೆಯ ಆಶಯ.  ಸುಮಾರು ನೂರು ವರ್ಷಗಳಿಗೆ ಮುಂಚೆ ಎಲ್ಲರೂ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಾ ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ಡೊಳ್ಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಾ ಮಂದ್ ತಲುಪುವುದು ವಾಡಿಕೆಯಾಗಿತ್ತಂತೆ. ಹೀಗೆ ಮಂದ್ ತಲುಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವುದು ಕ್ರಮ. ನಾಡೆ ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ನಗು ಹಸನಾಗಿ ಹಬ್ಬಬೇಕು ಎಂಬ ನಿಲುವಿನ ಆಚರಣೆಯದು.
ಕದಿರು ತೆಗೆಯುವ ದಿನಕ್ಕೆ ಒಂದು ವಾರದ ಮೊದಲಿಗೇ ಈ ಹಾಡು-ಕುಣಿತಗಳ ಸಿದ್ಧತೆ- ‘ಈಡು ತೆಗೆಯುವದು’ ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಏಳು-ಏಳೂವರೆಗೆ ಪ್ರತೀ ಕುಟುಂಬದಿಂದ ಒಬ್ಬನಂತೆ ಭಾಗವಹಿಸಿ ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದ್’ನಲ್ಲಿ ವಿವಿಧ  ಆಟ, ಹಾಡು, ಕುಣಿತಗಳ ತರಬೇತಿ ಪಡೆಯುವುದು ಇದರ ವಿಶೇಷ. ಇದೊಂದು ರೀತಿಯಲ್ಲಿ ಜಾನಪದರ ಪಾಠಶಾಲೆ.  ಈ ಮಂದ್ (ಮೈದಾನ)ಗಳಲ್ಲಿ ಸಾಮ್ಯವಾಗಿ ನಾಲ್ಕರು ಊರುಗಳ ಜನ ಭಾಗವಹಿಸುತ್ತಾರೆ.  ಊರ ಜನರು ಸೇರಿದರೆ ’ಊರ ಮಂದ್’, ನಾಲ್ಕಾರು ಗ್ರಾಮಗಳ ಜನರು ಸೇರಿದರೆ  ’ನಾಡ ಮಂದ್’. ಹಲವು ಪ್ರದೇಶಗಳಲ್ಲಿರುವ ಕೊಡವರು ಸೊಂದೆಡೆ ಸೇರಿದರೆ ’ ದೇಶಮಂದ್’. ಇವುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಗ್ರಾಮ/ಊರಿನ ಯುವಕರು ಪಾಲ್ಗೊಂಡು ನಾಡಿಗೆ ಕೀರ್ತಿ ತರಬೇಕೆಂಬುದು ಈ ಆಚರಣೆಯ ಆಶಯ.  ಸುಮಾರು ನೂರು ವರ್ಷಗಳಿಗೆ ಮುಂಚೆ ಎಲ್ಲರೂ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಾ ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ಡೊಳ್ಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಾ ಮಂದ್ ತಲುಪುವುದು ವಾಡಿಕೆಯಾಗಿತ್ತಂತೆ. ಹೀಗೆ ಮಂದ್ ತಲುಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವುದು ಕ್ರಮ. ನಾಡೆ ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ನಗು ಹಸನಾಗಿ ಹಬ್ಬಬೇಕು ಎಂಬ ನಿಲುವಿನ ಆಚರಣೆಯದು.

ಹುತ್ತರಿಯ ದಿನ ಆವರಣದ ರಂಗದ ಮಧ್ಯದಲ್ಲಿ ದೀಪಸ್ತಂಭ. ಅದರ ಸುತ್ತಲೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ನೆರೆತ ಹೆಂಗಳೆಯರು ಹುತ್ತರಿ ಹಾಡು, ಪಾಡ್ದನಗೀತೆಗಳನ್ನು ಹಾಡಿದರೆ, ಪುರುಷರು ‘ಪೊಯಿಲೇ’ ಎಂದು ಹಾಡುತ್ತಾ ಶೌರ್ಯ, ಪರಾಕ್ರಮಗಳ ಪ್ರತೀಕವಾದ ನರ್ತನವಾಡುತ್ತಾರೆ. ಮಂದ್‌ನ ಅರಳೀಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಕೊಡವ ಪುರುಷರೆಲ್ಲಾ ನಿಂತು ಡೊಳ್ಳಿನ ನುಡಿತಕ್ಕೆ ಸರಿಯಾಗಿ ಹಿಡಿಕೆ ಇದ್ದು ಕಿರುಗೆಜ್ಜೆಗಳನ್ನು ಕಟ್ಟಿದ ಆಳುದ್ದನೆಯ ಬೆತ್ತದ ಕೋಲುಗಳನ್ನು ಹಿಡಿದು ಕೋಲಾಟವಾಡುತ್ತಾರೆ. ಇಬ್ಬರು ಗಂಡಸರು ಬೆತ್ತದ ಗುರಾಣಿ ಹಾಗೂ ಅರೆಯಾಳುದ್ದದ ಕೋಲನ್ನೂ ಹಿಡಿದು ಪರೆಯಕಳಿಯನ್ನಾಡುತ್ತಾರೆ. ಇದೊಂದು ಬಗೆಯ ಯುದ್ಧ ಕುಣಿತ.  ಮೇದರ ”ಪರೆ’ಗೆ ಇಬ್ಬರು  ಸ್ಪರ್ಧಿಗಳಂತೆ ಮೂರು ಸುತ್ತು ಹೊಡೆಯುವಂತೆ ತೋರುವ ಆಟವನ್ನು ಆಡುವರು. ಕುಳಿತು ನಿಂತು ಎದುರುಬದುರಾಗಿ  ಕೋಲಿನಿಂದ ಮತ್ತೋರ್ವನ ಮೊಣಕಾಲಿಗೆ ಹೊಡೆಯುತ್ತಾ, ಮತ್ತೋರ್ವ ಗುರಾಣಿಯಿಂದ ತಡೆಯುತ್ತಾ ಆಡುತ್ತಾರೆ. ಹೊಡೆದಾಟದಲ್ಲಿ ಒಬ್ಬನಿಗಿಂತ ಮತ್ತೊಬ್ಬನ ಕೈ ಮೇಲಾದರೆ ಅದಕ್ಕೆಂದೇ ನೇಮಿಸಲ್ಪಟ್ಟ ಮೇಲ್ವಿಚಾರಕನು ಬಂದು ತಡೆ ಮಾಡುತ್ತಾನೆ.  ಸಾಂಕೇತಿಕವಾದ ಬಡಿದಾಟದ ಆಚರಣೆಯಿದು. ಹೀಗೆ ಬೊಳಕಾಟ್, ಪರಿಯಕಳಿ, ಹುತ್ತರಿ ಕೋಲಾಟದಲ್ಲಿ ಪಾಲ್ಗೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು.  ಈ ಎಲ್ಲಾ ನೃತ್ತಸಂಭ್ರಮದ ಅಂತಿಮಘಟ್ಟ ಸಾಮೂಹಿಕ ಕುಣಿತ.

ಹೀಗೆ ಊರ ಕೋಲು ಆದ ಬಳಿಕ ಗಂಡಸರು ’ತಕ್ಕ’ನ ಮನೆಗೆ ಹೋಗುವರು. ಅಲ್ಲಿ ತಾಳ, ದುಡಿಗಳನ್ನೆತ್ತಿಕೊಂಡು  ಪೂರ್ವಜರ ನೆನಪನ್ನು ಕೊಡುವ, ಸಂಭ್ರಮದ ಇಂದಿನ ದಿನಗಳನ್ನು ನೆನಪಿಸುವಂತೆ  ಜಾನಪದ ಮಟ್ಟಿನ ಹಾಡುಗಳನ್ನು  ದುಡಿ ನುಡಿಸುತ್ತಾ ಹಾಡುವರು. ಹೊಸತಾಗಿ ಮದುವೆಯಾದವರು, ಮಕ್ಕಳು ಹುಟ್ಟಿದ್ದು ಅಥವಾ ಬಂಧುಬಾಂಧವರು ಜೊತೆ ಸೇರಿದ್ದರೆ ಅದನ್ನೂ ಗುರುತಿಸಿ ವಿಶೇಷ ಸಂಗತಿಗಳನ್ನು ತಿಳಿಸುತ್ತಾ ಹಾಡುತ್ತಾರೆ.  ಆ ಬಳಿಕ ಊರಿನ  ಆಯಾ ಮನೆಯ ಎದುರಿಗೆ ನಿಂತು ಸ್ತುತಿರೂಪದಲ್ಲಿ ಇದೇ ರೀತಿ ಬೆಳಗಾಗುವವರೆಗೆ ಹಾಡುತ್ತಾರೆ. ಆ ರಾತ್ರಿ ಎಲ್ಲರ ಮನೆಗೂ ಹೋಗಲಾಗದೇ ಇದ್ದರೆ ಮಾರನೇ ದಿನ ಹೋಗಿ ಹಾಡಿ ಮುಗಿಸುತ್ತಾರೆ. ಇದನ್ನು”ಮನೆ ಹಾಡುವುದು’ ಎನ್ನುತ್ತಾರೆ. ಅದು ಮುಗಿದು ತಕ್ಕ ಮುಖ್ಯಸ್ಥನ ಮನೆಗೆ ಹೋಗಿ ದುಡಿ ತಾಳಗಳನ್ನು ಹಿಂತಿರುಗಿಸಿ  ತಮ್ಮ ಮನೆಗಳಿಗೆ ಹೋಗುತ್ತಾರೆ.
ಹೀಗೆ ಊರ ಕೋಲು ಆದ ಬಳಿಕ ಗಂಡಸರು ’ತಕ್ಕ’ನ ಮನೆಗೆ ಹೋಗುವರು. ಅಲ್ಲಿ ತಾಳ, ದುಡಿಗಳನ್ನೆತ್ತಿಕೊಂಡು  ಪೂರ್ವಜರ ನೆನಪನ್ನು ಕೊಡುವ, ಸಂಭ್ರಮದ ಇಂದಿನ ದಿನಗಳನ್ನು ನೆನಪಿಸುವಂತೆ  ಜಾನಪದ ಮಟ್ಟಿನ ಹಾಡುಗಳನ್ನು  ದುಡಿ ನುಡಿಸುತ್ತಾ ’ಬಾಳೊಪಾಟ್’ ಹಾಡುವರು. ನೆಲದ- ಕುಲದ ಹಿರಿಮೆಯಷ್ಟೇ ಅಲ್ಲದೆ,  ಖ್ಯಾತನಾಮರ ಬಗೆಗೆ,ಆ ಮನೆಯಲ್ಲಿ ಹೊಸತಾಗಿ ಮದುವೆಯಾದವರು, ಮಕ್ಕಳು ಹುಟ್ಟಿದ್ದು ಅಥವಾ ಬಂಧುಬಾಂಧವರು ಜೊತೆ ಸೇರಿದ್ದರೆ ಅವನ್ನೂ ಗುರುತಿಸಿ ಜಾಣ್ಮೆಯಿಂದ ಸೇರಿಸಿಕೊಂಡು  ಹಾಡುತ್ತಾರೆ.  ಆ ಬಳಿಕ ಊರಿನ  ಆಯಾ ಐನ್ ಮನೆಯ ಎದುರಿಗೆ ನಿಂತು ಸ್ತುತಿರೂಪದಲ್ಲಿ ಇದೇ ರೀತಿ ಬೆಳಗಾಗುವವರೆಗೆ ಹಾಡುತ್ತಾರೆ. ಆ ರಾತ್ರಿ ಎಲ್ಲರ ಮನೆಗೂ ಹೋಗಲಾಗದೇ ಇದ್ದರೆ ಮಾರನೇ ದಿನ ಹೋಗಿ ಹಾಡಿ ಮುಗಿಸುತ್ತಾರೆ. ಇದನ್ನು” ಮನೆ ಪಾಟ್’ ಅಂದರೆ ’ಮನೆ ಹಾಡುವುದು’ ಎನ್ನುತ್ತಾರೆ. ಅದು ಮುಗಿದು ತಕ್ಕ ಮುಖ್ಯಸ್ಥನ ಮನೆಗೆ ಹೋಗಿ ದುಡಿ ತಾಳಗಳನ್ನು ಹಿಂತಿರುಗಿಸಿ  ತಮ್ಮ ಮನೆಗಳಿಗೆ ಹೋಗುತ್ತಾರೆ. ಪಾಡ್ದನಗಳನ್ನು ಹೋಲುವ ಈ ಹಾಡಿಗೆ ಒಂದು ರೀತಿಯ ವಿಶೇಷ ರಾಗ, ತಾಳಗಳ ಜೊತೆಗೆ ಅಲ್ಲಲ್ಲೇ ಕವಿತ್ವವನ್ನು ಕಟ್ಟುವ ಪ್ರತಿಭೆಯೂ ಬೇಕಾಗುತ್ತದೆ.  

ಹೀಗೆ ಹಾಡಿ ಗಳಿಸಿದ ಹಣದಲ್ಲಿ ಮಾಡಿ ಹಬ್ಬವನ್ನು ಸಮಾಪ್ತಿ ಮಾಡುವ ರೀತಿಯೇ ‘ಊರೊರ್ಮೆ’. ಹುತ್ತರಿ ಮುಗಿದ ಒಂದು ಸಂಜೆ ಊರಿನ ಮನೆಯಿಂದ ಒಬ್ಬನಂತೆ ಪಾಲ್ಗೊಂಡು ಕಾಡುಮರಗಳ ನಡುವಿನ ತೋಪಿನಲ್ಲಿ ಕುಳೀತು ಸಾಮೂಹಿಕ ಭೋಜನ ಮಾಡುವ ಕ್ರಮವಿದು.  ಮೊದಲು ಬೇಟೆಯನ್ನೂ ಆಡಿಔತಣ ಮಾಡಿಸುತ್ತಿದ್ದರಂತೆ. ಈಗ ಆ ಕ್ರಮವಿಲ್ಲ.  ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಬಳಕೆಯಾಗುತ್ತಿದ್ದದ್ದಿದೆ. ಒಟ್ಟಿನಲ್ಲಿ ಒಂದು ಸುಗ್ಗಿಯ ಹಬ್ಬಕ್ಕೆ ಊರಿನವರೆಲ್ಲಾ ಕೂಡಿ ಒಂದಾಗಿ ಬಾಳಬೇಕೆಂಬ ಸಮಷ್ಟಿಪ್ರಜ್ಞೆ ಔತಣದ ಉದ್ದೇಶ.  

Line 40: Line 43:
‘''ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೇ, ಪೊಯಿಲೇ... ಪೋಪಕ ಪುತ್ತರಿ ಎಣ್ಣತೆ ಪೋಚಿ ದಮ್ಮಯ್ಯ ಪುತ್ತರಿ ಒಮ್ಮಲು  ಪೋತೆ.''.- ’ಹುತ್ತರಿ ಬರುವಾಗ ಸಡಗರದಿಂದ ಬಂತು, ಹೋಗುವಾಗ ಯಾರಿಗೂ ಹೇಳದೆ ಹೋಯಿತು, ಬಿನ್ನಹ ಹುತ್ತರಿ- ಒಮ್ಮೆಯೂ ಹೋಗದಿರು..” ಎಂದು ಕೊಡವರು ಹೇಳುವುದು  ಇದೆ.

ಹಿಂದಿನ ಶತಮಾನಗಳಲ್ಲಿ ಗುಡಿಕೈಗಾರಿಕೆಯ ಕಸುಬುದಾರರೇ ಹುತ್ತರಿ ಹಬ್ಬಕ್ಕೆ ಬೇಕಾದ ಕುಕ್ಕೆ, ಕುಡುಗೋಲು, ಚಾಪೆ, ಕುತ್ತಿ, , ಕುಡಿಕೆಗಳನ್ನು ಹೊಸದಾಗಿ ತಯಾರಿಸಿ ಹಬ್ಬಕ್ಕೆ ಮುಂಚಿತವಾಗಿ ಪ್ರತಿಯೊಂದು ಮನೆಗೂ ಕೊಂಡೊಯ್ದು ಮಾರುತ್ತಿದ್ದರು.  ಇವರಿಗೆ ಮನೆಯವರೂ ಕೂಡಾ  ಅಕ್ಕಿ ಹಿಟ್ಟು, ಎಳ್ಳು, ಹುತ್ತರಿ ಗೆಣಸು, ಬೆಲ್ಲ ಮೊದಲಾದವನ್ನು ಕೊಡುತ್ತಿದ್ದರು.  ಈಗ ಅಂಥ ಕಸುಬುದಾರರ ಕೊರತೆ ಇದೆ. ಜೀವನ ಸ್ಥಿತಿಯೂ  ಬೇರೊಂದು ರೀತಿಯಾಗಿದೆ. ಈಗ ಅಂಗಡಿಮುಂಗಟ್ಟುಗಳಲೇ ವ್ಯಾಪಾರಗಳು ನಡೆಯುತ್ತವೆ. 
ಇಂದಿಗೆ ಭತ್ತದ ಕೃಷಿ ಕಡಿಮೆಯಾಗತೊಡಗಿದೆ. ಗದ್ದೆಗಳು ವಿರಳ. ಪಟ್ಟಣದ ಜೀವನಕ್ಕೆ ಹಂಬಲಿಸುವವರು ಹೆಚ್ಚು. ಹಬ್ಬದ ಆಚರಣೆಯನ್ನು ಮಾಡಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಗಳನ್ನು ಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್‌ನಲ್ಲಿಯೇ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆಯುತ್ತಾರೆ.  
 
ಇಂದಿಗೆ ಭತ್ತದ ಕೃಷಿ ಕಡಿಮೆಯಾಗತೊಡಗಿದೆ. ಗದ್ದೆಗಳು ವಿರಳ. ಪಟ್ಟಣದ ಜೀವನಕ್ಕೆ ಹಂಬಲಿಸುವವರು ಹೆಚ್ಚು. ಹಬ್ಬದ ಆಚರಣೆಯನ್ನು ಮಾಡಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್‌ನಲ್ಲಿಯೇ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆಯುತ್ತಾರೆ. ಮಳೆಗಾಲದಲ್ಲಿ ನಾಟಿ ಮುಗಿಸಿದ ಸಂತೋಷದಲ್ಲಿ ಕೈಲ್ ಮುಹೂರ್ತವನ್ನು ಆಚರಿಸಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಬೆಳೆ ಕಟಾವು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಹಿಂದಿನ ಶತಮಾನಗಳಲ್ಲಿ ಗುಡಿಕೈಗಾರಿಕೆಯ ಕಸುಬುದಾರರೇ ಹುತ್ತರಿ ಹಬ್ಬಕ್ಕೆ ಬೇಕಾದ ಕುಕ್ಕೆ, ಕುಡುಗೋಲು, ಚಾಪೆ, ಕುತ್ತಿ, , ಕುಡಿಕೆಗಳನ್ನು ಹೊಸದಾಗಿ ತಯಾರಿಸಿ ಹಬ್ಬಕ್ಕೆ ಮುಂಚಿತವಾಗಿ ಪ್ರತಿಯೊಂದು ಮನೆಗೂ ಕೊಂಡೊಯ್ದು ಮಾರುತ್ತಿದ್ದರು.  ಇವರಿಗೆ ಮನೆಯವರೂ ಕೂಡಾ  ಅಕ್ಕಿ ಹಿಟ್ಟು, ಎಳ್ಳು, ಗೆಣಸು, ಬಾಳೆ, ಬೆಲ್ಲ, ಉಪ್ಪು, ಮೆಣಸು  ಮೊದಲಾದವನ್ನು ಕೊಡುತ್ತಿದ್ದರು.  ಈಗ ಅಂಥ ಕಸುಬುದಾರರ ಕೊರತೆ ಇದೆ. ಜೀವನ ಸ್ಥಿತಿಯೂ  ಬೇರೊಂದು ರೀತಿಯಾಗಿದೆ. ಈಗ ಅಂಗಡಿಮುಂಗಟ್ಟುಗಳಲೇ ವ್ಯಾಪಾರಗಳು ನಡೆಯುತ್ತವೆ. ಕೆಲವೆಡೆ ಮಾತ್ರ ಈ ಪ್ರಾಚೀನ ಸಂಪ್ರದಾಯವನು ಬೇಕಂತಲೇ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ.  ಭಾರತೀಯ ಹಬ್ಬಗಳಲ್ಲಿರುವ ಈ ಮಾದರಿಯ ಸಂತೃಪ್ತ ಕೊಡುಕೊಳ್ಳುವಿಕೆ ಬದುಕಿನ ಸಂಭ್ರಮಕ್ಕಷ್ಟೇ ಅಲ್ಲದೆ ಅದನ್ನು ನಂಬಿಕೊಂಡಿರುವ  ಗುಡಿಕೈಗಾರಿಕೆಯಂಥ ಅದೆಷ್ಟೋ ಉದ್ಯಮಗಳಿಗೂ ಪ್ರೇರಣಾದಾಯಿ. ಮತ್ತು ಸೌಹಾರ್ದ ವಾತಾವರಣ ಬೆಳೆಯುವಲ್ಲಿ ಅನುಕೂಲಕರ. 

( ಈ ಲೇಖನವು ವಿಜಯಕರ್ನಾಟಕ ಪತ್ರಿಕೆಯ ಬೋಧಿವೃಕ್ಷದಲ್ಲಿ  2017 ರ ಡಿಸೆಂಬರ್ 7ರಂದು ಪ್ರಕಟವಾಗಿದೆ.)<ref name=":0">https://www.noopurabhramari.com/huttarisuggihosatinahuggi/</ref>
<references />

Latest revision as of 18:24, 27 November 2023

Authored by ಡಾ.ಮನೋರಮಾ ಬಿ.ಎನ್. Published by ನೂಪುರಭ್ರಮರಿ, ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ.[1]

ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಮನ್ನಣೆ ಪಡೆದ ಕೊಡಗಿನ ಪ್ರಮುಖ ಹಬ್ಬವೇ ಹುತ್ತರಿ.ಕೊಡಗಿನ ನೆಲದಲ್ಲಿ ಸುಗ್ಗಿಯನ್ನು ಆಚರಿಸುವ ಹಬ್ಬವಿದು. ಅಂತೆಯೇ ಇದು ಕೊಡವರ ಹಬ್ಬವೂ ಹೌದು. ಕೊಡವಮನೆತನದವರಿಗಂತೂ ಹುತ್ತರಿಯೇ ಯುಗಾದಿ. ಹುತ್ತರಿಯೇ ದೀಪಾವಳಿ. ಕೊಡವರಿಗೆ ಹುತ್ತರಿಯೇ ಹಬ್ಬಗಳ ರಾಜ. ಮಳೆಗಾಲದಲ್ಲಿ ನಾಟಿ ಮುಗಿಸಿದ ಸಂತೋಷದಲ್ಲಿ ಕೈಲ್ ಮುಹೂರ್ತವನ್ನು ಆಚರಿಸಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಬೆಳೆ ಕಟಾವು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಅಂದರೆ ಕಾರ್ತಿಕಪೌರ್ಣಿಮೆಯ ಕೃತ್ತಿಕೆ- ರೋಹಿಣೀ ನಕ್ಷತ್ರದ ದಿನ ( ನವೆಂಬರ್ ತಿಂಗಳು) ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಕೊಡಗಿನಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರಿಗೆ ವಿಶೇಷ ರಜೆಯನ್ನು ನೀಡಲಾಗುತ್ತದೆ.

ಹಬ್ಬದ ವಿಧಿವಿಧಾನಗಳು

ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ- ಪುತ್ತರಿ. ಕನ್ನಡದಲ್ಲಿ ಹುತ್ತರಿ. ಹೊಸ ಅಕ್ಕಿಯ (ಪುದಿಯ ಅರಿ) ಜೊತೆಗೆ ಬೆರೆಯುವುದೇ ಹುತ್ತರಿ. ಇಂಥ ಸುಗ್ಗಿಯನ್ನು ಹುಗ್ಗಿಯಾಗಿಸಲು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಮನೆಗೆ ಸುಣ್ಣ-ಬಣ್ಣ ಬಳಿದು ಸುಗ್ಗಿಯನ್ನು ಹುಗ್ಗಿಯಾಗಿಸಿ ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿರುತ್ತಾರೆ. ಮನೆಯ ಅಂಗಣ, ಕೊಟ್ಟಿಗೆ, ಕಣಗಳನ್ನು ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಅಕ್ಕಿ ಹುರಿದು ಹಿಟ್ಟು ತಯಾರಿಸಿಕೊಳ್ಳುತ್ತಾರೆ.

ಬಂಧು-ಬಾಂಧವ ಊರವರೊಂದಿಗೆ ಹುತ್ತರಿಯ ಆಚರಣೆಯಿರುತ್ತದೆ. ಕುಟುಂಬದ ಪ್ರತಿಸದಸ್ಯನೂ ಹುತ್ತರಿ ಹಬ್ಬಕ್ಕೆ "ಐನ್ ಮನೆ" ಗೆ (ಕುಟುಂಬದ ಹಿರಿಮನೆ) ಬಂದೇ ಬರಬೇಕು; ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ! ಎಲ್ಲರೂ ಸೇರಿದಾಗ ರೋಹಿಣೀ ನಕ್ಷತ್ರದ ರಾತ್ರೆ ಅಂದರೆ ಹುತ್ತರಿಯ ದಿನ ಮನೆಯ ‘ನೆಲ್ಲಕ್ಕಿ’ ನಡುಬಾಡೆ (ಮನೆಯ ನಡುವಿನ ಕೋಣೆ)ಯಲ್ಲಿ ’ತೂಕ್ ಬೊಳಕ್’ ಲಕ್ಷ್ಮೀ ತೂಗುದೀಪ (ಕಾವೇರಿ ದೀಪ) ತೂಗುತ್ತದೆ. ಅದರ ಮುಂದೆ ಪ್ರಾರ್ಥನೆ ಮಾಡುತ್ತಾರೆ. ಕೆಳಗೆ ಹಾಸಿದ ಚಾಪೆಯಲ್ಲಿ ಹುತ್ತರಿ ಕುಕ್ಕೆ. ಅದರೊಳಗೆ ಮಾವಿನೆಲೆ, ಅಶ್ವತ್ಥ, ಅತ್ತಿ, ಆಲ, ಇಟ್ಟುಗ ಅಥವಾ ಹಲಸು, ಕುಂಬಳಿ, ಕಾಡು ಗೇರುಮರದ ಎಲೆಗಳ ಪಂಚ ಪತ್ರೆಯನ್ನು ದಡ್ಡಾಲ ಮರದ ಬಳ್ಳಿಯಲ್ಲಿ ಪುತ್ತರಿನಾರೆಂದು ಕಟ್ಟಿದ ‘ನೆರೆಕಟ್ಟು’. ಹೊಸಕ್ಕಿಯನುಂಡು ಹೊಸತಾಗುವ ಕಾಲವದು. ಹುತ್ತರಿಯ ಊಟಕ್ಕೆ ಹೊಸ ಅಕ್ಕಿಯನ್ನು ಸ್ವಲ್ಪವಾದರೂ ಸೇರಿಸಲೇಬೇಕು ಎಂಬ ಕಟ್ಟಳೆಯಿದೆ. ಹಾಗಾಗಿಯೇ ಅಚ್ಚೇರಿ/ಕುಕ್ಕೆಯ ತುಂಬಾ ಹಳೆಯ ಭತ್ತವನ್ನೂ ಅದರ ಮೇಲೆ ಸೇರಿನ ಅರ್ಧಕ್ಕೆ ಅಕ್ಕಿ ತುಂಬಿ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡಲಾಗುತ್ತದೆ. ಇದಕ್ಕೆ ’ತಳಿಯತಕ್ಕಿ ಬೊಳಕ್ ’ ಎನ್ನುವರು. ’ಕುತ್ತಿ’ ಎಂಬುದರಲ್ಲಿ ಒಂದಷ್ಟು ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು, ತಂಬಿಟ್ಟು ಮುಂತಾದ ಫಲವಸ್ತುಗಳು. ಕುಡುಗೋಲು, ಮಣ್ಣಿನ ಸಣ್ಣ ಕುಡಿಕೆಯಲ್ಲಿ ( ಪುತ್ತರಿ ಕುಡಿಕೆ) ಹುರಿದಕ್ಕಿಯ ಹಿಟ್ಟನ್ನೂ ತುಂಬಿಸಿಡುತ್ತಾರೆ. ’ನೆರೆ ಕಟ್ಟಿದ’ ಮೇಲೆ ಪೀರಕೆಯನ್ನು ಅಡ್ಡಕ್ಕೆ ಕತ್ತರಿಸಿ ಅದನ್ನು ಈ ಹಿಟ್ಟಿನಲ್ಲಿ ಅದ್ದಿ ಕುಡುಗೋಲು, ಕುತ್ತಿ, ಸೇರು, ಕುಕ್ಕೆ, ಕುಡಿಕೆ ಮತ್ತು ಮನೆಯ ಕಿಟಕಿ ಬಾಗಿಲುಗಳಿಗೆ ತಗಿಸಿ ಮುದ್ರೆಯಂತೆ ಒತ್ತುತ್ತಾರೆ. ಇವುಗಳ ಪಾರುಪತ್ಯವೆಲ್ಲವೂ ಮನೆಯ ಯಜಮಾನನದ್ದೇ.

ಪೂಜೆಯ ಕ್ರಮ

ಹುತ್ತರಿ ಹಬ್ಬದ ಕದಿರು ತೆಗೆದ ಸಂಭ್ರಮ

ಕೊಡವನಾಡಿಗೆ ಅನ್ನ(ಇಗ್ಗು) ಕೊಡುವ (ತಪ್ಪ) ದೇವರು ಪಾಡಿಯ ಇಗ್ಗುತ್ತಪ್ಪ. ಈತ ಉದ್ಭವ ಲಿಂಗದ ರೂಪದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯೇ ಆಗಿದ್ದಾನೆ. ಹುತ್ತರಿಯ ಮೊದಲ ದಿನ ‘ಪಾಡಿ ಪೊಳ್ದ್’ ಅಥವಾ ’ದೇವ ಪೊಳ್ದ್’- ಇಗ್ಗುತಪ್ಪ ಅಂದರೆ ಸುಬ್ರಹ್ಮಣ್ಯ ದೇವರಿಗೆ ಮೀಸಲು. ಪಾಡಿಯ ದೇವಸ್ಥಾನದ ಗದ್ದೆಯಿಂದ ಕದಿರು ತಂದು ಅನ್ನದೈವ ಸುಬ್ರಹ್ಮಣ್ಯನಿಗೆ ಸಮರ್ಪಿಸಲಾಗುತ್ತದೆ. ಇದಲ್ಲದೆ ಕೊಡಗಿನ ಇನ್ನಿತರ ಊರಿನ ದೇವಸ್ಥಾನಗಳಲ್ಲೂ ಈ ಹುತ್ತರಿಯ ಕ್ರಮಗಳು ಜರುಗುತ್ತವೆ. ಆಯಾ ದೇವಸ್ಥಾನದಲ್ಲಿ ಪೂಜೆ ಮಾಡಿ ದೇವರಿಗೆ ಪ್ರಾರ್ಥ ನೆ ಮಾಡಿಕೊಂಡು ಬ್ರಾಹ್ಮಣ ಅರ್ಚಕರು ತೀರ್ಥ ಪ್ರಸಾದ ಗಂಧಗಳನ್ನು ಜನರಿಗೆ ವಿತರಿಸುತ್ತಾರೆ.[2] ಊರಿನವರು ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಾಳೆಹಣ್ಣು ಮೊದಲಾದವನ್ನು ಬ್ರಾಹ್ಮಣರಿಗೆ ಕಾಣಿಕೆಯಾಗಿ ಕೊಡುತ್ತಾರೆ.

ಕೊಡಗು ಅರಸರ ಕಾಲದಲ್ಲಿ ಅರಮನೆಯಲ್ಲೂ ಈ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದನ್ನು”ಅರಮನೆಯ ಪೊಳ್ದು’ ಎನ್ನುತ್ತಿದ್ದರು. ಅರಮನೆ ಪೊಳ್ದು ಕಳೆದ ಬಳಿಕ ಊರ ಜನ ಹಬ್ಬ ಮಾಡುತ್ತಿದ್ದರು. ಈಗ ಈ ರಿವಾಜು ಇಲ್ಲ.

ಎರಡನೇ ದಿನ ‘ನಾಡ್ ಪೊಳ್ದ್’- ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ಶುದ್ಧವಾಗಿರುವ ಬಿಳಿ ಕುಪ್ಪಸದಟ್ಟಿ ತೊಟ್ಟ ಹಿರಿಯ ವ್ಯಕ್ತಿಯು ಹಬ್ಬದ ದಿನದಂದು ’ತೂಕ್ ಬೊಳಕ್’ ಮುಂದೆ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಅದಾಗಿ ಹೊಸ ಕದಿರನ್ನು ತರು ಬೇಡಿಕೊಳ್ಳುತ್ತಾರೆ. ಕುಕ್ಕೆ, ದೀಪ, ಚಾಪೆ ಕೋವಿ ಮೊದಲಾದವನ್ನೆಲ್ಲಾ ತೆಗೆದುಕೊಂಡು ಸ್ತ್ರೀ ಪುರುಷರೆಲ್ಲರೂ ಗದ್ದೆಗೆ ಹೋಗಿ ಭೂತಾಯಿಗೆ ನಮಿಸುತ್ತಾರೆ. ಕದಿರಿನ ಬುಡ ಲಕ್ಷ್ಮೀಸ್ಥಾನ. ಅದಕ್ಕೂ ಪ್ರಾರ್ಥನೆ ಮಾಡಿ ಹಣ್ಣುಕಾಯಿಗಳನ್ನರ್ಪಿಸಿ ಹಾಲುಜೇನು ಸುರಿದು ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಿ ‘ಪೊಲಿ ಪೊಲಿಯೇ ದೇವಾ’ ಎಂದೆಲ್ಲಾ ದೊಡ್ಡಾಗಿ ಕೂಗುತ್ತಾ ಪ್ರಾರ್ಥಿಸಿ ಪಾಡ್ದನಗಳನ್ನು ಹಾಡುತ್ತಾರೆ. ಪೊಲಿ ಎಂದರೆ ”ಹೆಚ್ಚಾಗುವುದು’ ಅಂದರೆ ಸುಭಿಕ್ಷ ಹೆಚ್ಚಲಿ ಎಂದರ್ಥ. ಹೀಗೆ ಇಗ್ಗುತಪ್ಪನನ್ನು ನೆನೆಯುತ್ತಾ, ಸಂಪತ್ತಿನ ಆಶಯದ ಪಾಡ್ದನಗಳನ್ನು ಹಾಡುತ್ತಾ, ದುಡಿ ಬಾರಿಸುತ್ತಾ ಕದಿರನ್ನು ಕುತ್ತಿಯಿಂದ ಕೊಯ್ಯುತ್ತಾರೆ. ಕೂಡಲೇ ಕೋವಿಯನ್ನು ಹಿಡಿದುಕೊಂಡಿವವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುತ್ತಾನೆ. ಇದು ಸಂಭ್ರಮದ ಸಿಡಿಗುಂಡು ಹೌದು; ಕದಿರು ಕೊಯ್ದೆವು ಎಂಬ ಸಂದೇಶವೂ ಹೌದು. ಮನೆಗೆ ಬರುವ ದಾರಿಯಲ್ಲಿ ”ಕಾರಣ’ ರೆಂದು ನಂಬಿಕೊಂಡು ಬರಲಾಗುವ ಪೂರ್ವಜರನ್ನು ನೆನಪಿಸುವ ಸಾಂಕೇತಿಕ ಗುಡಿ-”ಕೈಮಡ’ ದ ಬಾಗಿಲಿಗೆ ಕದಿರನ್ನು ಕಟ್ಟಲಾಗುತ್ತದೆ.

ಲಾಭಕ್ಕೂ ಬೆಸಸಂಖ್ಯೆಗೂ ಎಲ್ಲಿಲ್ಲದ ಅನುಬಂಧ. ಕದಿರನ್ನು ಬೆಸಸಂಖ್ಯೆಯಲ್ಲಿ ಕೊಯ್ಯುವ ಕ್ರಮ ಅದಕ್ಕಾಗಿಯೇ. ಕೊಯ್ದ ಕದಿರನ್ನೊಯ್ಯುವವನ ಕಾಲು ತೊಳೆದು ಗಿಂಡಿಯಲ್ಲಿ ಹಾಲು ನೀಡಿ, ಆರತಿ ಬೆಳಗಿ, ಕದಿರಿನ ಧಾನ್ಯಲಕ್ಷ್ಮಿಯನ್ನು ಮನೆಯ ಮುತೈದೆ ಮನೆತುಂಬಿಸಿಕೊಳ್ಳುವುದು; ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ,ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಬಾವಿ, ವಾಹನ, ಕಚೇರಿ.., ಹೀಗೆ ಸಂಪತ್ತಿನ ಸೂಚಕವಾಗಿ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿನಾರಿನಿಂದ ಕಟ್ಟುವುದು ಕ್ರಮ. ಈಗೆಲ್ಲಾ ಮನೆಯ ಮುಂಬಾಗಿಲಿಗೆ ನೇಯ್ದು ತೋರಣ ಮಾಡುವ ಕಲಾತ್ಮಕತೆಯೂ ವಿಶೇಷವಾಗಿ ಕಂಡುಬರುತ್ತದೆ. .

ಆಹಾರ ವೈವಿಧ್ಯ

ಕುಟುಂಬ-ಸ್ನೇಹಿತ- ಬಂಧು-ಬಾಂಧವ ಊರವರೊಂದಿಗೆ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ಹಂಚಿ ಫಲಹಾರ ಮಾಡುವುದೂ ಕೂಡಾ ಹಬ್ಬದ ಮುಖ್ಯ ವಿಧಿ. ಕಾಡಿನ ಕತ್ತಲೆಯ ಭಯವನ್ನು ನಿವಾರಿಸಿಕೊಂಡು ಪ್ರಕೃತಿಕದತ್ತವಾದ ಔಷಧಿಯುಕ್ತ ಗೆಣಸನ್ನು ಅಗೆದು ತಂದು ತಿನ್ನುವುದೇ ಈ ಸುಗ್ಗಿ ಹುಗ್ಗಿಯ ವಿಶೇಷತೆ. ಬೇರೆ ದಿನಗಳಲ್ಲಿ ಇದನ್ನು ಮಾಡುವುದಿಲ್ಲ. ಪ್ರಾಚೀನದಲ್ಲಿ ಗುಡ್ಡ ಬೆಟ್ಟಗಳಲಿ ವಾಸಿಸುತ್ತಿದ್ದ ಕೊಡವರ ಆಹಾರಕ್ರಮವನ್ನು ನೆನಪಿಸುವಂಥ ಸಾಂಕೇತಿಕ ಆಚರಣೆಯಿದು.

ಕದಿರು ಕಟ್ಟಿದ ಬಳಿಕ ಹೂರಣಕ್ಕೆ ಅಣಿಯಾಗುವ ಹೊತ್ತು. ಬೆಲ್ಲ ಸೇರಿಸಿದ ಅಕ್ಕಿ ಪಾಯಸ, ಅಕ್ಕಿಹಿಟ್ಟಿನ ಸಿಹಿತಿಂಡಿ ತಂಬಿಟ್ಟು ಪ್ರಧಾನ ಭಕ್ಷ್ಯ. ಅಡಿಗೆಯಲ್ಲಿ ಅಕ್ಕಿಯೇ ಪ್ರಧಾನ. ಹುರಿದ ಅಕ್ಕಿಹಿಟ್ಟು, ಏಲಕ್ಕಿ ಮತ್ತು ಕಳಿತ ಬಾಳೆಹಣ್ಣನ್ನು ಕಲಸಿ ತುಪ್ಪದಿಂದ ಉಂಡೆಯಾಗಿಸಿ ತಯಾರಿಸುವ ಭಕ್ಷ್ಯವೇ ತಂಬಿಟ್ಟು. ಇವನ್ನು ಮೊದಲು ದೇವರ ಕೋಣೆ-”ಮೀದಿಕೋಂಬರೆ’ ಮತ್ತು ಕೈಮಡದಲ್ಲಿ ಮನೆಯ ಮುತ್ತೈದೆ ನೈವೇದ್ಯ ರೀತಿ ಇಟ್ಟು ಬರುತ್ತಾಳೆ. ಆದಾಗಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸ, ಎಳ್ಳು ತುಪ್ಪ, ತಂಬಿಟ್ಟನ್ನು ಸೇರಿಸಿ ಫಲಾಹಾರ ಮಾಡುತ್ತಾರೆ.

ಗತಿಸಿದ ಹಿರಿಯರ ನೆನಪಿಗೆ ’ಏಳಕ್ಕಿಪುಟ್ಟು’ ( ಎಳ್ಳು+ ಅಕ್ಕಿ = ಎಳ್ಳಕ್ಕಿ) ಎಂಬ ವಿಶೇಷ ಖಾದ್ಯವನ್ನೂ ಮಾಡಲಾಗುತ್ತದೆ. ಅಕ್ಕಿ ಹಿಟ್ಟು ಮಾಡಿ ಎಳ್ಳು, ಶುಂಠಿ, ತೆಂಗಿನ ತುರಿ, ಬಾಳೆಹಣ್ಣು, ಹಾಲು, ಜೇಣು, ಕಲ್ಲುಸಕ್ಕರೆ, ಹಾಗಲಕಾಯಿ ಮುಳ್ಳು, ಪೆರಂಬು ತುದಿ ಚಿಗುರು ಇನ್ನೂ ಮೊದಲಾದವನ್ನು ಸೇರಿಸಿ ಮಾಡಿದ ಭಕ್ಶ್ಯವೇ ಏಳಕ್ಕಿ ಪುಟ್ಟು. ಚಾಪೆ ಹಾಸಿ ಅಶ್ವತ್ಥದೆಲೆಗಳ ಮೇಲೆ ಇಟ್ಟು, ಒಂದೊಂದನ್ನು ಕೈಯಲ್ಲಿರಿಸಿಕೊಂಡು ತೀರಿಹೋದವರ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆದು ಪಿತೃಗಳಿಗೆ ತೃಪ್ತಿ, ಶಾಂತಿಯನ್ನು ಕೋರುವುದೂ ಹಬ್ಬದ ಒಂದು ಭಾಗವೇ ಆಗಿದೆ. ಹೀಗೆ ಎಸೆದ ಪುಟ್ಟು ಮಾಡಿನಲ್ಲಿ ಅಂಟಿಕೊಂಡರೆ ಪಿತೃಗಳು ಸ್ವೀಕರಿಸಿದರೆಂಬ ನಂಬಿಕೆಯಿದೆ.

ಹಬ್ಬದ ಕಡೆಯ ದಿನ ಊರವರೆಲ್ಲಾ ಗ್ರಾಮದ ಅಂಬಲ-ಮೈದಾನದಲ್ಲಿ ನೆರೆದು ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುವ ‘’ಊರೋಮರ್’. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಮೊದಲಿಗೆ ಬಳಕೆಯಾಗುತ್ತಿದ್ದದ್ದಿದೆ.

ಹುತ್ತರಿ ಕುಣಿತ ಮತ್ತು ಕಲೆ

ಕದಿರು ತೆಗೆಯುವ ದಿನಕ್ಕೆ ಒಂದು ವಾರದ ಮೊದಲಿಗೇ ಈ ಹಾಡು-ಕುಣಿತಗಳ ಸಿದ್ಧತೆ- ‘ಈಡು ತೆಗೆಯುವದು’ ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಏಳು-ಏಳೂವರೆಗೆ ಪ್ರತೀ ಕುಟುಂಬದಿಂದ ಒಬ್ಬನಂತೆ ಭಾಗವಹಿಸಿ ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದ್’ನಲ್ಲಿ ವಿವಿಧ ಆಟ, ಹಾಡು, ಕುಣಿತಗಳ ತರಬೇತಿ ಪಡೆಯುವುದು ಇದರ ವಿಶೇಷ. ಇದೊಂದು ರೀತಿಯಲ್ಲಿ ಜಾನಪದರ ಪಾಠಶಾಲೆ. ಈ ಮಂದ್ (ಮೈದಾನ)ಗಳಲ್ಲಿ ಸಾಮ್ಯವಾಗಿ ನಾಲ್ಕರು ಊರುಗಳ ಜನ ಭಾಗವಹಿಸುತ್ತಾರೆ. ಊರ ಜನರು ಸೇರಿದರೆ ’ಊರ ಮಂದ್’, ನಾಲ್ಕಾರು ಗ್ರಾಮಗಳ ಜನರು ಸೇರಿದರೆ ’ನಾಡ ಮಂದ್’. ಹಲವು ಪ್ರದೇಶಗಳಲ್ಲಿರುವ ಕೊಡವರು ಸೊಂದೆಡೆ ಸೇರಿದರೆ ’ ದೇಶಮಂದ್’. ಇವುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಗ್ರಾಮ/ಊರಿನ ಯುವಕರು ಪಾಲ್ಗೊಂಡು ನಾಡಿಗೆ ಕೀರ್ತಿ ತರಬೇಕೆಂಬುದು ಈ ಆಚರಣೆಯ ಆಶಯ. ಸುಮಾರು ನೂರು ವರ್ಷಗಳಿಗೆ ಮುಂಚೆ ಎಲ್ಲರೂ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಾ ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ಡೊಳ್ಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಾ ಮಂದ್ ತಲುಪುವುದು ವಾಡಿಕೆಯಾಗಿತ್ತಂತೆ. ಹೀಗೆ ಮಂದ್ ತಲುಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವುದು ಕ್ರಮ. ನಾಡೆ ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ನಗು ಹಸನಾಗಿ ಹಬ್ಬಬೇಕು ಎಂಬ ನಿಲುವಿನ ಆಚರಣೆಯದು.

ಹುತ್ತರಿಯ ದಿನ ಆವರಣದ ರಂಗದ ಮಧ್ಯದಲ್ಲಿ ದೀಪಸ್ತಂಭ. ಅದರ ಸುತ್ತಲೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ನೆರೆತ ಹೆಂಗಳೆಯರು ಹುತ್ತರಿ ಹಾಡು, ಪಾಡ್ದನಗೀತೆಗಳನ್ನು ಹಾಡಿದರೆ, ಪುರುಷರು ‘ಪೊಯಿಲೇ’ ಎಂದು ಹಾಡುತ್ತಾ ಶೌರ್ಯ, ಪರಾಕ್ರಮಗಳ ಪ್ರತೀಕವಾದ ನರ್ತನವಾಡುತ್ತಾರೆ. ಮಂದ್‌ನ ಅರಳೀಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಕೊಡವ ಪುರುಷರೆಲ್ಲಾ ನಿಂತು ಡೊಳ್ಳಿನ ನುಡಿತಕ್ಕೆ ಸರಿಯಾಗಿ ಹಿಡಿಕೆ ಇದ್ದು ಕಿರುಗೆಜ್ಜೆಗಳನ್ನು ಕಟ್ಟಿದ ಆಳುದ್ದನೆಯ ಬೆತ್ತದ ಕೋಲುಗಳನ್ನು ಹಿಡಿದು ಕೋಲಾಟವಾಡುತ್ತಾರೆ. ಇಬ್ಬರು ಗಂಡಸರು ಬೆತ್ತದ ಗುರಾಣಿ ಹಾಗೂ ಅರೆಯಾಳುದ್ದದ ಕೋಲನ್ನೂ ಹಿಡಿದು ಪರೆಯಕಳಿಯನ್ನಾಡುತ್ತಾರೆ. ಇದೊಂದು ಬಗೆಯ ಯುದ್ಧ ಕುಣಿತ. ಮೇದರ ”ಪರೆ’ಗೆ ಇಬ್ಬರು ಸ್ಪರ್ಧಿಗಳಂತೆ ಮೂರು ಸುತ್ತು ಹೊಡೆಯುವಂತೆ ತೋರುವ ಆಟವನ್ನು ಆಡುವರು. ಕುಳಿತು ನಿಂತು ಎದುರುಬದುರಾಗಿ ಕೋಲಿನಿಂದ ಮತ್ತೋರ್ವನ ಮೊಣಕಾಲಿಗೆ ಹೊಡೆಯುತ್ತಾ, ಮತ್ತೋರ್ವ ಗುರಾಣಿಯಿಂದ ತಡೆಯುತ್ತಾ ಆಡುತ್ತಾರೆ. ಹೊಡೆದಾಟದಲ್ಲಿ ಒಬ್ಬನಿಗಿಂತ ಮತ್ತೊಬ್ಬನ ಕೈ ಮೇಲಾದರೆ ಅದಕ್ಕೆಂದೇ ನೇಮಿಸಲ್ಪಟ್ಟ ಮೇಲ್ವಿಚಾರಕನು ಬಂದು ತಡೆ ಮಾಡುತ್ತಾನೆ. ಸಾಂಕೇತಿಕವಾದ ಬಡಿದಾಟದ ಆಚರಣೆಯಿದು. ಹೀಗೆ ಬೊಳಕಾಟ್, ಪರಿಯಕಳಿ, ಹುತ್ತರಿ ಕೋಲಾಟದಲ್ಲಿ ಪಾಲ್ಗೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಈ ಎಲ್ಲಾ ನೃತ್ತಸಂಭ್ರಮದ ಅಂತಿಮಘಟ್ಟ ಸಾಮೂಹಿಕ ಕುಣಿತ.

ಹೀಗೆ ಊರ ಕೋಲು ಆದ ಬಳಿಕ ಗಂಡಸರು ’ತಕ್ಕ’ನ ಮನೆಗೆ ಹೋಗುವರು. ಅಲ್ಲಿ ತಾಳ, ದುಡಿಗಳನ್ನೆತ್ತಿಕೊಂಡು ಪೂರ್ವಜರ ನೆನಪನ್ನು ಕೊಡುವ, ಸಂಭ್ರಮದ ಇಂದಿನ ದಿನಗಳನ್ನು ನೆನಪಿಸುವಂತೆ ಜಾನಪದ ಮಟ್ಟಿನ ಹಾಡುಗಳನ್ನು ದುಡಿ ನುಡಿಸುತ್ತಾ ’ಬಾಳೊಪಾಟ್’ ಹಾಡುವರು. ನೆಲದ- ಕುಲದ ಹಿರಿಮೆಯಷ್ಟೇ ಅಲ್ಲದೆ, ಖ್ಯಾತನಾಮರ ಬಗೆಗೆ,ಆ ಮನೆಯಲ್ಲಿ ಹೊಸತಾಗಿ ಮದುವೆಯಾದವರು, ಮಕ್ಕಳು ಹುಟ್ಟಿದ್ದು ಅಥವಾ ಬಂಧುಬಾಂಧವರು ಜೊತೆ ಸೇರಿದ್ದರೆ ಅವನ್ನೂ ಗುರುತಿಸಿ ಜಾಣ್ಮೆಯಿಂದ ಸೇರಿಸಿಕೊಂಡು ಹಾಡುತ್ತಾರೆ. ಆ ಬಳಿಕ ಊರಿನ ಆಯಾ ಐನ್ ಮನೆಯ ಎದುರಿಗೆ ನಿಂತು ಸ್ತುತಿರೂಪದಲ್ಲಿ ಇದೇ ರೀತಿ ಬೆಳಗಾಗುವವರೆಗೆ ಹಾಡುತ್ತಾರೆ. ಆ ರಾತ್ರಿ ಎಲ್ಲರ ಮನೆಗೂ ಹೋಗಲಾಗದೇ ಇದ್ದರೆ ಮಾರನೇ ದಿನ ಹೋಗಿ ಹಾಡಿ ಮುಗಿಸುತ್ತಾರೆ. ಇದನ್ನು” ಮನೆ ಪಾಟ್’ ಅಂದರೆ ’ಮನೆ ಹಾಡುವುದು’ ಎನ್ನುತ್ತಾರೆ. ಅದು ಮುಗಿದು ತಕ್ಕ ಮುಖ್ಯಸ್ಥನ ಮನೆಗೆ ಹೋಗಿ ದುಡಿ ತಾಳಗಳನ್ನು ಹಿಂತಿರುಗಿಸಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಪಾಡ್ದನಗಳನ್ನು ಹೋಲುವ ಈ ಹಾಡಿಗೆ ಒಂದು ರೀತಿಯ ವಿಶೇಷ ರಾಗ, ತಾಳಗಳ ಜೊತೆಗೆ ಅಲ್ಲಲ್ಲೇ ಕವಿತ್ವವನ್ನು ಕಟ್ಟುವ ಪ್ರತಿಭೆಯೂ ಬೇಕಾಗುತ್ತದೆ.

ಹೀಗೆ ಹಾಡಿ ಗಳಿಸಿದ ಹಣದಲ್ಲಿ ಮಾಡಿ ಹಬ್ಬವನ್ನು ಸಮಾಪ್ತಿ ಮಾಡುವ ರೀತಿಯೇ ‘ಊರೊರ್ಮೆ’. ಹುತ್ತರಿ ಮುಗಿದ ಒಂದು ಸಂಜೆ ಊರಿನ ಮನೆಯಿಂದ ಒಬ್ಬನಂತೆ ಪಾಲ್ಗೊಂಡು ಕಾಡುಮರಗಳ ನಡುವಿನ ತೋಪಿನಲ್ಲಿ ಕುಳೀತು ಸಾಮೂಹಿಕ ಭೋಜನ ಮಾಡುವ ಕ್ರಮವಿದು. ಮೊದಲು ಬೇಟೆಯನ್ನೂ ಆಡಿಔತಣ ಮಾಡಿಸುತ್ತಿದ್ದರಂತೆ. ಈಗ ಆ ಕ್ರಮವಿಲ್ಲ. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಬಳಕೆಯಾಗುತ್ತಿದ್ದದ್ದಿದೆ. ಒಟ್ಟಿನಲ್ಲಿ ಒಂದು ಸುಗ್ಗಿಯ ಹಬ್ಬಕ್ಕೆ ಊರಿನವರೆಲ್ಲಾ ಕೂಡಿ ಒಂದಾಗಿ ಬಾಳಬೇಕೆಂಬ ಸಮಷ್ಟಿಪ್ರಜ್ಞೆ ಔತಣದ ಉದ್ದೇಶ.

ಬದಲಾದ ಕಾಲಘಟ್ಟದಲ್ಲಿ ಹುತ್ತರಿ ಆಚರಣೆ

‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೇ, ಪೊಯಿಲೇ... ಪೋಪಕ ಪುತ್ತರಿ ಎಣ್ಣತೆ ಪೋಚಿ ದಮ್ಮಯ್ಯ ಪುತ್ತರಿ ಒಮ್ಮಲು  ಪೋತೆ..- ’ಹುತ್ತರಿ ಬರುವಾಗ ಸಡಗರದಿಂದ ಬಂತು, ಹೋಗುವಾಗ ಯಾರಿಗೂ ಹೇಳದೆ ಹೋಯಿತು, ಬಿನ್ನಹ ಹುತ್ತರಿ- ಒಮ್ಮೆಯೂ ಹೋಗದಿರು..” ಎಂದು ಕೊಡವರು ಹೇಳುವುದು ಇದೆ.

ಇಂದಿಗೆ ಭತ್ತದ ಕೃಷಿ ಕಡಿಮೆಯಾಗತೊಡಗಿದೆ. ಗದ್ದೆಗಳು ವಿರಳ. ಪಟ್ಟಣದ ಜೀವನಕ್ಕೆ ಹಂಬಲಿಸುವವರು ಹೆಚ್ಚು. ಹಬ್ಬದ ಆಚರಣೆಯನ್ನು ಮಾಡಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಗಳನ್ನು ಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್‌ನಲ್ಲಿಯೇ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆಯುತ್ತಾರೆ.

ಹಿಂದಿನ ಶತಮಾನಗಳಲ್ಲಿ ಗುಡಿಕೈಗಾರಿಕೆಯ ಕಸುಬುದಾರರೇ ಹುತ್ತರಿ ಹಬ್ಬಕ್ಕೆ ಬೇಕಾದ ಕುಕ್ಕೆ, ಕುಡುಗೋಲು, ಚಾಪೆ, ಕುತ್ತಿ, , ಕುಡಿಕೆಗಳನ್ನು ಹೊಸದಾಗಿ ತಯಾರಿಸಿ ಹಬ್ಬಕ್ಕೆ ಮುಂಚಿತವಾಗಿ ಪ್ರತಿಯೊಂದು ಮನೆಗೂ ಕೊಂಡೊಯ್ದು ಮಾರುತ್ತಿದ್ದರು. ಇವರಿಗೆ ಮನೆಯವರೂ ಕೂಡಾ ಅಕ್ಕಿ ಹಿಟ್ಟು, ಎಳ್ಳು, ಗೆಣಸು, ಬಾಳೆ, ಬೆಲ್ಲ, ಉಪ್ಪು, ಮೆಣಸು ಮೊದಲಾದವನ್ನು ಕೊಡುತ್ತಿದ್ದರು. ಈಗ ಅಂಥ ಕಸುಬುದಾರರ ಕೊರತೆ ಇದೆ. ಜೀವನ ಸ್ಥಿತಿಯೂ ಬೇರೊಂದು ರೀತಿಯಾಗಿದೆ. ಈಗ ಅಂಗಡಿಮುಂಗಟ್ಟುಗಳಲೇ ವ್ಯಾಪಾರಗಳು ನಡೆಯುತ್ತವೆ. ಕೆಲವೆಡೆ ಮಾತ್ರ ಈ ಪ್ರಾಚೀನ ಸಂಪ್ರದಾಯವನು ಬೇಕಂತಲೇ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಹಬ್ಬಗಳಲ್ಲಿರುವ ಈ ಮಾದರಿಯ ಸಂತೃಪ್ತ ಕೊಡುಕೊಳ್ಳುವಿಕೆ ಬದುಕಿನ ಸಂಭ್ರಮಕ್ಕಷ್ಟೇ ಅಲ್ಲದೆ ಅದನ್ನು ನಂಬಿಕೊಂಡಿರುವ ಗುಡಿಕೈಗಾರಿಕೆಯಂಥ ಅದೆಷ್ಟೋ ಉದ್ಯಮಗಳಿಗೂ ಪ್ರೇರಣಾದಾಯಿ. ಮತ್ತು ಸೌಹಾರ್ದ ವಾತಾವರಣ ಬೆಳೆಯುವಲ್ಲಿ ಅನುಕೂಲಕರ.

  1. ↑ ( ಈ ಲೇಖನದ ಕೆಲವು ಭಾಗಗಳು ವಿಜಯಕರ್ನಾಟಕ ಪತ್ರಿಕೆಯ ಬೋಧಿವೃಕ್ಷದಲ್ಲಿ 2016 ನವೆಂಬರ್ ಮತ್ತು 2017 ರ ಡಿಸೆಂಬರ್ 7ರಂದು ಪ್ರಕಟವಾಗಿದೆ.)https://www.noopurabhramari.com/huttarisuggihosatinahuggi/
  2. ↑ https://www.facebook.com/100000332230718/videos/2076335215720866/ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಬಿ.ಜಿ. ನಾರಾಯಣ ಭಟ್ಟರು ಮಾಡಿದ ಪ್ರಾರ್ಥನೆ. (2018 ನವೆಂಬರ್ ಹುತ್ತರಿ ಕಾರ್ತಿಕ ಪೌರ್ಣಮಿ ದಿನ)