ಅಚ್ಯುತರಾಯನ ಗ್ರಂಥ ತಾಲಕಲಾಬ್ಧಿ: Difference between revisions
mNo edit summary |
mNo edit summary |
||
| Line 8: | Line 8: | ||
ತಾಲಕಲಾಬ್ಧಿ- ಹದಿನೈದು- ಹದಿನಾರನೇ ಶತಮಾನದ ವೇಳೆಗೆ ತೋರಿಕೊಳ್ಳುವ ಎಷ್ಟೋ ತಾಲ ಪ್ರಸ್ತಾರವಿಚಾರ, ತಾಲಾಂಗಗಳ ಕ್ರಮ, ತಾಳದಶಪ್ರಾಣಗಳ ವಿವರಗಳನ್ನು ಸವಿಸ್ತಾರವಾಗಿ ಒಳಗೊಂಡಿದೆ. | ತಾಲಕಲಾಬ್ಧಿ- ಹದಿನೈದು- ಹದಿನಾರನೇ ಶತಮಾನದ ವೇಳೆಗೆ ತೋರಿಕೊಳ್ಳುವ ಎಷ್ಟೋ ತಾಲ ಪ್ರಸ್ತಾರವಿಚಾರ, ತಾಲಾಂಗಗಳ ಕ್ರಮ, ತಾಳದಶಪ್ರಾಣಗಳ ವಿವರಗಳನ್ನು ಸವಿಸ್ತಾರವಾಗಿ ಒಳಗೊಂಡಿದೆ. | ||
ಸಂಗೀತಚಂದ್ರೋದಯ, ಸಂಗೀತವಿದ್ಯಾವಿನೋದ, ಸಂಗೀತಾರ್ಣವ, ಸಂಗೀತಮಾರ್ಗ, ಸಂಗೀತಚೂಡಾಮಣಿ, ನೃತ್ತಚೂಡಾಮಣಿ, ಸಂಗೀತಮಣಿದರ್ಪಣ, ಚತುರ್ಭಾಷಾವಿಲಾಸ, ಕಾತ್ಯಾಯನೀಯ, ಆಂಜನೇಯಮತ ಎಂಬುದಾಗಿ ಒಂದಾನೊಂದು ಕಾಲಕ್ಕೆ ಬರೆಯಲ್ಪಟ್ಟ ಗ್ರಂಥಗಳಿದ್ದವು. ಕ್ರಮೇಣ ಲುಪ್ತವಾಗಿ ಹೋದವು. ಇಂಥ ಗ್ರಂಥಗಳಲ್ಲಿರುವ ಉಲ್ಲೇಖಗಳ ಸಹಿತ ತಾಲದಶಪ್ರಾಣಗಳ ಕುರಿತ ವಿವೇಚನೆ ತಾಲಕಲಾಬ್ಧಿ ಗ್ರಂಥದಲ್ಲಿ ಕಂಡುಬರುತ್ತದೆ. ಈ ಗ್ರಂಥಗಳಂತೆಯೇ ತೆಲುಗು ಭಾಷೆಯಲ್ಲಿ ಪೋಲೂರಿ ಗೋವಿಂದಕವಿ ರಚಿಸಿದ ತಾಲದಶಪ್ರಾಣಪ್ರದೀಪಿಕಾ ಮತ್ತು ರಾಗತಾಳಚಿಂತಾಮಣಿ, ಸಾರಿದೇವ | ಸಂಗೀತಚಂದ್ರೋದಯ, ಸಂಗೀತವಿದ್ಯಾವಿನೋದ, ಸಂಗೀತಾರ್ಣವ, ಸಂಗೀತಮಾರ್ಗ, ಸಂಗೀತಚೂಡಾಮಣಿ, ನೃತ್ತಚೂಡಾಮಣಿ, ಸಂಗೀತಮಣಿದರ್ಪಣ, ಚತುರ್ಭಾಷಾವಿಲಾಸ, ಕಾತ್ಯಾಯನೀಯ, ಆಂಜನೇಯಮತ ಎಂಬುದಾಗಿ ಒಂದಾನೊಂದು ಕಾಲಕ್ಕೆ ಬರೆಯಲ್ಪಟ್ಟ ಗ್ರಂಥಗಳಿದ್ದವು. ಕ್ರಮೇಣ ಲುಪ್ತವಾಗಿ ಹೋದವು. ಇಂಥ ಗ್ರಂಥಗಳಲ್ಲಿರುವ ಉಲ್ಲೇಖಗಳ ಸಹಿತ ವಿಜಯನಗರ ಸಾಮ್ರಾಜ್ಯದ ಹೊತ್ತಿಗೆ ಪ್ರವರ್ಧಮಾನದಲ್ಲಿದ್ದ ತಾಲದಶಪ್ರಾಣಗಳ ( ಹತ್ತು ವಿಧವಾದ ತಾಲದ ಅಂಗಾಂಶಗಳು) ಕುರಿತ ವಿವೇಚನೆ ತಾಲಕಲಾಬ್ಧಿ ಗ್ರಂಥದಲ್ಲಿ ಕಂಡುಬರುತ್ತದೆ. ಈ ಗ್ರಂಥಗಳಂತೆಯೇ ತೆಲುಗು ಭಾಷೆಯಲ್ಲಿ ಪೋಲೂರಿ ಗೋವಿಂದಕವಿ ರಚಿಸಿದ ತಾಲದಶಪ್ರಾಣಪ್ರದೀಪಿಕಾ ಮತ್ತು ರಾಗತಾಳಚಿಂತಾಮಣಿ, ಸಾರಿದೇವ ಅಥವಾ ಪರಮೇಶ್ವರ ಬರೆದಿದ್ದನೆನ್ನಲಾದ ತಾಲಕಲಾವಿಲಾಸ ಎಂಬ ಗ್ರಂಥಗಳು, ವಿಜಯನಗರ ಕರ್ನಾಟ ಸಾಮ್ರಾಜ್ಯದ ಸಾಳುವ ತಿಮ್ಮರಾಜುವಿನ ಸಹೋದರನಾದ ಗೋಪತಿಪ್ಪನ ತಾಲದೀಪಿಕಾ, ಇವೆಲ್ಲವೂ ತಾಲವಿಚಾರಕ್ಕೆ ಸಂಬಂಧಿಸಿದ ಮಹತ್ವಪೂರ್ಣ ಶಾಸ್ತ್ರಗ್ರಂಥಗಳು. ಇವುಗಳಲ್ಲಿ ಬಹುತೇಕವೂ ಇಂದಿಗೆ ಪ್ರಕಟಿತರೂಪದಲ್ಲಿ ಲಭ್ಯವಿಲ್ಲ. | ||
== ತಾಲಲಕ್ಷಣಂ ಎಂಬ ಪ್ರತಿ == | == ತಾಲಲಕ್ಷಣಂ ಎಂಬ ಪ್ರತಿ == | ||
| Line 19: | Line 19: | ||
== ಪರಾಮರ್ಶನಗಳು == | == ಪರಾಮರ್ಶನಗಳು == | ||
ತಾಲ ಸಂಬಂಧಿತ ಗ್ರಂಥಗಳ ವಿಚಾರ ವಿಶ್ಲೇಷಣೆಯನ್ನು ತಿಳಿಯಬಯಸುವವರು ಡಾ.ಮನೋರಮಾ ಬಿ ಎನ್ ರಚಿಸಿರುವ ಮತ್ತು | ತಾಲ ಸಂಬಂಧಿತ ಗ್ರಂಥಗಳ ಹಾಗೂ ತಾಲದಶಪ್ರಾಣದ ಕುರಿತ ವಿಚಾರ ವಿಶ್ಲೇಷಣೆಯನ್ನು ತಿಳಿಯಬಯಸುವವರು ಡಾ.ಮನೋರಮಾ ಬಿ ಎನ್ ರಚಿಸಿರುವ ಮತ್ತು ನೂಪುರಭ್ರಮರಿ ಐಕೆ ಎಸ್ ಸೆಂಟರ್ ಪ್ರಕಟಿಸಿದ '''ತಾಲಾಂತರಂಗ - ನರ್ಮನಟುವಾಂಗ''' ಎಂಬ ಅಧ್ಯಯನ ಗ್ರಂಥವನ್ನು (೨೦೨೩- ೨೦೨೪) ಓದಬಹುದು. | ||
Dr. V Premalatha, Department of Music, Central University of Tamil Nadu, Thiruvarur , “Nāṭyacūḍāmaṇi of Sōmanārya, edited by V Premalatha,” ''MusicResearchLibrary'', accessed December 31, 2023, <nowiki>https://musicresearchlibrary.net/omeka/items/show/3625</nowiki>. | Dr. V Premalatha, Department of Music, Central University of Tamil Nadu, Thiruvarur , “Nāṭyacūḍāmaṇi of Sōmanārya, edited by V Premalatha,” ''MusicResearchLibrary'', accessed December 31, 2023, <nowiki>https://musicresearchlibrary.net/omeka/items/show/3625</nowiki>. | ||
Tålalakshanm of Acyutaråya; Edited by Dr. V. Premalatha; published by National Mission for Manuscripts New Delhi & New Bharatiya Book Corporation- New Delhi With a Telugu Commentary (Critical Edition and Translation). https://www.namami.gov.in/sites/default/files/Prakshika/PRAKASHIKA-57%20Talalakshnam.pdf | Tålalakshanm of Acyutaråya; Edited by Dr. V. Premalatha; published by National Mission for Manuscripts New Delhi & New Bharatiya Book Corporation- New Delhi With a Telugu Commentary (Critical Edition and Translation). https://www.namami.gov.in/sites/default/files/Prakshika/PRAKASHIKA-57%20Talalakshnam.pdf | ||
Revision as of 16:24, 7 August 2024
Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1]
ವಿಜಯನಗರ ಕರ್ನಾಟಸಾಮ್ರಾಜ್ಯ ಚಕ್ರವರ್ತಿಯಾಗಿದ್ದ ಶ್ರೀಕೃಷ್ಣದೇವರಾಯನ ಅಳಿಯ ಅಚ್ಯುತರಾಯನ ಗ್ರಂಥ ತಾಲಕಲಾಬ್ಧಿ. ತಾಲಕಲೆಯ ಸಾಗರ ಎಂಬುದು ಇದರ ಅರ್ಥ. ಇದರ ರಚನೆಯ ಕಾಲ ಅಂದಾಜು ೧೫೩೦ನೇ ಇಸವಿ. ತಾಲಕ್ಕೇ ಮೀಸಲಾದ ಗ್ರಂಥವಿದು. ತಾಲಕಲಾವಾರಿಧಿ ಮತ್ತು ತಾಲಮಹೋದಧಿ ಎಂಬ ಹೆಸರುಗಳಿಂದಲೂ ಪ್ರಸಿದ್ಧವಾಗಿದ್ದ ಈ ಗ್ರಂಥದ ಪೂರ್ಣಪಾಠ್ಯ ಇಂದಿಗೆ ಲಭ್ಯವಿಲ್ಲ. ಹಸ್ತಪ್ರತಿಯಾಗಿ ಸಿಗುವ ಇದು ಪೂರ್ಣಪ್ರಮಾಣದಲ್ಲಿ ಪ್ರಕಟಗೊಂಡಿಲ್ಲ.
ತಾಲಕಲಾಬ್ಧಿ- ಗ್ರಂಥವಿಶೇಷ
ತಾಲಕಲಾಬ್ಧಿ- ಹದಿನೈದು- ಹದಿನಾರನೇ ಶತಮಾನದ ವೇಳೆಗೆ ತೋರಿಕೊಳ್ಳುವ ಎಷ್ಟೋ ತಾಲ ಪ್ರಸ್ತಾರವಿಚಾರ, ತಾಲಾಂಗಗಳ ಕ್ರಮ, ತಾಳದಶಪ್ರಾಣಗಳ ವಿವರಗಳನ್ನು ಸವಿಸ್ತಾರವಾಗಿ ಒಳಗೊಂಡಿದೆ.
ಸಂಗೀತಚಂದ್ರೋದಯ, ಸಂಗೀತವಿದ್ಯಾವಿನೋದ, ಸಂಗೀತಾರ್ಣವ, ಸಂಗೀತಮಾರ್ಗ, ಸಂಗೀತಚೂಡಾಮಣಿ, ನೃತ್ತಚೂಡಾಮಣಿ, ಸಂಗೀತಮಣಿದರ್ಪಣ, ಚತುರ್ಭಾಷಾವಿಲಾಸ, ಕಾತ್ಯಾಯನೀಯ, ಆಂಜನೇಯಮತ ಎಂಬುದಾಗಿ ಒಂದಾನೊಂದು ಕಾಲಕ್ಕೆ ಬರೆಯಲ್ಪಟ್ಟ ಗ್ರಂಥಗಳಿದ್ದವು. ಕ್ರಮೇಣ ಲುಪ್ತವಾಗಿ ಹೋದವು. ಇಂಥ ಗ್ರಂಥಗಳಲ್ಲಿರುವ ಉಲ್ಲೇಖಗಳ ಸಹಿತ ವಿಜಯನಗರ ಸಾಮ್ರಾಜ್ಯದ ಹೊತ್ತಿಗೆ ಪ್ರವರ್ಧಮಾನದಲ್ಲಿದ್ದ ತಾಲದಶಪ್ರಾಣಗಳ ( ಹತ್ತು ವಿಧವಾದ ತಾಲದ ಅಂಗಾಂಶಗಳು) ಕುರಿತ ವಿವೇಚನೆ ತಾಲಕಲಾಬ್ಧಿ ಗ್ರಂಥದಲ್ಲಿ ಕಂಡುಬರುತ್ತದೆ. ಈ ಗ್ರಂಥಗಳಂತೆಯೇ ತೆಲುಗು ಭಾಷೆಯಲ್ಲಿ ಪೋಲೂರಿ ಗೋವಿಂದಕವಿ ರಚಿಸಿದ ತಾಲದಶಪ್ರಾಣಪ್ರದೀಪಿಕಾ ಮತ್ತು ರಾಗತಾಳಚಿಂತಾಮಣಿ, ಸಾರಿದೇವ ಅಥವಾ ಪರಮೇಶ್ವರ ಬರೆದಿದ್ದನೆನ್ನಲಾದ ತಾಲಕಲಾವಿಲಾಸ ಎಂಬ ಗ್ರಂಥಗಳು, ವಿಜಯನಗರ ಕರ್ನಾಟ ಸಾಮ್ರಾಜ್ಯದ ಸಾಳುವ ತಿಮ್ಮರಾಜುವಿನ ಸಹೋದರನಾದ ಗೋಪತಿಪ್ಪನ ತಾಲದೀಪಿಕಾ, ಇವೆಲ್ಲವೂ ತಾಲವಿಚಾರಕ್ಕೆ ಸಂಬಂಧಿಸಿದ ಮಹತ್ವಪೂರ್ಣ ಶಾಸ್ತ್ರಗ್ರಂಥಗಳು. ಇವುಗಳಲ್ಲಿ ಬಹುತೇಕವೂ ಇಂದಿಗೆ ಪ್ರಕಟಿತರೂಪದಲ್ಲಿ ಲಭ್ಯವಿಲ್ಲ.
ತಾಲಲಕ್ಷಣಂ ಎಂಬ ಪ್ರತಿ
ಕೆಲವೊಮ್ಮೆ ತಮ್ಮ ಪೂರ್ವಪರಂಪರೆಯ ಶಾಸ್ತ್ರಲಕ್ಷಣವಿಚಾರಗಳನ್ನು ಉಲ್ಲೇಖಿಸಿ, ವಿಶ್ಲೇಷಿಸಿ ಅನೇಕ ಲಾಕ್ಷಣಿಕರು ಗ್ರಂಥಗಳನ್ನು ಬರೆಯುತ್ತಾರೆ. ಆದರೆ ಬರೆದವರ ಹೆಸರು ಕಳೆದುಹೋಗಿ, ಅಳಿದುಳಿದ ಪ್ರತಿಗಳು ಪ್ರಖ್ಯಾತ ಪೂರ್ವಿಕರ ಹೆಸರಿನಲ್ಲೇ ಕಂಡುಬರುವುದಿದೆ. ಅಂಥ ಒಂದು ಪ್ರಸಕ್ತಿ ತಾಲಕಲಾಬ್ಧಿಗೂ ಕಂಡುಬಂದಿದೆ. ತಮಿಳ್ನಾಡು ಮತ್ತು ತಿರುಪತಿಯಲ್ಲಿ ದೊರೆತ ಕೋಹಲೋಕ್ತವೆನ್ನಲಾಗುವ ತಾಲಲಕ್ಷಣಂ ಎಂಬ ಗ್ರಂಥಹಸ್ತಪ್ರತಿಯಲ್ಲಿ ‘ಅಚ್ಯುತಭೂಬುಜ’ ಎಂದಾಗಿ ಅಲ್ಲಲ್ಲಿ ಉಕ್ತವಾಗಿದ್ದು; ತಾಲಲಕ್ಷಣಂ ಗ್ರಂಥಕ್ಕೆ ನೀಡಲಾದ ತೆಲುಗಿನ ವ್ಯಾಖ್ಯಾನವೂ ‘ಅಚ್ಯುತರಾಯಲ’ ಎಂದು ಹೇಳಿದೆ. ಈ ಹಸ್ತಪ್ರತಿಯಲ್ಲಿರುವ ತಾಲಪ್ರಶಂಸೆಯ ಶ್ಲೋಕಗಳು ತಾಲಕಲಾಬ್ಧಿಯದ್ದೆಂದು ವಿದ್ವಾಂಸರಾದ ಮಾನಪಲ್ಲಿ ರಾಮಕೃಷ್ಣ ಕವಿಗಳು ಉಲ್ಲೇಖಿಸಿದ್ದಾರೆ. ಆದ್ದರಿಂದ ತಾಲಲಕ್ಷಣಂ ಎಂಬ ಗ್ರಂಥವು ತಾಲಕಲಾಬ್ಧಿಯ ಪ್ರತಿಯಾಗಿದ್ದಿರುವ ಸಾಧ್ಯತೆಗಳೇ ಹೆಚ್ಚು.
ಗ್ರಂಥ ವ್ಯಾಖ್ಯಾನ- ಸೋಮನಾರ್ಯನ ನಾಟ್ಯಚೂಡಾಮಣಿಯೇ?
ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನ ಆಸ್ಥಾನದಲ್ಲಿದ್ದ ಅಷ್ಟಾವಧಾನಿ ಸೋಮನಾರ್ಯ ಅಥವಾ ಸೋಮನಾಥಭಟ್ಟ ಎಂಬುವನೂ ನಾಟ್ಯಚೂಡಾಮಣಿ ಎಂಬ ಗ್ರಂಥವನ್ನು ೧೫೪೦ನೇ ಇಸವಿಯಲ್ಲಿ ಬರೆದಿದ್ದ. ಈತನ ಆಚಾರ್ಯ ಸೀತಾರಾಮನೆಂಬುದಾಗಿ ತಿಳಿದುಬರುತ್ತದೆ. ಇದಕ್ಕೆ ಸ್ವರರಾಗಸುಧಾರಸ ಎಂಬ ಹೆಸರಿನ ಸಹಿತ ಸಂಗೀತರತ್ನಾಕರವೇ ಮೊದಲಾದ ಇನ್ನೂ ಹಲವು ಹೆಸರುಗಳೂ ಈ ಗ್ರಂಥಕ್ಕೆ ಇರುವುದು ಹಸ್ತಪ್ರತಿ ಸಂಪಾದನೆಯ ವೇಳೆ ಕಂಡುಬಂದಿದೆ. ಇದು ತಾಲಕಲಾಬ್ಧಿಯನ್ನು ಅನುಸರಿಸಿ ಬರೆದ ವ್ಯಾಖ್ಯಾನವೆಂಬ ಮಾತೂ ಇದೆ. ಇರಲಿ, ಆದರೆ ಇದೂ ಕೂಡಾ ತಾಲಕಲಾಬ್ಧಿಯಂತೆಯೇ ತುಣುಕುಗಳಲ್ಲಿ ಮಾತ್ರ ಲಭ್ಯವಿದೆ. ಇಂದಿಗೆ ನಾಟ್ಯಚೂಡಾಮಣಿ ಗ್ರಂಥದ ನಾಟ್ಯಾಧ್ಯಾಯದ ಬಹುತೇಕ ಸಂಗತಿಗಳು ಲುಪ್ತವಾಗಿವೆ. ಕೇವಲ ನಾಟ್ಯೋತ್ಪತ್ತಿ ಮತ್ತು ಆಚಾರ್ಯರ ವಿವರಗಳಷ್ಟೇ ದೊರೆಯುತ್ತವೆ. ನೃತ್ಯಕ್ಕೆ ಹೋಲಿಸಿದರೆ ರಾಗ, ಗೀತ, ತಾಲದ ವಿಚಾರಗಳು ಕೊಂಚ ಹೆಚ್ಚು ದೊರೆಯುತ್ತವೆ. ಗ್ರಂಥವು ಸರಸ್ವತೀ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ.
ಪೋಲೂರಿ ಗೋವಿಂದ ಕವಿಯು ತನ್ನ ಗ್ರಂಥ ರಾಗತಾಳಚಿಂತಾಮಣಿಯಲ್ಲಿ ಈ ಸೋಮನಾರ್ಯನನ್ನು ನೆನೆದಿದ್ದಾನೆ. ಅಭಿನವಭರತಸಾರಸಂಗ್ರಹ, ಮಹಾಭರತಚೂಡಾಮಣಿ, ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರ, ಭರತಕಲ್ಪಲತಾಮಂಜರಿ ಮೊದಲಾದ ೧೭-೧೮-೧೯-೨೦ನೇ ಶತಮಾನಕ್ಕೆ ಸಲ್ಲುವ ಗ್ರಂಥಗಳೂ ನಾಟ್ಯಚೂಡಾಮಣಿಯ ಲಕ್ಷಣಗಳನ್ನು ಹೋಲುತ್ತವೆಯೆಂದು ಈ ಗ್ರಂಥವನ್ನು ಸಂಪಾದಿಸಿದ ಡಾ. ಪ್ರೇಮಲತಾ ಅವರು ಅಭಿಪ್ರಾಯಿಸಿದ್ದಾರೆ.
ಪರಾಮರ್ಶನಗಳು
ತಾಲ ಸಂಬಂಧಿತ ಗ್ರಂಥಗಳ ಹಾಗೂ ತಾಲದಶಪ್ರಾಣದ ಕುರಿತ ವಿಚಾರ ವಿಶ್ಲೇಷಣೆಯನ್ನು ತಿಳಿಯಬಯಸುವವರು ಡಾ.ಮನೋರಮಾ ಬಿ ಎನ್ ರಚಿಸಿರುವ ಮತ್ತು ನೂಪುರಭ್ರಮರಿ ಐಕೆ ಎಸ್ ಸೆಂಟರ್ ಪ್ರಕಟಿಸಿದ ತಾಲಾಂತರಂಗ - ನರ್ಮನಟುವಾಂಗ ಎಂಬ ಅಧ್ಯಯನ ಗ್ರಂಥವನ್ನು (೨೦೨೩- ೨೦೨೪) ಓದಬಹುದು.
Dr. V Premalatha, Department of Music, Central University of Tamil Nadu, Thiruvarur , “Nāṭyacūḍāmaṇi of Sōmanārya, edited by V Premalatha,” MusicResearchLibrary, accessed December 31, 2023, https://musicresearchlibrary.net/omeka/items/show/3625.
Tålalakshanm of Acyutaråya; Edited by Dr. V. Premalatha; published by National Mission for Manuscripts New Delhi & New Bharatiya Book Corporation- New Delhi With a Telugu Commentary (Critical Edition and Translation). https://www.namami.gov.in/sites/default/files/Prakshika/PRAKASHIKA-57%20Talalakshnam.pdf