ಸಮುದ್ರಮಥನ ಎಂಬ ಸಮವಕಾರ ರೂಪಕ: Difference between revisions
(Created page with " Authored by ಡಾ. ಪ್ರತಿಭಾ ಸತ್ಯನಾರಾಯಣ. Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ. ಸಮವಕಾರ ಎಂಬ ಪದವನ್ನು 'ಸಂ" ಮತ್ತು "ಅವ" ಎಂಬ ಎರಡು ಉಪಸರ್ಗಗಳನ್ನು "ಕೃ ವಿಕ್ಷೆಪೆ" ಎಂಬ ಧಾ...") |
mNo edit summary |
||
| Line 28: | Line 28: | ||
ಹೀಗಿರುವ ಸಮವಕಾರವನ್ನು ತೀರ್ಥಕ್ಷೇತ್ರಗಳಲ್ಲಿ ಅಭಿನಯಿಸಿದರೆ, ಮುಗ್ಧರಾದ ದೇವಭಕ್ತರು, ಬಾಲಕರು, ಹೆಂಗಸರು, ಮೂರ್ಖರು ಕೂಡ ಇದನ್ನು ನೋಡಿ ಆನಂದಿಸುತ್ತಾರೆ. 18 ನಾಡಿಕೆಗಳ ಕಾಲಪ್ರಮಾಣದಲ್ಲಿ ಇದು ನಡೆಯುತ್ತಿತ್ತು (ಒಂದು ನಾಡಿಕೆ 24 ನಿಮಿಷದ್ದಾಗಿರುತ್ತದೆ. ಹಾಗಾಗಿ 432 ನಿಮಿಷಗಳು ಅಥವಾ ಸುಮಾರು ಏಳುವರೆ ಘಂಟೆಗಳ ಕಾಲ ಇದರದ್ದು). ಹೀಗೆ ಸಮವಕಾರವು ಎಲ್ಲರಿಗೂ "ಏಕo ಸಮಾರಾಧನಮ್ " ಎಂಬಂತೆ ಅನ್ವಯಿಸುತ್ತದೆ. | ಹೀಗಿರುವ ಸಮವಕಾರವನ್ನು ತೀರ್ಥಕ್ಷೇತ್ರಗಳಲ್ಲಿ ಅಭಿನಯಿಸಿದರೆ, ಮುಗ್ಧರಾದ ದೇವಭಕ್ತರು, ಬಾಲಕರು, ಹೆಂಗಸರು, ಮೂರ್ಖರು ಕೂಡ ಇದನ್ನು ನೋಡಿ ಆನಂದಿಸುತ್ತಾರೆ. 18 ನಾಡಿಕೆಗಳ ಕಾಲಪ್ರಮಾಣದಲ್ಲಿ ಇದು ನಡೆಯುತ್ತಿತ್ತು (ಒಂದು ನಾಡಿಕೆ 24 ನಿಮಿಷದ್ದಾಗಿರುತ್ತದೆ. ಹಾಗಾಗಿ 432 ನಿಮಿಷಗಳು ಅಥವಾ ಸುಮಾರು ಏಳುವರೆ ಘಂಟೆಗಳ ಕಾಲ ಇದರದ್ದು). ಹೀಗೆ ಸಮವಕಾರವು ಎಲ್ಲರಿಗೂ "ಏಕo ಸಮಾರಾಧನಮ್ " ಎಂಬಂತೆ ಅನ್ವಯಿಸುತ್ತದೆ. | ||
== | == ಅಮಾತ್ಯ ವತ್ಸರಾಜ ರಚಿತ ರೂಪಕಗಳು == | ||
ಚಾಲುಕ್ಯ ಚಕ್ರವರ್ತಿಯಾದ ಪರಮರ್ದಿದೇವ ಮತ್ತು ಅವನ ಮಗನಾದ ತ್ರೈಲೋಕ್ಯವರ್ಮದೇವನ ಕಾಲದಲ್ಲಿ ಮಂತ್ರಿಯಾಗಿದ್ದ ಕಾರಣ “ಅಮಾತ್ಯ ವತ್ಸರಾಜ”ನೆಂದೇ ಪ್ರಸಿದ್ಧವಾದ ನಮ್ಮ ಸಮವಕಾರದ ಕವಿಯು ದೃಶ್ಯಸಾಹಿತ್ಯದ ಪ್ರಕಾರಕ್ಕೆ ನಾವೀನ್ಯವಾಗಿ ಕೊಡುಗೆಯನ್ನು ನೀಡಿದ್ದಾನೆ. ಹತ್ತು ಪ್ರಕಾರದ ರೂಪಕಗಳಲ್ಲಿ, ಆರು ಪ್ರಕಾರದ ರೂಪಕಗಳು ನಮಗೆ ಸಿಕ್ಕಿದ್ದು, ಅವುಗಳು ಹೀಗಿವೆ<ref>कविवत्सराजप्रणीतरूपकषट्कम् | ಚಾಲುಕ್ಯ ಚಕ್ರವರ್ತಿಯಾದ ಪರಮರ್ದಿದೇವ ಮತ್ತು ಅವನ ಮಗನಾದ ತ್ರೈಲೋಕ್ಯವರ್ಮದೇವನ ಕಾಲದಲ್ಲಿ ಮಂತ್ರಿಯಾಗಿದ್ದ ಕಾರಣ “ಅಮಾತ್ಯ ವತ್ಸರಾಜ”ನೆಂದೇ ಪ್ರಸಿದ್ಧವಾದ ನಮ್ಮ ಸಮವಕಾರದ ಕವಿಯು ದೃಶ್ಯಸಾಹಿತ್ಯದ ಪ್ರಕಾರಕ್ಕೆ ನಾವೀನ್ಯವಾಗಿ ಕೊಡುಗೆಯನ್ನು ನೀಡಿದ್ದಾನೆ. ಹತ್ತು ಪ್ರಕಾರದ ರೂಪಕಗಳಲ್ಲಿ, ಆರು ಪ್ರಕಾರದ ರೂಪಕಗಳು ನಮಗೆ ಸಿಕ್ಕಿದ್ದು, ಅವುಗಳು ಹೀಗಿವೆ<ref>कविवत्सराजप्रणीतरूपकषट्कम् | ||
| Line 51: | Line 51: | ||
ದೊರಕಿರುವುದು ಈ ಆರೇ ಆಗಿವೆ. ಇವುಗಳಲ್ಲಿ ಅವನ ಕಾಲದಲ್ಲಿದ್ದ ಸಾಮಾಜಿಕ ಪರಿಸ್ಥಿತಿ ಮತ್ತು ಸಾಹಿತ್ಯಭಿರುಚಿ ಪ್ರತಿಫಲಿತವಾಗುತ್ತದೆ. | ದೊರಕಿರುವುದು ಈ ಆರೇ ಆಗಿವೆ. ಇವುಗಳಲ್ಲಿ ಅವನ ಕಾಲದಲ್ಲಿದ್ದ ಸಾಮಾಜಿಕ ಪರಿಸ್ಥಿತಿ ಮತ್ತು ಸಾಹಿತ್ಯಭಿರುಚಿ ಪ್ರತಿಫಲಿತವಾಗುತ್ತದೆ. | ||
== | == ಸಮುದ್ರಮಥನ ಎಂಬ ಸಮವಕಾರ == | ||
ದದಶರೂಪಕಗಳ ಪ್ರಕಾರಗಳನ್ನು ರಚಿಸಲು ಅನೇಕ ಕವಿಗಳು ಪ್ರಯತ್ನಪಟ್ಟರೂ " ಸಮವಕಾರ" ಎಂಬ ರೂಪಕದ ಪ್ರಕಾರವನ್ನು ಯಾರೂ ಬರೆದಿರಲಿಲ್ಲ. ಮೊಟ್ಟಮೊದಲಿಗೆ, ಹದಿಮೂರನೇ ಶತಮಾನದ ಪರಮರ್ದಿದೇವನ ಅಮಾತ್ಯನಾದ ವತ್ಸರಾಜನು '''( ಕ್ರಿ. ಶ 1163-1203)''' ಈ ಸಾಹಸದಲ್ಲಿ ತೊಡಗಿ ಯಶಸ್ಸನ್ನು ಪಡೆದಿದ್ದಾನೆ.<ref>नाटकं सप्रकरणमङ्को व्यायोग एव च | | ದದಶರೂಪಕಗಳ ಪ್ರಕಾರಗಳನ್ನು ರಚಿಸಲು ಅನೇಕ ಕವಿಗಳು ಪ್ರಯತ್ನಪಟ್ಟರೂ " ಸಮವಕಾರ" ಎಂಬ ರೂಪಕದ ಪ್ರಕಾರವನ್ನು ಯಾರೂ ಬರೆದಿರಲಿಲ್ಲ. ಮೊಟ್ಟಮೊದಲಿಗೆ, ಹದಿಮೂರನೇ ಶತಮಾನದ ಪರಮರ್ದಿದೇವನ ಅಮಾತ್ಯನಾದ ವತ್ಸರಾಜನು '''( ಕ್ರಿ. ಶ 1163-1203)''' ಈ ಸಾಹಸದಲ್ಲಿ ತೊಡಗಿ ಯಶಸ್ಸನ್ನು ಪಡೆದಿದ್ದಾನೆ.<ref>नाटकं सप्रकरणमङ्को व्यायोग एव च | | ||
| Line 97: | Line 97: | ||
ಈ ರೂಪಕದ ಪ್ರಯೋಗದಲ್ಲಿ ಹೇಗೆ ಅಸಾಮಾನ್ಯವಾದ ಅಲೌಕಿಕ ವಸ್ತುಗಳನ್ನು ತರುತ್ತಿದ್ದರೋ, ತಿಳಿಯದು. ಲಕ್ಷಣಕ್ಕೆ ಹೊಂದುವಂತೆ ಉತ್ತಮ ಕಥವಸ್ತುವನ್ನು ಹುಡುಕಿ ಬರೆದಿರುವುದು ಸ್ತುತ್ಯ. ಉಳಿದ ರೂಪಕಗಳಂತೆ, ಇದನ್ನು ಪ್ರಾಯೋಗಿಸಲು ಬರೆದದ್ದು ಎಂದು ವತ್ಸರಾಜ ಹೇಳಿಕೊಂಡಿಲ್ಲ. ಆದರೆ ಆ ಕಾಲದಲ್ಲಿ ಪ್ರಚಲಿತವಾದ ವಿಶಿಷ್ಟ ಪದಗಳ ಬಳಕೆ ಮತ್ತು ಹಾಸ್ಯ ಜನರಂಜಕವಾಗಿದೆ. ಚಿತ್ರಪಟದ ಕಲ್ಪನೆ, ಸಮುದ್ರನು ವಸ್ತುಗಳನ್ನು ಹಂಚುವುದರ ಕಲ್ಪನೆ, ಬಲಿಯ ಪಾತ್ರದ ಪರಿಚಯ ಎಲ್ಲಾ ಹೊಸತಾದವು. ಕೊನೆಯದಾಗಿ, ಭಾಷಾ ಸೌoದರ್ಯ ಮತ್ತು ಅನೇಕ ಪ್ರಾಕೃತ ಶ್ಲೋಕಗಳ ರಚನೆ ನಾವೀನ್ಯವನ್ನು ತೋರುತ್ತದೆ. | ಈ ರೂಪಕದ ಪ್ರಯೋಗದಲ್ಲಿ ಹೇಗೆ ಅಸಾಮಾನ್ಯವಾದ ಅಲೌಕಿಕ ವಸ್ತುಗಳನ್ನು ತರುತ್ತಿದ್ದರೋ, ತಿಳಿಯದು. ಲಕ್ಷಣಕ್ಕೆ ಹೊಂದುವಂತೆ ಉತ್ತಮ ಕಥವಸ್ತುವನ್ನು ಹುಡುಕಿ ಬರೆದಿರುವುದು ಸ್ತುತ್ಯ. ಉಳಿದ ರೂಪಕಗಳಂತೆ, ಇದನ್ನು ಪ್ರಾಯೋಗಿಸಲು ಬರೆದದ್ದು ಎಂದು ವತ್ಸರಾಜ ಹೇಳಿಕೊಂಡಿಲ್ಲ. ಆದರೆ ಆ ಕಾಲದಲ್ಲಿ ಪ್ರಚಲಿತವಾದ ವಿಶಿಷ್ಟ ಪದಗಳ ಬಳಕೆ ಮತ್ತು ಹಾಸ್ಯ ಜನರಂಜಕವಾಗಿದೆ. ಚಿತ್ರಪಟದ ಕಲ್ಪನೆ, ಸಮುದ್ರನು ವಸ್ತುಗಳನ್ನು ಹಂಚುವುದರ ಕಲ್ಪನೆ, ಬಲಿಯ ಪಾತ್ರದ ಪರಿಚಯ ಎಲ್ಲಾ ಹೊಸತಾದವು. ಕೊನೆಯದಾಗಿ, ಭಾಷಾ ಸೌoದರ್ಯ ಮತ್ತು ಅನೇಕ ಪ್ರಾಕೃತ ಶ್ಲೋಕಗಳ ರಚನೆ ನಾವೀನ್ಯವನ್ನು ತೋರುತ್ತದೆ. | ||
== ಗ್ರಂಥ | == ಗ್ರಂಥ ಪರಮಾರ್ಶನ == | ||
कविवत्सराजप्रणीतरूपकषट्कम्- Chimanlal. V. Dalal, Central Library,Baroda, 1918. | कविवत्सराजप्रणीतरूपकषट्कम्- Chimanlal. V. Dalal, Central Library,Baroda, 1918. | ||
Latest revision as of 11:13, 2 January 2024
Authored by ಡಾ. ಪ್ರತಿಭಾ ಸತ್ಯನಾರಾಯಣ. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ.
ಸಮವಕಾರ ಎಂಬ ಪದವನ್ನು 'ಸಂ" ಮತ್ತು "ಅವ" ಎಂಬ ಎರಡು ಉಪಸರ್ಗಗಳನ್ನು "ಕೃ ವಿಕ್ಷೆಪೆ" ಎಂಬ ಧಾತುವಿನೊಂದಿಗೆ ಸೇರಿಸಿ ನಿಷ್ಪತ್ತಿ ಮಾಡಲಾಗಿದೆ. ಇದು "ಚೆನ್ನಾಗಿ ಚೆಲ್ಲಲ್ಪಡುವುದು/ ಸಿಂಪಡಿಸಲ್ಪಡುವುದು" ಎಂಬ ಸಾಮಾನ್ಯ ಅರ್ಥವನ್ನು ಹೊಂದಿದೆ. ನಾಟ್ಯಶಾಸ್ತ್ರಕ್ಕೆ ಅಭಿನವಗುಪ್ತನು ಬರೆದ ಅಭಿನವ ಭಾರತಿ ಎಂಬ ವ್ಯಾಖ್ಯಾನದ ಪ್ರಕಾರ, ಸಂಬದ್ಧವಿದ್ದರೂ ಅರ್ಥವು ಹರಡಿರುವ ಈ ರೂಪಕಪ್ರಕಾರದಲ್ಲಿ ಅರ್ಥವು ಉತ್ಕರ್ಷವಾಗಿ ಇರದೇ ಎಲ್ಲಾ ಅಂಕಗಳಲ್ಲಿಯೂ ಹರಡಿಕೊಂಡಿದೆ.- "संबद्धो अवकीर्णश्च यत्रार्थः सः समवकारः" ಎನ್ನಲಾಗಿದೆ. ಇಲ್ಲಿ ಒಂದು ಅಂಕವೇ ಸಂಪೂರ್ಣವಾದಂತೆ ತೋರಿದರೂ ಬೀಜದ ಮೂಲಕ ಮೂರು ಅಂಕಗಳ ನಡುವೆ ಸಂಬಂಧವಿರುತ್ತದೆ ಮತ್ತು ಒಂದು ಮಹಾವಾಕ್ಯವು ಎಲ್ಲಾ ಅಂಕಗಳಲ್ಲೂ ಹಾಸುಹೋಕ್ಕಾಗಿ ತೋರುತ್ತದೆ.
ಲಕ್ಷಣ
देवासुरबीजकृतः प्रख्यातोदात्तनायकश्चैव |
त्रङ्कस्तथा त्रिकपटस्त्रिविद्रवः स्यास्त्रिशृङ्गारः ||ना. शा 18,63|| ನಾಟಕ ಮತ್ತು ಪ್ರಕರಣಗಳ ಲಕ್ಷಣದ ನಂತರ ಈ ರೂಪಕದ ಲಕ್ಷಣ ಮತ್ತು ವಿವರಗಳನ್ನು ಭರತನು ಸುದೀರ್ಘವಾಗಿ ಹದಿನೈದು ಶ್ಲೋಕಗಳಲ್ಲಿ ಹೀಗೆ ಕೊಟ್ಟಿದ್ದಾನೆ. ಅಭಿನವಗುಪ್ತನು ತ್ರಿವರ್ಗಗಳು ಇದರಲ್ಲಿ ಉತ್ಪನ್ನವಾಗುವ ಕಾರಣ ಮತ್ತು ಅನೇಕ ಅಂಕಗಳಿರುವ ಕಾರಣ, ಎಲ್ಲಾ ರೂಪಕಗಳಿಗೂ ಪೂರ್ವಭಾವಿಯಾಗಿ ಇದರ ವಿವರಣೆ ಇದೆ, ಎಂದು ಸಮರ್ಥಿಸುತ್ತಾನೆ.
ಸಮವಕಾರದಲ್ಲಿ ದೇವಾಸುರರ ಕಥೆ ಇದೆ. ಪ್ರಖ್ಯಾತ ನಾಯಕನಿರುತ್ತಾನೆ. ಅಪ್ರಖ್ಯಾತ ಬೃಹತ್ಕಥೆಯ ನಾಯಕನೋ, ಅಥವಾ ಕವಿಕಲ್ಪಿತ ನಾಯಕನೋ ಇರುವುದಿಲ್ಲ. ಮನುಷ್ಯನಿಗೆ ಹೋಲಿಸಿದರೆ, ದೇವತೆಗಳು ಉದ್ಧತರೇ. ಅವರಲ್ಲಿ ಬ್ರಹ್ಮಾದಿಗಳು ಪ್ರಶಾಂತರು, ಕೆಲವರು ನರಸಿಂಹಾದಿಗಳು ಉದ್ಧತ್ತರು. ಆದರೆ ಇಲ್ಲಿ ಶಿವನಂತಹ ಗಂಭೀರ, ಉದಾತ್ತ ನಾಯಕನಿರಬೇಕು, ಎನ್ನುತ್ತಾನೆ ಅಭಿನವಗುಪ್ತ. ಮೂರೇ ಅಂಕಗಳಿದ್ದು ಪ್ರತಿ ಅಂಕದಲ್ಲಿಯೂ
1) ಕಪಟ ಎಂದರೆ ಮೋಸ ಮಾಡುವುದು (ವಸ್ತುವಿನ ವಂಚನೆ, ದೈವವಶದಿಂದ ಆದ ವಂಚನೆ ಮತ್ತು ಬೇರೆಯವರಿಂದ ಆದ ವಂಚನೆ ಎಂದು ಮೂರು ವಿಧ)
2) ವಿದ್ರವ ಎಂದರೆ ಪಲಾಯನ (ಅಚೇತನ ವಸ್ತುವಿನಿಂದ ಉಂಟಾಗುವ, ಬೇರೆಯವರಿಂದ ಉಂಟಾಗುವ, ಮತ್ತು ಇಬ್ಬರಿಂದಲೂ ಉಂಟಾಗುವ ವಿದ್ರವ ಎಂದು ಇದು ಮೂರು ಬಗೆಯಾದದ್ದು. ಅನರ್ಥವಾದ ವಸ್ತುವಿನಿಂದ ಓಡಿ ಹೋಗುವುದೇ ವಿದ್ರವ)
3) ಶೃಂಗಾರ( ಧರ್ಮ ಶೃಂಗಾರ, ಅರ್ಥ ಶೃಂಗಾರ ಮತ್ತು ಕಾಮ ಶೃಂಗಾರ ಎಂಬ ಮೂರು ವಿಧ )
ಎಂಬ ಮೂರು ಅರ್ಥಗಳಿರಬೇಕು. ಕಪಟವು ಉಪಾಯವನ್ನು ಯೋಚಿಸುವುದರಲ್ಲಿ, ವಿದ್ರವವು ವ್ಯುತ್ಪತ್ತಿ ಅಂಶದಲ್ಲಿ( ಇತಿವೃತ್ತದ ಬೆಳವಣಿಗೆಯಲ್ಲಿ) ಮತ್ತು ಶೃಂಗಾರವು ಫಲಾಂಶದಲ್ಲಿ ತೋರುತ್ತವೆ.
ಒoದೊಂದು ಅಂಕದಲ್ಲೂ 12 ನಾಯಕರಿರಬೇಕು ಎಂದು ಕೆಲವರು ಹೇಳಿದರೆ, ಒಂದೊಂದು ಅಂಕಗಳಲ್ಲಿಯೂ ನಾಯಕ, ಪ್ರತಿನಾಯಕ ಮತ್ತು ಅವರ ಇಬ್ಬರು ಸಹಾಯಕರು ಸೇರಿ, ಮೂರು ಅಂಕಗಳಲ್ಲಿ ಒಟ್ಟು ಹನ್ನೆರಡು ನಾಯಕರು ಎಂದು ಇನ್ನೂ ಕೆಲವರು ತಿಳಿಸುತ್ತಾರೆ.
ಹದಿನೆಂಟು ನಾಡಿಕೆಗಳ ಕಾಲಪ್ರಮಾಣದಲ್ಲಿ ಸಮವಕಾರವು ನಡೆಯುತ್ತದೆ. ಮೊದಲನೇ ಅಂಕದಲ್ಲಿ ಕಾಮ ಶೃಂಗಾರವಿರುವ ಕಾರಣ, ಹಾಸ್ಯವೂ ಇರುತ್ತದೆ. ವೀಥಿಯ ಆಂಶಗಳೂ ಇರುತ್ತವೆ.
ಶ್ಲೋಕಗಳಲ್ಲಿ ಉಷ್ಣಿಕ್ (7 ಮಾತ್ರೆಗಳು, ಗಾಯತ್ರಿ 8 ಮಾತ್ರೆಗಳು )ಮುಂತಾದ ಕ್ಲಿಷ್ಟವಾದ, ಅರ್ಧಸಮ, ಅರ್ಧವಿಷಮವಾದ ಬಂಧಗಳಿರಬೇಕು ಎಂದು ಭರತನು ಹೇಳಿದ್ದರೆ, ಉದ್ಭಟನು ಸ್ರಗ್ಧರ ಮುಂತಾದ ಛಂದಸ್ಸುಗಳು ಇರಬೇಕು, ಚಿಕ್ಕ ಛಂದಸ್ಸು ಇರಬಾರದು, ಎಂದು ಅಭಿಪ್ರಯಿಸಿದ್ದಾನೆ. ಅನೇಕ ರಸಗಳಿದ್ದು, ಕೈಶಿಕಿ ವೃತ್ತಿಯು ಇಲ್ಲಿ ಇಲ್ಲದಿರುವುದರಿಂದ, ಗೀತ ನೃತ್ತ ವಾದ್ಯಗಳು ಪ್ರಧಾನವಾಗಿ ತೋರುವುದಿಲ್ಲ. ಭಾರತೀ ವೃತ್ತಿಯು ಪ್ರಧಾನವಾಗಿರುತ್ತದೆ. ರೌದ್ರದ ಅಂಶವು ಇರುವುದಿಲ್ಲ.
ಹೀಗಿರುವ ಸಮವಕಾರವನ್ನು ತೀರ್ಥಕ್ಷೇತ್ರಗಳಲ್ಲಿ ಅಭಿನಯಿಸಿದರೆ, ಮುಗ್ಧರಾದ ದೇವಭಕ್ತರು, ಬಾಲಕರು, ಹೆಂಗಸರು, ಮೂರ್ಖರು ಕೂಡ ಇದನ್ನು ನೋಡಿ ಆನಂದಿಸುತ್ತಾರೆ. 18 ನಾಡಿಕೆಗಳ ಕಾಲಪ್ರಮಾಣದಲ್ಲಿ ಇದು ನಡೆಯುತ್ತಿತ್ತು (ಒಂದು ನಾಡಿಕೆ 24 ನಿಮಿಷದ್ದಾಗಿರುತ್ತದೆ. ಹಾಗಾಗಿ 432 ನಿಮಿಷಗಳು ಅಥವಾ ಸುಮಾರು ಏಳುವರೆ ಘಂಟೆಗಳ ಕಾಲ ಇದರದ್ದು). ಹೀಗೆ ಸಮವಕಾರವು ಎಲ್ಲರಿಗೂ "ಏಕo ಸಮಾರಾಧನಮ್ " ಎಂಬಂತೆ ಅನ್ವಯಿಸುತ್ತದೆ.
ಅಮಾತ್ಯ ವತ್ಸರಾಜ ರಚಿತ ರೂಪಕಗಳು
ಚಾಲುಕ್ಯ ಚಕ್ರವರ್ತಿಯಾದ ಪರಮರ್ದಿದೇವ ಮತ್ತು ಅವನ ಮಗನಾದ ತ್ರೈಲೋಕ್ಯವರ್ಮದೇವನ ಕಾಲದಲ್ಲಿ ಮಂತ್ರಿಯಾಗಿದ್ದ ಕಾರಣ “ಅಮಾತ್ಯ ವತ್ಸರಾಜ”ನೆಂದೇ ಪ್ರಸಿದ್ಧವಾದ ನಮ್ಮ ಸಮವಕಾರದ ಕವಿಯು ದೃಶ್ಯಸಾಹಿತ್ಯದ ಪ್ರಕಾರಕ್ಕೆ ನಾವೀನ್ಯವಾಗಿ ಕೊಡುಗೆಯನ್ನು ನೀಡಿದ್ದಾನೆ. ಹತ್ತು ಪ್ರಕಾರದ ರೂಪಕಗಳಲ್ಲಿ, ಆರು ಪ್ರಕಾರದ ರೂಪಕಗಳು ನಮಗೆ ಸಿಕ್ಕಿದ್ದು, ಅವುಗಳು ಹೀಗಿವೆ[1] :
1-ಕರ್ಪೂರಚರಿತ ಎಂಬ ಭಾಣ
2- ಕಿರಾತಾರ್ಜುನೀಯ ಎಂಬ ವ್ಯಾಯೋಗ
3- ತ್ರಿಪುರದಾಹ ಎಂಬ ಡಿಮ
4- ರುಕ್ಮಿಣಿಪರಿಣಯ ಎಂಬ ಈಹಾಮೃಗ
5- ಸಮುದ್ರಮಥನ ಎಂಬ ಸಮವಕಾರ
6- ಹಾಸ್ಯಚೂಡಾಮಣಿ ಎಂಬ ಪ್ರಹಸನ
ಅವನ ಇನ್ನೂ ಕೆಲವು ರೂಪಕಪ್ರಕಾರಗಳಿದ್ದಿರಬಹುದು, ಆದರೆ
ದೊರಕಿರುವುದು ಈ ಆರೇ ಆಗಿವೆ. ಇವುಗಳಲ್ಲಿ ಅವನ ಕಾಲದಲ್ಲಿದ್ದ ಸಾಮಾಜಿಕ ಪರಿಸ್ಥಿತಿ ಮತ್ತು ಸಾಹಿತ್ಯಭಿರುಚಿ ಪ್ರತಿಫಲಿತವಾಗುತ್ತದೆ.
ಸಮುದ್ರಮಥನ ಎಂಬ ಸಮವಕಾರ
ದದಶರೂಪಕಗಳ ಪ್ರಕಾರಗಳನ್ನು ರಚಿಸಲು ಅನೇಕ ಕವಿಗಳು ಪ್ರಯತ್ನಪಟ್ಟರೂ " ಸಮವಕಾರ" ಎಂಬ ರೂಪಕದ ಪ್ರಕಾರವನ್ನು ಯಾರೂ ಬರೆದಿರಲಿಲ್ಲ. ಮೊಟ್ಟಮೊದಲಿಗೆ, ಹದಿಮೂರನೇ ಶತಮಾನದ ಪರಮರ್ದಿದೇವನ ಅಮಾತ್ಯನಾದ ವತ್ಸರಾಜನು ( ಕ್ರಿ. ಶ 1163-1203) ಈ ಸಾಹಸದಲ್ಲಿ ತೊಡಗಿ ಯಶಸ್ಸನ್ನು ಪಡೆದಿದ್ದಾನೆ.[2]
ನಾಂದಿ
ವತ್ಸರಾಜನು ಈ ಸಮವಕಾರದ ನಾಂದಿ ಶ್ಲೋಕದಲ್ಲಿ[3], ಶಿವನನ್ನು ಸಮುದ್ರಕ್ಕೆ ಹೋಲಿಸಿ, ಅವನ ಆಶೀರ್ವಾದವನ್ನು ಕೋರುವ ಸುಂದರ ಪದ್ಯದಿಂದ ಆರಂಭಿಸಿದ್ದಾನೆ. ಶಿವ ಮತ್ತು ಸಮುದ್ರ - ಇವರಿಬ್ಬರೂ ಗಂಗೆಯನ್ನು ಮತ್ತು ಚಂದ್ರನನ್ನು ಧರಿಸಿದ್ಧಾರೆ. ಶಿವನು ಹಣೆಗಣ್ಣಲ್ಲಿ ಅಗ್ನಿಯನ್ನು ಧರಿಸಿದರೆ, ಸಮುದ್ರನು ವಡವಾಗ್ನಿಯನ್ನು ಹೊಂದಿದ್ದಾನೆ.ಇಬ್ಬರೂ ವಿಷವನ್ನು ಹೊಂದುದ್ದು, ಗುಣಗಳೆoಬ ರತ್ನಗಳಿoದ ರಾರಾಜಿಸುತ್ತಾರೆ. ಹೀಗಿರುವ ಶಿವನು ಸಮುದ್ರದಂತೆ ನಿಮ್ಮ ಐಶ್ವರ್ಯವನ್ನು ವರ್ಧಸಲಿ " ಎಂದು "आशीर्नमस्क्रिया वा स्यात् वस्तुनिर्देश एव वा" ಎಂಬ ಆಶೀರ್ವಾದಪೂರ್ವಕ ಮಂಗಲವನ್ನು ಮಾಡಿದ್ದಾನೆ. ಇಲ್ಲಿ ಸಮುದ್ರದ, ಗಂಗೆಯ, ಚಂದ್ರನ ನಾಮೋಲ್ಲೇಖನವಿದ್ದು, ಶ್ರೀ ಎಂಬ ಪದದಿಂದ ಲಕ್ಷ್ಮಿಯ ಸೂಚನೆಯೂ ಇದೆ. ಎರಡನೇ ಶ್ಲೋಕದಲ್ಲಿ ಮಂದರಾದ್ರಿಯ ಶಿಖರಗಳಿಂದ ಎಲ್ಲಾ ಕಡೆಯೂ ಕಲ್ಲೋಲಗೊಳಿಸಿ, ಭಯದಿಂದ ಲಕ್ಷ್ಮಿಯು ನಾರಾಯಣನನ್ನು ಆಲಿಂಗಿಸುವಂತೆ ಮಾಡಿದ ಸಮುದ್ರದ ಅಲೆಗಳು ನಿಮ್ಮನ್ನು ರಕ್ಷಿಸಲಿ, ಎಂದು ಹೇಳಿ, ರೂಪಕದ ಇತಿವೃತ್ತವನ್ನು ಸೂಚಿಸುತ್ತಾನೆ.
ಪ್ರಸ್ತಾವನೆಯಲ್ಲಿ ಸೂತ್ರಧಾರ ಮತ್ತು ಸ್ಥಾಪಕರು ಬಂದು,ಅವರ ಸಂವಾದದಲ್ಲಿ ಬೆಳಗಿನ ಜಾವದ ಬ್ರಾಹ್ಮೀ ಮುಹೂರ್ತದಲ್ಲಿ, ಹನ್ನೆರಡು ಸೋದರರಿಗೆ ಒಳಿತಾಗಲೆಂದು ಪ್ರಾರ್ಥಿಸುತ್ತೇನೆ,ಎಂದು ಸೂತ್ರಧಾರನು ಎನ್ನುತ್ತಾನೆ. ಇಲ್ಲಿ, ಸಮವಕಾರದಲ್ಲಿ ಇರಬೇಕಾದ 12 ಜನ ನಾಯಕರ ಸೂಚನೆಯಿದೆ. ಹನ್ನೆರಡು ಆದಿತ್ಯರು ಹನ್ನೆರಡು ಮಾಸಗಳನ್ನು ಬೆಳಗುವಂತೆ, ನಮಗೆಲ್ಲರಿಗೂ ಸಮುದ್ರದಂತಿರುವ ಪರಮರ್ದಿದೇವ ರಾಜನು ಮನೋಭಿಲಾಷೆಗಳನ್ನು ಈಡೇರಿಸಲಿ, ಎಂದು ಸ್ಥಾಪಕನು ಆಶಿಸುತ್ತಾನೆ. समुद्रादेव सर्वे मनोरथाः निर्वहन्ति( ಸಮುದ್ರದಿಂದಲೇ ಎಲ್ಲಾ ಮನೋರಥಗಳೂ ಸಿದ್ಧಿಸುತ್ತವೆ ಎಂದು ನೇಪಥ್ಯದಲ್ಲಿ ಕೇಳಿದಾಗ ಪದ್ಮಕನ ಆಗಮನವನ್ನು ಸೂತ್ರಧಾರನು ಸೂಚಿಸಿ ಎಲ್ಲರೂ ನಿರ್ಗಮಿಸುತ್ತಾರೆ. ಪ್ರಸ್ತಾವನೆಯಲ್ಲಿ ಮುದ್ರಾಲಂಕಾರದಿಂದ[4] ಕಥಾವಸ್ತುವನ್ನು ಸೂಚಿಸಿದ್ದಾನೆ.
ಕಥಾಪ್ರಸಕ್ತಿ
ಮೊದಲನೇ ಅಂಕ
ಪದ್ಮಕ ( ಲಕ್ಷ್ಮಿಯ ಸೇವಕ ) ಮತ್ತು ನಿಷ್ಠುರಕ ( ಒಬ್ಬ ದೇವ ) ಎಂಬ ಎರಡು ಪಾತ್ರಗಳ ಮಾತು ಕ್ರಮವಾಗಿ ಪ್ರಾಕೃತ ಮತ್ತು ಸಂಸ್ಕೃತದಲ್ಲಿ ಇದೆ. ನಿಷ್ಠುರಕನು ಸಮುದ್ರವಾಸಿನಿಯಾದ ಲಕ್ಷ್ಮಿಗೂ, ದೃಷ್ಟಿಗೋಚರನಲ್ಲದ ನಾರಾಯಣನಿಗೂ ಹೇಗೆ ಪ್ರೇಮ ಎಂದು ಉಪಹಾಸ ಮಾಡುತ್ತಾನೆ. ತನ್ನ ಧ್ಯಾನಕ್ಕೆ ತನಗೆ ಸಿಕ್ಕಿದ ನಾರಾಯಣನ ಚಿತ್ರವನ್ನು ತೋರಿಸುತ್ತಾನೆ. ಅದಕ್ಕೆ ಪದ್ಮಕನು, ಅದನ್ನು ಸಮುದ್ರನ ಪತ್ನಿಯಾದ ಗಂಗೆಯು ಸಮುದ್ರನ ಮಗಳಾದ ಲಕ್ಷ್ಮಿಗೆ ರಚಿಸಿರುವ ಚಿತ್ರಪಟ ಎಂದು ತಿಳಿಸುತ್ತಾನೆ. ಇಬ್ಬರೂ ಆ ಚಿತ್ರಕ್ಕೆ ಜಗಳವಾಡುತ್ತಾರೆ. ನಾರಾಯಣನನ್ನು ಕುರಿತ ಲಕ್ಷ್ಮಿಯ ಪ್ರೀತಿಯ ಬಗ್ಗೆ ಪ್ರಾಕೃತದಲ್ಲೇ 3 ಶ್ಲೋಕಗಳನ್ನು ಹೇಳುತ್ತಾನೆ (6-8). ಮಂದಮತಿಗಳಾದ ಅವರಿಬ್ಬರ ಜಗಳ ಜನರಂಜಕವಾಗಿದೆ. ನಿಷ್ಠುರಕನು ಪದ್ಮಕನಿಗೆ ತನ್ನ ಕುಶಾಸನವನ್ನು ತೆಗೆದು ಹೊಡೆಯಲು ಯತ್ನಿಸಿದರೆ, ಪದ್ಮಕನು ಯಾವುದಾದರೂ ಸಮುದ್ರ ಜಂತುವು ನಿನ್ನನ್ನು ತಿನ್ನಲಿ ಎಂದು ಹಾರೈಸುತ್ತಾನೆ.ಅವರ ಸಂವಾದದ ಮೂಲಕ, ಲಕ್ಷ್ಮಿಯು ಪಾರ್ವತಿಯನ್ನು ಅರ್ಚಿಸಲು ಸಿದ್ಧಳಾಗಿದ್ದಾಳೆ, ಎಂದು ತಿಳಿಯುತ್ತದೆ. ಹೀಗೆ ಅನ್ನುತ್ತಿದ್ದಂತೆ, ಒಂದು ಆನೆಯು ಸಮುದ್ರದ ಮಧ್ಯದಿಂದ ಹೊರಬರುವುದನ್ನು ನೋಡಿ, ಭಯದಿಂದ ನಿಷ್ಠುರಕನು ಓಡಿ ಹೋಗುತ್ತಾನೆ. ಇಲ್ಲಿ ಪ್ರಾಣಿಯಿಂದಾದ ವಿದ್ರವವನ್ನು ನೋಡಬಹುದು. ಲಕ್ಷ್ಮಿಯು ತನ್ನ ಗೆಳತಿಯರಾದ ಲಜ್ಜಾ ಮತ್ತು ಧೃತಿಯರೊಂದಿಗೆ ( ಅವಳ ಪ್ರಾಕೃತಿಕ ಗುಣಗಳ ಪ್ರತೀಕ ) ಆನೆಯನ್ನೇರಿ ಸಮುದ್ರದ ಹೊರಗೆ ಬರುತ್ತಿದ್ದಾಳೆ ಎಂದು ತಿಳಿಯುತ್ತದೆ. ಆ ಮೂವರೂ ಪ್ರಾಕೃತದಲ್ಲಿಯೇ ಸಂಭಾಷಣೆಯನ್ನು ಮಾಡುತ್ತಾರೆ.
ಅನೇಕ ಪ್ರಾಕೃತ ಶ್ಲೋಕಗಳು ಇಲ್ಲಿ ಕಂಡುಬರುತ್ತದೆ. ಧೃತಿಯು, ಲಕ್ಷ್ಮಿಯ ಮುಖದ ಪರಿಮಳದಿಂದ ಆಕರ್ಷತವಾದ ದುಂಬಿಗಳು, ಹೂವನ್ನು ಬಿಟ್ಟು ಅವಳ ಮುಖವನ್ನು ಸುತ್ತುವರೆಯುತ್ತಿವೆ, ಎಂದು ಉಪಹಾಸ ಮಾಡುತ್ತಾಳೆ.
ಮೂವರೂ ಹೂವನ್ನು ಸoಗ್ರಹಿಸುವಾಗ, ಲಕ್ಷ್ಮೀಯು ನಾರಾಯಣನ ವಕ್ಷ:ಸ್ಥಳವನ್ನು ಸ್ಮರಿಸಿ, ಆ ಹೂವುಗಳನ್ನು ಮುತ್ತುಗಳೆoದು ಭ್ರಮಿಸುತ್ತಾಳೆ. ಪುಷ್ಪಗಳನ್ನು ಆರಿಸುವಾಗ, ಭ್ರಮರಗಳು ಲಕ್ಷ್ಮಿಯ ಮುಖವನ್ನು ಮುತ್ತುತ್ತದೆ. ಅದಕ್ಕೆ ಸಖಿಯರು ಅವಳ ಮುಖವು ಹೂವುಗಳಿಗಿಂತ ಸುವಾಸಿತವಾಗಿರುವ ಕಾರಣ ಹೀಗೆ ಎನ್ನುತ್ತಾರೆ. ಭವಾನಿಯ ಪೂಜೆಯ ಅನಂತರ ಪದ್ಮಕನು ಪ್ರವೇಶಿಸಿ, ಕೃಷ್ಣನ ಚಿತ್ರಪಟವನ್ನು ತೋರಿಸಿ, (ರುಕ್ಮಿಣಿ ಹರಣ ಎಂಬ ಅಮಾತ್ಯ ವತ್ಸರಾಜನ ಈಹಾಮೃಗದಲ್ಲೂ ಚಿತ್ರಪಟದ ಮೂಲಕ ಪ್ರೇಮಾoಕುರವಾಗುವುದನ್ನು ಕಾಣಬಹುದು ) ಅವನನ್ನು ಹೂವುಗಳಿಂದ ಮತ್ತು ಕಣ್ಣೆoಬ ಹೂವಿಗಳಿಂದ ಪೂಜಿಸು, ಎನ್ನುತ್ತಾನೆ. ಲಜ್ಜೆಯು ಪದ್ಮಕನು ದ್ರವ್ಯಗಳ ಹಾಗೂ ಸುಖದ ನಿಧಿ ಎಂದು ಹೊಗಳುತ್ತಾಳೆ. (ಪದ್ಮ ಎಂಬುದು ಕುಬೇರನ ನವನಿಧಿಗಳಲ್ಲಿ ಒಂದಾಗಿದೆ ). ಲಕ್ಷ್ಮಿಯು ಲಜ್ಜೆಯಿಂದ ಸ್ವಗತದಲ್ಲಿ "ಭವಾನಿಯ ಪ್ರಸಾದವೆಂಬ ಮರವು, ಈ ಚಿತ್ರದ ದರ್ಶನ ಎಂಬ ದೋಹದದಿಂದ ಪೂರ್ಣವಾಗುತ್ತದೆ" ಎನ್ನುತ್ತಾಳೆ. ಬಹಳಷ್ಟು ಕಡೆ, ವೇದಾoತದ ತತ್ವಗಳನ್ನು ಸೂಕ್ಷ್ಮವಾಗಿ ಧ್ವನಿಸಿರುವುದು ಸುಂದರವಾಗಿದೆ.
ಪದ್ಮಕನು, "जनार्दन पूजयैव जनार्दनः प्राप्यते " ಎನ್ನುತ್ತಾ ಎಲ್ಲರನ್ನೂ ಮಧುಸೂದನನನ್ನು ಪೂಜಿಸಲು ಪ್ರೇರೇಪಿಸುತ್ತಾರೆ. ನೇಪಥ್ಯದಲ್ಲಿ ಪ್ರಳಯವಾಗುವಂತೆ ಸೂಚನೆ ಇದ್ದು,( ಶ್ಲೋಕ 16). ಬಿರುಗಾಳಿಯಿಂದ ತಲ್ಲಣಿಸಿ, ಪ್ರಪಂಚವೇ ಜಂಗಮವಾದಂತೆ ತೋರುತ್ತಿರುವ ಚಿತ್ರಣವಿದೆ. ಲಕ್ಷ್ಮಿಯು ಅವಳ ತಂದೆಯಾದ ಸಮುದ್ರರಾಜನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಕೇಳಿಕೊಂಡು, ಇದೇನೇ ಪೂಜೆಯ ಫಲ ಎಂದು ಮರುಗುತ್ತಾಳೆ. ಎಲ್ಲರೂ ಸಮುದ್ರವನ್ನು ಪ್ರವೇಶಿಸಲು, ವಾಸುದೇವನು ದೇವಾಸುರರೊಂದಿಗೆ ಪ್ರವೇಶಿಸುತ್ತಾನೆ. ಬೃಹಸ್ಪತಿ, ಕುಬೇರ ಮತ್ತು ಇಂದ್ರಾದಿ ದೇವತೆಗಳು ಸಮುದ್ರದ ಹತ್ತಿರ ಬರಲು, ಬೃಹಸ್ಪತಿಯು ಮಂದರ ಪರ್ವತಕ್ಕೆ ಏನೋ ಅನಾಹುತವಾಗುವುದೆoಬ ಭಯದಲ್ಲಿ,”ಈ ಸಮುದ್ರದಲ್ಲಿ ಬೇಗ ಸ್ನಾನ ಮಾಡಿ ಪುನಃ ಸ್ವರ್ಗಕ್ಕೆ ಮರಳಿರಿ’ ಎಂದು ದೇವತೆಗಳಿಗೆ ಹೇಳುತ್ತಾನೆ. ಆದರೆ, ಭಯಗೊಂಡ ಬ್ರಾಹ್ಮಣನನ್ನು ನೋಡಿ, ಇಂದ್ರನು, ಈ ಬೃಹಸ್ಪತಿಗೆ ಮಂತ್ರವನ್ನು ಬಿಟ್ಟರೆ ’ಇನ್ನೇನು ಬರುವುದಿಲ್ಲ, ಇವನು ಪುಕ್ಕಲ’ ಎಂದು ಉಪಹಾಸ ಮಾಡುತ್ತಾನೆ. ದೇವತೆಗಳ ಗರ್ವವನ್ನು ಗಮನಿಸುತ್ತಿರುವ ವಾಸುದೇವನು, ಬ್ರಹ್ಮನ ಆಗಮನವನ್ನು ಎಲ್ಲರಿಗೂ ತೋರಿಸುತ್ತಾನೆ. ಮಹೇಶನೂ ಅಲ್ಲಿ ಬರಲು, ಸಮುದ್ರದ ಮಧ್ಯದಿಂದ ಮಂದರ ಪರ್ವತವು ಏಳುತ್ತದೆ. ವಾಸುದೇವನು ಶಿವನ ಕೊರಳಿನ ಸುತ್ತಲಿರುವ ಆದಿಶೇಷನಿಗೆ ಹಗ್ಗವಾಗಲು ಆಜ್ಞಾಪಿಸುತ್ತಾನೆ. ಇಂದ್ರನು ಎಲ್ಲಾ ದೇವತೆಗಳಿಗೆ ಆದಿಶೇಷನ ಎರಡು ಕಣ್ಣುಗಳ ಪಕ್ಕದಲ್ಲಿ ಹಿಡಿಯಲು ಆದೇಶಿಸುತ್ತಾನೆ.
ಮಹೇಶನು, ’सर्वेऽपि कुणयः कृष्ण! त्वां विनामी सुरासुराः | त्वमेषामद्भुतो बाहुर्निष्प्रत्यूहश्चतुर्भुजः ||35||’ - ’ಎಲ್ಲಾ ಸುರಾಸುರರು ನೀನಿಲ್ಲದೆ ಕೈಯಿನ ಅಂಗವೈಕಲ್ಯವನ್ನು ಹೊಂದಿದವರಂತೆ ಇದ್ದಾರೆ. ಚತುರ್ಭುಜನಾದ ನೀನೇ ಇವರೆಲ್ಲರ ಅದ್ಭುತವಾದ ಭುಜವಾಗಿದ್ದೀಯೆ’ ಎಂದು ಹೊಗಳುತ್ತಾನೆ. ಹಾಗೆಯೇ ’ಈ ದೇವಾಸುರರು ಸಮುದ್ರಮಥನದಿಂದ ಉಪಹಾಸಕ್ಕೆ ಕಾರಣರಾಗದೆ ಇರಲ” ಎಂದು ಮುಗುಳ್ನಗುತ್ತಾನೆ. ವಿಷ್ಣುವು ’ಆ ಸಮುದ್ರದ ಶಬ್ದವು ಲಕ್ಷ್ಮಿಯ ಉತ್ಕಂಠಿತ ಹಾಗೂ ದೀರ್ಘ ನಿಶ್ವಾಸವನ್ನು ತೋರುತ್ತದ”- ಎನ್ನುತ್ತಾನೆ.
ಸಮುದ್ರಮಥನವಾಗುತ್ತಿದ್ದoತೆ, ವೇದಗಳು ಹೊರಬರುತ್ತವೆ. ಅಸುರರಾಜನಾದ ಬಲಿಯು,ವಿಷ್ಣುವನ್ನು, “ಎಲ್ಲರೂ ನಿನ್ನ ಸಮಾನಭಕ್ತರಾದ್ದರಿಂದ ಎಲ್ಲರಿಗೂ ಸಮಾನ ಪ್ರಸಾದ ಸಿಗಬೇಕು” ಎಂದು ಕೇಳಿಕೊಳ್ಳುತ್ತಾನೆ. ಕೃಷ್ಣನು, “ಎಲ್ಲಾ ವಸ್ತುಗಳು ಸಮುದ್ರದ ದಡದಲ್ಲಿರಲಿ. ಅನಂತರ ಶಿವನ ಆಜ್ಞೆಯ ಮೇಲೆ ವಿಭಾಗ ಮಾಡಿಕೊಳ್ಳೋಣ” ಎoದು ಸಮಾಧಾನ ಪಡಿಸುತ್ತಾನೆ. ಅಗ್ನಿ ಮೊದಲಾದ ದಿಕ್ಪಾಲಕರು ಅದನ್ನು ಸುರಕ್ಷಿತವಾಗಿರಿಸುತ್ತಾರೆ. ಅನಂತರ, ಐರಾವತ ಗಜವು ಬರುತ್ತದೆ. ತದನಂತರ, ಉಚ್ಚಯ್ಶ್ರವ ಎಂಬ ದಿವ್ಯ ಕುದುರೆಯ ಆಗಮನವಾಗುತ್ತದೆ . ಆಗ, ಬ್ರಹ್ಮ ವಿಷ್ಣು ಮಹೇಶ್ವರರು, ಒಬ್ಬಬ್ಬರೂ ತಮಗೆ ಅದು ಬೇಡ, ಎಂದು ಹಾಸ್ಯ ಮಾಡಿಕೊಳ್ಳುತ್ತಾರೆ. ಅನಂತರ, ಚಂದ್ರನು ಹೊರಬರುತ್ತಾನೆ.ವಿಷ್ಣುವು ಅದನ್ನು ಲಕ್ಷ್ಮಿಯ ಮುಖವೆಂದೇ ಭ್ರಮಿಸುತ್ತಾನೆ. ಚಂದ್ರನು ಬಂದು, ಈ ಸಮುದ್ರಮಥನದಿಂದ ಶಿವನ ದರ್ಶನವಾಯಿತು ಎಂದು ಹಿಗ್ಗುತ್ತಾನೆ.
ಔಷಧಿಗಳು ಬಂದು, ಶಿವನ ಬಳಿ ನೆಲೆಸುತ್ತವೆ. ವಾಯುವು 'ನಾನು ನನ್ನ ಸಾಮರ್ಥ್ಯವನ್ನು ಸಹಸ್ರಪಟ್ಟು ಬೆಳೆಸುವೆನು. ಇದರಿಂದ ಮಥನವು ಶೀಘ್ರವಾಗಿ ಆಗಿ,ಉಳಿದ ಕಷ್ಟಸಾಧ್ಯ ಪದಾರ್ಥಗಳೂ ದೊರಕಲಿ " ಎಂದು ಹಾರೈಸುತ್ತಾನೆ. ಇದರಿಂದಾಗಿ ರತ್ನಗಳು ಬರುತ್ತವೆ. ಅನಂತರ, ಲಕ್ಷ್ಮಿಯ ಆಗಮನ ನಾಲ್ಕು ಶ್ಲೋಕಗಳಿoದ ಹೇಳಲ್ಪಟ್ಟಿವೆ (55-58). ವಿಷ್ಣುವು ತಾನು ಚಿತ್ರದಲ್ಲಿ ಕಂಡ ಲಕ್ಷ್ಮಿಯನ್ನು ಗುರುತಿಸಿ, ಸಂತೋಷಗೊಳ್ಳುತ್ತಾನೆ. ಲಕ್ಷ್ಮಿಯು ಅವನ ಕಂಠವನ್ನು ಆಶ್ರಯಿಸಿ ಹೊರಬರುತ್ತಾಳೆ. ತನ್ನ ತಂದೆಯ ಮಥನವನ್ನು ಕಂಡು ಮರುಗುತ್ತಾಳೆ. ಗಂಗೆಯು ಇವಳನ್ನು ಕರೆತಂದು ಸಮುದ್ರ ತೀರದಲ್ಲಿ ಇರಿಸುತ್ತಾಳೆ.ಅಷ್ಟರಲ್ಲಿ ಬಲಿಯು ಕುಜಂಭ ಎಂಬ ತನ್ನ ಸೇವಕನನ್ನು ಕರೆದು, “ಯಾವುದನ್ನೂ ವಿಷ್ಣುವು ಮತ್ತು ಮಹೇಶರು ವಿಭಾಗ ಮಾಡುತ್ತಿಲ್ಲ. ಆದ್ದರಿಂದ ನಾವು ಅಮೃತವು ಬರುವ ವೇಳೆಗೆ ಜಾಗರೂಕರಾಗಿರಬೇಕು”, ಎಂದು ಹೇಳುತ್ತಾನೆ. ಅಷ್ಟರಲ್ಲಿ ಅಮೃತದ ಕುಂಭವು ಬರಲು, ಮಹೇಶನು ಅಗ್ನಿಗೆ ಅದನ್ನು ಸಮುದ್ರತೀರದಲ್ಲಿ ಇರಿಸಲು ಹೇಳುತ್ತಾನೆ. ಇದನ್ನು ನೋಡಿ ಕುಜಂಭನು ಹಿಂದೆಯೇ ಬಲಿಯು ಹೇಳಿದಂತೆ, ತಾನೇ ಅಗ್ನಿಯ ವೇಷವನ್ನು ಧರಿಸಿ ಬರುತ್ತಾನೆ. ಕೃಷ್ಣನು ಅವನನ್ನು ನೋಡಿ, ಸಂತೋಷಗೊಂಡು, "ಅಗ್ನಿಯೇ, ನೀನು ಎಲ್ಲಾ ದೇವತೆಗಳಲ್ಲಿಯೂ ಮುಖನೂ,ಪ್ರಮುಖನು ಆಗಿದ್ದೀಯ (मुखमपि सर्वेषां मुख्यमसि सर्वेषु ) ’ ಎಂದು ಹೊಗಳಿ ಅವನಿಗೆ ಅಮೃತದ ಗಡಿಗೆಯನ್ನು ಕೊಡುತ್ತಾನೆ. ತಕ್ಷಣ, "ನಿನ್ನ ತೇಜೋ ಪ್ರಕಾಶ ಏಕೋ ಕುಂದಿದಂತಿದೆಯಲ್ಲಾ ", ಎಂದು ಆಶ್ಚರ್ಯ ಪಡುತ್ತಾನೆ. ಆದರೆ, ಮೋಸಗಾರ ಕುಜಂಭನು," ತಮ್ಮ ಮುಂದೆ ನನ್ನ ತೇಜಸ್ಸಿಗೆಲ್ಲಿಯ ಪ್ರಖರತೆ" ಎಂದು ಹೇಳಿ ನುಣುಚಿಕೊಳ್ಳುವನು.
ಕೃಷ್ಣನು ಪುನಃ ಎಲ್ಲರಿಗೂ ಮಥನ ಮಾಡಲು ಹೇಳಲು, ಒಂದು ಭಯಂಕರವಾದ ಜಲಜಂತುವು ಹೊರಬರುತ್ತದೆoದು ತೋರುತ್ತದೆ. ಸಮುದ್ರವೇ ಕೋಪಗೊಂಡಿದೆಯೋ ಏನೋ "गभीरोयं महात्मा वैदेशिकः कोपप्रकारेषु " (ಆಳವಾದ ಇವನ ಕೋಪ ಪ್ರಕಾರವು ಬೇರೆಯಂತಿದೆ) ಎನ್ನುತ್ತಾನೆ. ಆದರೆ ಸಮುದ್ರವು ದಿವ್ಯವಾದ ಆಯುಧಗಳನ್ನು ನೀಡುತ್ತದೆ. ಅನಂತರ ಸುರದ (ಮದ್ಯದ) ಕುಂಭವು ಮರಕತಮಣಿಯಂತೆ ಕಂಗೊಳಿಸುತ್ತಾ ಬರುತ್ತದೆ. ಅಷ್ಟರಲ್ಲಿ ಕುಬೇರನು ಆಕಾಶದ ಹಕ್ಕಿಗಳೆಲ್ಲ ಪ್ರಾಣ ಬಿಡುತ್ತಿರುವುದನ್ನು ಗಮನಿಸಿ, ವಿಷವು ಬರುತ್ತಿದೆ, ಎಂದು ತಿಳಿಸುತ್ತಾನೆ . ಮಹೇಶನು ಎಲ್ಲರೂ ಅಲ್ಲಿಂದ ಹೋಗಲಿ ಎಂದು ಆದೇಶಿಸಿದಾಗ, ಮೊದಲನೇ ಅಂಕವು ಕೊನೆಗೂಳ್ಳುವುದು. ಇಲ್ಲಿ ಅನೇಕ ನಾಯಕರು ಕಾಣುತ್ತಾರೆ, ಕುಜಂಭ ಮಾಡಿದ ಕಪಟ, ಎಲ್ಲರೂ ಓಡಿಹೋಗುವ ವಿದ್ರವ ಮತ್ತು ಲಕ್ಷ್ಮಿನಾರಾಯಣರ ಧರ್ಮ ಶೃಂಗಾರ ಈ ಅಂಕದಲ್ಲಿ ತೋರುವವು .
ಎರಡನೇ ಅಂಕ
ಕಪಟ ಸುಂದರಿಯ ವೇಷದಲ್ಲಿ ವಿಷ್ಣುವೂ, ಅವನ ಸಖಿಯ ವೇಷದಲ್ಲಿ ಗರುಡನೂ ಬರುವರು. ಈ ನಿರ್ಜನ ಪ್ರದೇಶದಲ್ಲಿ ನಿನಗೇಕೆ ಮಹಿಳೆಯಾಗಲು ಆಸೆ, ಎಂದು ಅವಳ ವಿಭ್ರಮವನ್ನು ಗರುಡನು ಪ್ರಶ್ನಿಸುತ್ತಾನೆ. (ಇಲ್ಲಿ ಹೇವಕ ಪದವನ್ನು ಆಸೆ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಇದು ನಂತರ ಕಾಲದ ಅರಬ್ಬೀ ಭಾಷೆಯ ಪ್ರಭಾವದಿಂದ ಬಂದಿರುವ ಪದ). ಆಗ, ವಿಷ್ಣುವು "अर्थश्रुङ्गारोयमद्भुतो महते अर्थाय प्रगल्भते " ಎಂದರೆ, ’ಈ ಅರ್ಥಶೃಂಗಾರವು ದೊಡ್ಡ ಅರ್ಥಕ್ಕಾಗಿ ಅಥವಾ ಹಣಕ್ಕಾಗಿ” ಎಂದರ್ಥ. ಇದರಲ್ಲಿ, ಸಮವಕಾರದ ಲಕ್ಷಣವಾದ ಎರಡನೇ ಪ್ರಕಾರದ ಅರ್ಥಶೃಂಗಾರವು ಸಾಧಿತವಾಗುತ್ತದೆ. ಬೇರೆಯವರ ಆಗಮನವನ್ನು ತಿಳಿದು, ವಿಷ್ಣುವು, ಇನ್ನು ಮುಂದೆ ಮಹಿಳೆಯರoತೆ ಪ್ರಾಕೃತದಲ್ಲಿ ಮಾತಾಡಬೇಕು ಎಂದು ಗರುಡನಿಗೆ ತಿಳಿಸುತ್ತಾನೆ.
ಅಷ್ಟರಲ್ಲಿ ಬಲಿಯು ಕುಜಂಭನೊಂದಿಗೆ ಬಂದು, ಅಮೃತವು ಸಿಕ್ಕಿದರೂ ಲಕ್ಷ್ಮಿಯಂಥಹ ಕನ್ಯೆಯು ಸಿಗಲಿಲ್ಲವಲ್ಲ ಎಂದು ಮರುಗುತ್ತಾನೆ. ಅವರಿಬ್ಬರ ಸಂಭಾಷಣೆಯು ಜನರಂಜಕವಾಗಿದೆ. ಇದನ್ನು ಗಮನಿಸಿ, ಗರುಡನು, "ಈಗ ನಿನ್ನ ವಿಪ್ರಲಂಭ ಅನುಭಾವಗಳನ್ನು ಪ್ರದರ್ಶಿಸು" ಎಂದು ವಿಷ್ಣುವಿಗೆ ಹೇಳುತ್ತಾನೆ. ವಿಷ್ಣುವು, ’ನಾನು ನಿಜವಾಗಿಯೂ ಆತಾನವಾದ್ಯದಿಂದ ಲಕ್ಷ್ಮಿಯ ವಿರಹವನ್ನು ತೋರಿಸಲು ಈಗ ಇ ಚ್ಛಿಸುತ್ತೇನೆ’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. ಮೋಹಿನಿಯ ರೂಪದ ವಿಷ್ಣುವಿಗೂ, ನಿಪುಣಿಕೆಯ ವೇಷದ ಗರುಡನಿಗೂ ನಡೆಯುವ ಸುಂದರವಾದ ಸಂವಾದದಿoದ, ಮೋಹಿನಿಯು ಯಾರೋ ಸುಂದರನನ್ನು ಕನಸಿನಲ್ಲಿ ಕಂಡಂತೆ, ಈಗ ಅವನಿಗಾಗಿ ಹುಡುಕುತ್ತಿರುವಂತೆ ಗೊತ್ತಾಗುತ್ತದೆ. ಬಲಿಯು ಅವಳನ್ನು ಕೇಳಲು, ವಿಷ್ಣುವು, ತನ್ನ ಈ ಗದ್ಗದ ಮಾತು ಉಪಶ್ರುತಿ ( ವೇದದಂತೆ ) ಆಗುತ್ತದೆ ಎಂದು ಮನದಲ್ಲೇ ನಗುತ್ತಾನೆ. ನಿಪುಣಿಕೆಯು ಮೋಹಿನಿಯನ್ನು ಸಮುದ್ರರಾಜನ ಕೊನೆಯ ಮಗಳೆಂದು ಪರಿಚಯಿಸುತ್ತಾಳೆ. ಅಷ್ಟರಲ್ಲಿ ಭಾರ್ಗವನಾದ ಶುಕ್ರಾಚಾರ್ಯನು, ಬಂದು " वर्धतां वर्धतां कलिः ", ಎಂದು, ಬಲಿ ಎನ್ನುವುದರ ಬದಲು ’ಕಲಿ ವರ್ಧಸಲಿ’ ಎಂದು ಆಶೀರ್ವದಿಸುತ್ತಾನೆ. ನೇಪಥ್ಯದಲ್ಲಿ, ದೇವತೆಗಳೆಲ್ಲ ಸಮುದ್ರದಿಂದ ದೊರೆತ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರಲು, ದಾನವರು ಸಮರಾoಗಣದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ. ಇಲ್ಲಿ ವಿದ್ರವ ಕಾಣುತ್ತದೆ. ಬಲಿಯು ತಾನು ಮೋಹಿನಿಯೊಂದಿಗೆ ಅಮೃತಪಾನವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಕೋಪಗೊಂಡ ಶುಕ್ರಚಾರ್ಯನು ವಿಷ್ಣುವಿನ ನಿಜರೂಪವನ್ನು ತಿಳಿಸಿದರೂ, ಅಮೃತದ ಕುಂಭವನ್ನು ಮೋಹಿನಿಗೆ ಕೊಟ್ಟು, ಬಲಿಯು ಯುದ್ಧಭೂಮಿಗೆ ಹೊರಡುತ್ತಾನೆ. ಮೋಹಿನಿಯು ನಿಪುಣಿಕೆಗೆ ಅಮೃತಪಾತ್ರೆಯನ್ನು ಕೊಟ್ಟು " ನೀನೇ ನಿಪುಣಿಕೆಯಲ್ಲವೇ? ನೀನೇ ಅಮೃತವನ್ನು ತಂದದ್ದು ಅಲ್ಲವೆ?" ಎಂದು ಮಾರ್ಮಿಕವಾಗಿ ಕೇಳುತ್ತಾಳೆ. ವಿರಹವೇದನೆಯನ್ನು ಸಹಿಸಲಾರದೇ ಅಗ್ನಿಯಲ್ಲಿ ಪ್ರಾಣಾರ್ಪಣೆ ಮಾಡುವುದಾಗಿ ಮೋಹಿನಿ ನಿರ್ಧರಿಸಿದಾಗ ಶುಕ್ರಾಚಾರ್ಯರು ಶಂಕಿಸಿ, ಅಮೃತಪಾತ್ರೆಗಾಗಿ ಕೇಳುತ್ತಾರೆ. ಅಗ್ನಿಯನ್ನು ಉಪಶಮಾನ ಮಾಡುವ ಮಂತ್ರವೂ ಫಲಿಸುವುದಿಲ್ಲ. ಆಗ ತನ್ನ ಧ್ಯಾನದಿಂದ ವಿಷ್ಣುವನ್ನು ಸ್ಮರಿಸಿದಾಗ, ವಿಷ್ಣುವು ತನ್ನ ನಿಜರೂಪವನ್ನು ತೋರಿಸುತ್ತಾನೆ. ಆಗ ಶುಕ್ರಾಚಾರ್ಯನು, "ಸಮುದ್ರಮಥನದಲ್ಲಿ ದೊರೆತ ವಸ್ತುಗಳೆಲ್ಲದಕ್ಕೂ ಧಿಕ್ಕಾರ. ದೈತ್ಯರಿಂದ ವಿಷ್ಣುವೂ ಮಹಿಳೆಯ ರೂಪವನ್ನು ತಾಳಬೇಕಾದರೆ, ಇನ್ನೇನು ಸಾಧನೆ ಉಳಿದಿದೆ?" ಎಂದು ಉದ್ಗರಿಸುತ್ತಾನೆ. ಕೊನೆಯಲ್ಲಿ ಎಲ್ಲರೂ’ ’ಅಮೃತಪ್ರಾಶನಕ್ಕೆ ಹೋಗೋಣ’ ಎಂದು ಹೇಳಿ ನಿರ್ಗಮಿಸುತ್ತಾರೆ. ಇಲ್ಲಿಗೆ ಎರಡನೇ ಅಂಕವು ಮುಗಿಯುತ್ತದೆ.
ಮೂರನೆಯ ಅಂಕ
ಇಲ್ಲಿ ಕೃಷ್ಣ ಮತ್ತು ಲಕ್ಷ್ಮಿಯ ದೃಶ್ಯವಿದ್ದು, ಮೊದಲಿಗೆ ಕೃಷ್ಣನು ಎಲ್ಲಾ ವೈಭವ ಮತ್ತು ಸೌಂದರ್ಯವಿರುವ ಸಮುದ್ರವು ಮಾತ್ರ ಲಕ್ಷ್ಮಿಯನ್ನು ಜನಿಸಲು ಸಾಧ್ಯ, ಎಂದು ಶ್ಲಾಘಿಸುತ್ತಾನೆ. ಪಿತೃಗೃಹವಿಯೋಗದಿಂದ, ತನ್ನ ತಂದೆಗೆ ಆದ ಕಷ್ಟದಿಂದ ನೊಂದ ಅವಳನ್ನು ಸಂತೈಸುತ್ತಾನೆ "अहो कष्टं कन्यकानाम् " ಎಂದು ಮರುಗುತ್ತಾನೆ. ಸಮುದ್ರನನ್ನು ಕರೆತರಲು ಸಮಸ್ತ ದೇವತೆಗಳೆಲ್ಲ ಹೋಗಿದ್ದಾರೆ ಎಂದು ಸಮಾಧಾನ ಮಾಡುತ್ತಾನೆ. ಅಷ್ಟರಲ್ಲಿ ದೈತ್ಯರು ದೊಡ್ಡ ಬಿರುಗಾಳಿಯನ್ನು ಮಾಡಿ, ಎಲ್ಲರೂ ಓಡುವಂತೆ ಮಾಡುತ್ತಾರೆ. ಇಲ್ಲೊಂದು ವಿದ್ರವವನ್ನು ನೋಡಬಹುದು. ಆಗ, ಶುಕ್ರಾಚಾರ್ಯನು ಕಪಟ ಶಿವನಾಗಿ ವೇಷ ಧರಿಸಿ ಬಂದು, "ವಿಷದಿಂದ ತಳಮಳಸುತ್ತಿರುವ ನನಗೆ ಅಮೃತವನ್ನು ಕೊಡ”, ಎನ್ನುತ್ತಾನೆ. ಚತುರನಾದ ಕೃಷ್ಣನು ಅವನಿಗೆ ಅಮೃತವನ್ನು ಕುಡಿಸುವೆನು, ಆದರೆ ಕೊಡುವುದಿಲ್ಲ ಎಂದು ಚಿಂತಿಸುತ್ತಾನೆ. " ಇವನಿಗೆ ಆ ದಿವ್ಯ ತೇಜಸ್ವಿ ಮೂರ್ತಿಯ ಅಭಿನಯವನ್ನೂ ಮಾಡಲು ಬರುವುದಿಲ್ಲ," ಎಂದು ಯೋಚಿಸಿ, ಧ್ಯಾನದಿಂದ ಇವನು ಶುಕ್ರಾಚಾರ್ಯನೆಂದು ತಿಳಿಯುತ್ತಾನೆ. ಅವನನ್ನು ಬೈದು ಕಳುಹಿಸುತ್ತಾನೆ. ಅಷ್ಟರಲ್ಲಿ ಗರುಡನ ಜೊತೆ ಶಂಕರನು ಬರಲು, ಎಲ್ಲಾ ದೇವತೆಗಳೊಂದಿಗೆ ಸಾಗರನೂ ಬರುತ್ತಾನೆ. ಅವನಿಗೆ ಎಷ್ಟು ತೊಂದರೆಯಾಯಿತು ಎಂದು ಶಂಕರನು ಮರುಗಲು, ಸಮುದ್ರನು ಎಲ್ಲಾ ನನ್ನ ಮೇಲಾದ ಅನುಗ್ರಹ ಎಂದು ತಿಳಿಸಿ, ವೇದಗಳನ್ನು ಬ್ರಾಹ್ಮನಲ್ಲಿಯೂ, ಮಗನಾದ ಚಂದ್ರನನ್ನು ಶಿವನ ಶಿರಸ್ಸಿನಲ್ಲಿಯೂ,ಮಗಳಾದ ಲಕ್ಷ್ಮಿಯನ್ನು ಕೃಷ್ಣನಿಗೂ ಕೊಟ್ಟು, ಕನ್ಯಾದಾನದ ದಕ್ಷಿಣೆಯಾಗಿ ಕೌಸ್ತುಭಮಣಿಯನ್ನು ಕೊಡುತ್ತಾನೆ. ಐರಾವತ ಮತ್ತು ಉಚ್ಚಶ್ರವಸ್ ಗಳನ್ನು ಇಂದ್ರನಿಗೂ, ಎಲ್ಲಾ ರತ್ನಗಳನ್ನು ಮತ್ತು ಔಷಧಿಗಳನ್ನು ಮೇರು ಮಂದರ ಪರ್ವತಗಳಿಗೂ, ಧನವನ್ನು ಕುಬೇರನಿಗೂ, ಪಾಶ ಮತ್ತು ವಾರುಣಿಯನ್ನು ವರುಣನಿಗೂ, ಅಂಕುಶವನ್ನು ವಾಯುವಿಗೂ, ಕೃಪಾಣವನ್ನು ನಿಋತ್ತನಿಗೂ, ದಂಡವನ್ನು ಯಮನಿಗೂ, ವಿಷವನ್ನು ವಾಸುಕಿ ಮುಂತಾದ ನಾಗಗಳಿಗೂ, ಅಮೃತವನ್ನು ದೇವತೆಗಳ ಪರವಾಗಿ ಅಗ್ನಿಗೂ ಕೊಡುತ್ತಾನೆ. ಕೊನೆಗೆ ಶಿವನನ್ನು ಸ್ತುತಿಸಿ, ಅವನ ಕಾರಣದಿಂದ ಇವನು ದಾನಿಯಾದನೆಂದು ತೃಪ್ತಿಗೊಂಡು, ಭರತವಾಕ್ಯದಲ್ಲಿ[5], ರಾಜರು ಔದಾರ್ಯ ಮತ್ತು ಶೌರ್ಯವನ್ನು ಹೊಂದಲಿ, ಜನರು ಸನ್ಮಾರ್ಗದಲ್ಲಿ ಹೋಗಲಿ, ವೃಕ್ಷಗಳು ಮಳೆಯಿಂದ ಬೆಳೆಯಲಿ ಮತ್ತು ಕವಿಗಳು ಸಾರಸ್ವತೋತ್ಸವದಲ್ಲಿ ತೊಡಗಲಿ ಎಂದು ಆಶಿಸುತ್ತಾನೆ ಸಮವಕಾರವನ್ನು ಮುಗಿಸುತ್ತಾನೆ.
ಸಮಾರೋಪ
ಈ ರೂಪಕದ ಪ್ರಯೋಗದಲ್ಲಿ ಹೇಗೆ ಅಸಾಮಾನ್ಯವಾದ ಅಲೌಕಿಕ ವಸ್ತುಗಳನ್ನು ತರುತ್ತಿದ್ದರೋ, ತಿಳಿಯದು. ಲಕ್ಷಣಕ್ಕೆ ಹೊಂದುವಂತೆ ಉತ್ತಮ ಕಥವಸ್ತುವನ್ನು ಹುಡುಕಿ ಬರೆದಿರುವುದು ಸ್ತುತ್ಯ. ಉಳಿದ ರೂಪಕಗಳಂತೆ, ಇದನ್ನು ಪ್ರಾಯೋಗಿಸಲು ಬರೆದದ್ದು ಎಂದು ವತ್ಸರಾಜ ಹೇಳಿಕೊಂಡಿಲ್ಲ. ಆದರೆ ಆ ಕಾಲದಲ್ಲಿ ಪ್ರಚಲಿತವಾದ ವಿಶಿಷ್ಟ ಪದಗಳ ಬಳಕೆ ಮತ್ತು ಹಾಸ್ಯ ಜನರಂಜಕವಾಗಿದೆ. ಚಿತ್ರಪಟದ ಕಲ್ಪನೆ, ಸಮುದ್ರನು ವಸ್ತುಗಳನ್ನು ಹಂಚುವುದರ ಕಲ್ಪನೆ, ಬಲಿಯ ಪಾತ್ರದ ಪರಿಚಯ ಎಲ್ಲಾ ಹೊಸತಾದವು. ಕೊನೆಯದಾಗಿ, ಭಾಷಾ ಸೌoದರ್ಯ ಮತ್ತು ಅನೇಕ ಪ್ರಾಕೃತ ಶ್ಲೋಕಗಳ ರಚನೆ ನಾವೀನ್ಯವನ್ನು ತೋರುತ್ತದೆ.
ಗ್ರಂಥ ಪರಮಾರ್ಶನ
कविवत्सराजप्रणीतरूपकषट्कम्- Chimanlal. V. Dalal, Central Library,Baroda, 1918.
- ↑ कविवत्सराजप्रणीतरूपकषट्कम् Author : Dalal C D Published in 1918 by Gaekwad's Oriental series, Baroda
- ↑ नाटकं सप्रकरणमङ्को व्यायोग एव च | भाणः समवकारश्च वीथी प्रहसनं डिमः || 2|| ईहामृगश्च विज्ञेया दशेमे नाट्यलक्षणे ||3|| ಎಂದು ಭರತನು ಹತ್ತು ಪ್ರಕಾರದ ರೂಪಕಗಳನ್ನು ತಿಳಿಸುದ್ದಾನೆ (ನಾ. ಶ.18 ಅಧ್ಯಾಯ )
- ↑ नन्दन्ति देवताः अस्मिन् " ಎಂಬ ವಾಕ್ಯದಂತೆ, ದೇವತೆಗಳನ್ನು ಸ್ತುತಿಸುವ ಆರಂಭಿಕ ಶ್ಲೋಕಗಳು, ನಾಂದಿ ಪದ್ಯಗಳು.
- ↑ सूच्यार्थसूचनं मुद्रा प्रकृतार्थपरैः पदैः- ಅಪ್ಪಯ್ಯ ದೀಕ್ಷಿತನ ಕುವಲಯಾನಂದ
- ↑ ರೂಪಕದ ಕೊನೆಯ ಒಂದು ಅಥವಾ ಎರಡು ಶ್ಲೋಕಗಳನ್ನು ಭರತವಾಕ್ಯ ಎನ್ನುತ್ತಾರೆ. ಋಷಿ ಭಾರತನಿಗೂ, ನಟರಾದ ಭಾರತರಿಗೂ ವಂದಿಸಿದರು ಎಲ್ಲರಿಗೂ ಶುಭವಾಗಲೆಂದು ಕೋರುವ ಪ್ರಾರ್ಥನೆಯಾಗಿರುತ್ತದೆ.