ತ್ರಿಲೋಚನಾದಿತ್ಯನ ನಾಟ್ಯಲೋಚನ ಗ್ರಂಥ: Difference between revisions

From enIKSwiki
Jump to navigation Jump to search
No edit summary
mNo edit summary
Line 1: Line 1:


Authored by ಡಾ.ಮನೋರಮಾ ಬಿ.ಎನ್.
Authored by ಡಾ.ಮನೋರಮಾ ಬಿ.ಎನ್.
Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ,   
Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ<ref>ಶಾಸ್ತ್ರರಂಗ ಭಾಗ 3- ಉತ್ತರ/ಪಾಂಚಾಲೀ (Video series)-ಸಂಚಿಕೆ 37-ತ್ರಿಲೋಚನಾದಿತ್ಯನ ನಾಟ್ಯಲೋಚನ,ಮದನಪಾಲನ ಆನಂದಸಂಜೀವನ
 
https://www.noopurabhramari.com/shaastraranga-37-trilocanaditya-natyalocana-and-madanapala-aanandasanjeevana/ </ref>,   


ನಾಟ್ಯಲೋಚನವು ಭಾರತೀಯ ನಾಟ್ಯರಂಗಭೂಮಿಗೆ ಹತ್ತಿರವಾದ ನಾಟ್ಯಶಾಸ್ತ್ರದ ಭರತನ ನಿಲುವುಗಳ ಹಾದಿಯಲ್ಲೇ ಬರೆಯಲ್ಪಟ್ಟ ಸಂಸ್ಕೃತ ಗ್ರಂಥ. ನಾಟ್ಯಕ್ಕೆ ದೃಷ್ಟಿಸಮಾನವಾದುದು ಎಂಬ ಅರ್ಥದಲ್ಲಿರುವ ಈ ಗ್ರಂಥದ ರಚನಾಕಾರ ತ್ರಿಲೋಚನಾದಿತ್ಯನೆಂದು ಹೇಳಲಾಗುತ್ತದೆ. ಈ ಗ್ರಂಥ ರಚನೆಯ ಕಾಲ ೧೩ನೇ ಶತಮಾನ.  
ನಾಟ್ಯಲೋಚನವು ಭಾರತೀಯ ನಾಟ್ಯರಂಗಭೂಮಿಗೆ ಹತ್ತಿರವಾದ ನಾಟ್ಯಶಾಸ್ತ್ರದ ಭರತನ ನಿಲುವುಗಳ ಹಾದಿಯಲ್ಲೇ ಬರೆಯಲ್ಪಟ್ಟ ಸಂಸ್ಕೃತ ಗ್ರಂಥ. ನಾಟ್ಯಕ್ಕೆ ದೃಷ್ಟಿಸಮಾನವಾದುದು ಎಂಬ ಅರ್ಥದಲ್ಲಿರುವ ಈ ಗ್ರಂಥದ ರಚನಾಕಾರ ತ್ರಿಲೋಚನಾದಿತ್ಯನೆಂದು ಹೇಳಲಾಗುತ್ತದೆ. ಈ ಗ್ರಂಥ ರಚನೆಯ ಕಾಲ ೧೩ನೇ ಶತಮಾನ.  
Line 27: Line 29:
Natyashastra with Abhinavabharati Commentary. 2012. Ed R S Nagar. Delhi : Parimal Publication
Natyashastra with Abhinavabharati Commentary. 2012. Ed R S Nagar. Delhi : Parimal Publication


ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೧: ದಾಕ್ಷಿಣಾತ್ಯ (Video series)-ಸಂಚಿಕೆ 37 -
ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೧: ದಾಕ್ಷಿಣಾತ್ಯ (Video series)-ಸಂಚಿಕೆ 37 - https://www.youtube.com/channel/UCzsvThi5o-5X1-5kp7jaxVQ


ಈ ಗ್ರಂಥಗಳಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. <nowiki>https://www.noopurabhramari.com/yakshamargamukura/</nowiki>[[Category:Art and Culture]]
ಈ ಗ್ರಂಥಗಳಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. <nowiki>https://www.noopurabhramari.com/yakshamargamukura/</nowiki>[[index.php?title=Category:Art and Culture]]

Revision as of 12:02, 25 June 2024

Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1],

ನಾಟ್ಯಲೋಚನವು ಭಾರತೀಯ ನಾಟ್ಯರಂಗಭೂಮಿಗೆ ಹತ್ತಿರವಾದ ನಾಟ್ಯಶಾಸ್ತ್ರದ ಭರತನ ನಿಲುವುಗಳ ಹಾದಿಯಲ್ಲೇ ಬರೆಯಲ್ಪಟ್ಟ ಸಂಸ್ಕೃತ ಗ್ರಂಥ. ನಾಟ್ಯಕ್ಕೆ ದೃಷ್ಟಿಸಮಾನವಾದುದು ಎಂಬ ಅರ್ಥದಲ್ಲಿರುವ ಈ ಗ್ರಂಥದ ರಚನಾಕಾರ ತ್ರಿಲೋಚನಾದಿತ್ಯನೆಂದು ಹೇಳಲಾಗುತ್ತದೆ. ಈ ಗ್ರಂಥ ರಚನೆಯ ಕಾಲ ೧೩ನೇ ಶತಮಾನ.

ತ್ರಿಲೋಚನಾದಿತ್ಯ- ಗ್ರಾಂಥಿಕ ವಿವರಗಳು

ಈತ ಯಾವ ಪ್ರದೇಶದಲ್ಲಿ ಬದುಕಿದ್ದ, ಎಲ್ಲಿದ್ದ ಎಂಬುದು ತಿಳಿದುಬಂದಿಲ್ಲ. ಆದರೆ ಈ ಗ್ರಂಥದ ಶೈಲಿ, ಅನುಸರಿಸಿದ ಕೆಲವು ಪೂರ್ವಸೂರಿಗಳ ಕ್ರಮಗಳನ್ನು ಗಮನಿಸಿದಾಗ ಉತ್ತರ ಭಾರತದವನಿದ್ದಿರಬಹುದೆಂಬ ಅಭಿಪ್ರಾಯ ಬಲವಾಗಿ ಮೂಡುತ್ತದೆ.

ಸ್ವತಃ ತ್ರಿಲೋಚನಾದಿತ್ಯನೇ ಲೋಚನ ವ್ಯಾಖ್ಯಾಂಜನ ಎಂಬ ವ್ಯಾಖ್ಯಾನವನ್ನು ಈ ನಾಟ್ಯಲೋಚನ ಗ್ರಂಥಕ್ಕೆ ಬರೆದಿದ್ದನೆಂದೂ ತಿಳಿಯುತ್ತದೆ. ಜೊತೆಗೆ ಈತ ಭರತನ ನಾಟ್ಯಶಾಸ್ತ್ರಕ್ಕೆ ೨ನೇ ಭಾಗವೆಂಬಂತೆ ಭರತೋದಯ ಎಂಬ ಗ್ರಂಥವನ್ನೂ ಮತ್ತು ರಾಮಚರಿತಮ್ ಎಂಬ ನಾಟಕವನ್ನೂ ಬರೆದಿದ್ದನೆನ್ನಲಾಗಿದೆ. ಈ ನಾಟ್ಯಲೋಚನ ಗ್ರಂಥವು ಸಾಗರನಂದಿಯ ನಾಟಕಲಕ್ಷಣರತ್ನಕೋಶದ ಲಕ್ಷಣಗಳಿಗೆ ನಿಕಟವಾಗಿರುವುದನ್ನೂ ಗಮನಿಸಿದಾಗ ತ್ರಿಲೋಚನಾದಿತ್ಯನು ಸಾಗರನಂದಿಯಿಂದ ಪ್ರಭಾವಿತನಾಗಿದ್ದನೆಂಬುದು ತಿಳಿಯುತ್ತದೆ.

ನಾಟ್ಯಲೋಚನ- ಗ್ರಂಥವೈಶಿಷ್ಟ್ಯ

ನಾಟ್ಯಲೋಚನ ಗ್ರಂಥ ತನ್ನ ಲಕ್ಷಣವಿವರಗಳಲ್ಲಿ ಅನೇಕಾನೇಕ ರೂಪಕ ಅಥವಾ ಕಾವ್ಯಗಳನ್ನು ಗಮನಿಸಿ ದಾಖಲಿಸಿರುವುದನ್ನು ಮನಗಾಣಬಹುದು. ಶಾಕುಂತಲ, ವಿಕ್ರಮೋರ್ವಶೀಯ, ಕರ್ಪೂರಮಂಜರಿ, ರಘುವಂಶಮ್, ಗಾಥಾಸಪ್ತಶತಿ, ನಾಗಸರ್ವಸ್ವ, ಅನರ್ಘರಾಘವ, ರತ್ನಾವಲೀ, ವೇಣಿಸಂಹಾರ, ಬಾಲರಾಮಾಯಣ, ರಾಮಾನಂದ, ಪುಷ್ಪದೂತಿಕಾ ಕುಲವೀಥೀ, ಉನ್ಮತ್ತರಾಘವ, ಚೌರಿಕಾವಿವಾಹ, ಕುಂಭಕ ಮೊದಲಾದ ಎಷ್ಟೋ ನಾಟಕಗಳನ್ನು ಉಲ್ಲೇಖಿಸಿ ರಂಗಭೂಮಿಯ ಲಕ್ಷಣಗಳನ್ನು ಬರೆದಿದೆ. ಜೊತೆಗೆ ಪಾಣಿನಿ, ಭೃಗುಸ್ವಾಮಿ, ಭಾರದ್ವಾಜ, ರಾಹುಲ, ಮಾಘ, ಮಲ್ಲನಾಗ, ಭವಭೂತಿ, ಮಾತೃಗುಪ್ತಾದಿ ಪೂರ್ವಸೂರಿಗಳ ವಿಚಾರಗಳನ್ನೂ ಉಲ್ಲೇಖಿಸಿದೆಯೆಂದರೆ ತ್ರಿಲೋಚನಾದಿತ್ಯನ ಅಧ್ಯಯನ ವಿಸ್ತಾರ ದೊಡ್ಡದು ಎನ್ನುವುದು ಅರ್ಥವಾಗುತ್ತದೆ.

ನಾಟ್ಯಲೋಚನವು ಮಹಾನಟ ಶಿವನ ಸ್ತುತಿಯಿಂದ ಆರಂಭವಾಗುತ್ತದೆ. ನಾಟ್ಯಲೋಚನದಲ್ಲಿ ನಾಟ್ಯಪ್ರಯೋಜನ, ನಾಂದಿ-ಪ್ರಸ್ತಾವನಾದಿ ಅಂಗಗಳು, ಮಸೀ ವೇಷ, ಸ್ಥಾನಕ, ಪಾತ್ರಪ್ರವೇಶನ, ಗತಿ-ಚಾರಿ, ರಸ-ಭಾವ, ಅಂಗೋಪಾಂಗ ಅಭಿನಯ, ನಾಯಕಾ ನಾಯಿಕಾ, ಸ್ಮರಾವಸ್ಥಾ, ಹಾವ-ಭಾವ, ಶಬ್ದಾರ್ಥ ನಿಶ್ಚಯಗಳೆಂಬ ೧೨ ಅಧ್ಯಾಯಗಳಿವೆ. ಆಹಾರ್ಯಾಭಿನಯದ ಎಷ್ಟೋ ಸಂಗತಿಗಳ ಬಗ್ಗೆ ಮಸೀವೇಷ ಎಂಬ ಶೀರ್ಷಿಕೆಯ ಅಧ್ಯಾಯವು ಚರ್ಚಿಸಿದೆ.

ಪ್ರೇರಣೆ ಮತ್ತು ಸಂಪಾದನೆ

ಈ ಗ್ರಂಥವನ್ನು ಉಲ್ಲೇಖಿಸಿ ರಾಘವಭಟ್ಟ, ವಾಸುದೇವ, ರಂಗನಾಥ, ದಿನಕರ ಹಾಗೂ ಶುಭಂಕರ ಮೊದಲಾದ ಲಾಕ್ಷಣಿಕರು ಬೇರೆ ಗ್ರಂಥಗಳಿಗೆ ಬರೆದ ಲಕ್ಷಣ- ವ್ಯಾಖ್ಯಾನ ಬರೆದಿರುವುದನ್ನೂ ಗಮನಿಸಬಹುದು. ಇದರಿಂದಾಗಿ ಮಧ್ಯಕಾಲೀನ ಭಾರತದಲ್ಲಿ ನಾಟ್ಯಲೋಚನವು ಒಂದು ಪ್ರಮುಖ ಗ್ರಂಥವಾಗಿತ್ತೆನ್ನುವುದು ತಿಳಿಯುತ್ತದೆ.ಈ ಗ್ರಂಥದ ಹಸ್ತಪ್ರತಿಗಳು ವಾರಣಾಸಿ ಸರಸ್ವತೀ ಭವನ್ ಗ್ರಂಥಾಲಯ ಮತ್ತು ಕೊಲ್ಕತ್ತಾ ಏಷ್ಯಟಿಕ್ ಸೊಸೈಟಿ ಗ್ರಂಥಾಲಯಗಳಿಂದ ದೇವನಾಗರಿ ಮತ್ತು ಬಂಗಾಲೀ ಭಾಷೆಗಳಲ್ಲಿ ದೊರಕಿದ್ದು ; ಅಮಲ್ ಶಿಬಿ ಪಾಠಕ್ ಎನ್ನುವವವರು ಸಂಪಾದಿಸಿ ಅನುವಾದ ಸಹಿತ ಪ್ರಕಟಿಸಿದ್ದಾರೆ.

ಪರಾಮರ್ಶನ ಗ್ರಂಥಗಳು

Amal Shibi Phatak. 2012. Nāṭyalocanam of Trilocanāditya. Cahukambha Samskrit Samstan.

Natakalakshanaratnakosha of Sagaranandin. 1972. Babulal Shukla Shastri (Ed). Chowkambha Sanskrit Series. https://archive.org/details/in.ernet.dli.2015.408248

Nataka Lakshan Ratna Kosha. 1974. Ed Siddheshwar Chattopadhyaya. Calcutta : Punthi Pusthak

Natyashastra with Abhinavabharati Commentary. 2012. Ed R S Nagar. Delhi : Parimal Publication

ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೧: ದಾಕ್ಷಿಣಾತ್ಯ (Video series)-ಸಂಚಿಕೆ 37 - https://www.youtube.com/channel/UCzsvThi5o-5X1-5kp7jaxVQ

ಈ ಗ್ರಂಥಗಳಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/index.php?title=Category:Art and Culture

  1. ↑ ಶಾಸ್ತ್ರರಂಗ ಭಾಗ 3- ಉತ್ತರ/ಪಾಂಚಾಲೀ (Video series)-ಸಂಚಿಕೆ 37-ತ್ರಿಲೋಚನಾದಿತ್ಯನ ನಾಟ್ಯಲೋಚನ,ಮದನಪಾಲನ ಆನಂದಸಂಜೀವನ https://www.noopurabhramari.com/shaastraranga-37-trilocanaditya-natyalocana-and-madanapala-aanandasanjeevana/