ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥ: Difference between revisions
mNo edit summary |
mNo edit summary |
||
| Line 3: | Line 3: | ||
Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ<ref>ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ ಸಂಚಿಕೆ ೪೩ : ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಮತ್ತು ಅದರ ವಿಶೇಷ ಸಂಗತಿಗಳು ಹಾಗೂ ಮಂಡನನ ಸಂಗೀತ ಮಂಡನ ಸೇರಿದಂತೆ ಭಾರತೀಯ ಗೀತ-ನೃತ್ಯ- ಯಕ್ಷಗಾನ ರಂಗಭೂಮಿಗಳಿಗೆ ಜೈನರ ಕೊಡುಗೆಗಳು | Published by ನೂಪುರ [https://www.noopurabhramari.com/ ಭ್ರಮರಿ]. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ<ref>ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ ಸಂಚಿಕೆ ೪೩ : ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಮತ್ತು ಅದರ ವಿಶೇಷ ಸಂಗತಿಗಳು ಹಾಗೂ ಮಂಡನನ ಸಂಗೀತ ಮಂಡನ ಸೇರಿದಂತೆ ಭಾರತೀಯ ಗೀತ-ನೃತ್ಯ- ಯಕ್ಷಗಾನ ರಂಗಭೂಮಿಗಳಿಗೆ ಜೈನರ ಕೊಡುಗೆಗಳು | ||
https://www.noopurabhramari.com/</ref> | https://www.noopurabhramari.com/shaastra-ranga-43-sudhakalasha-sngitopanishat-sarodhara-and-other-such-texts/[https://www.noopurabhramari.com/ /]</ref> | ||
ಸಂಗೀತೋಪನಿಷತ್ ಸಾರೋದ್ಧಾರ- ಸಂಗೀತ ಕ್ಷೇತ್ರದ ತತ್ವಾರ್ಥ ಸಂಗ್ರಹದ ಸಾರದ ಶ್ರೇಷ್ಠ ಕೃತಿ ಎಂಬ ಅರ್ಥವನ್ನು ಹೊರಸೂಸುವ ಈ ಗ್ರಂಥದ ಕರ್ತೃ ಜೈನಮುನಿ ವಾಚನಾಚಾರ್ಯ ಸುಧಾಕಲಶ. ಮಧ್ಯಪ್ರದೇಶ-ಗುಜರಾತ್-ರಾಜಾಸ್ಥಾನ ವಿಭಾಗಗಳಿಗೆ ಸೇರುವ ಈ ಗ್ರಂಥವು ನೃತ್ಯ ಮತ್ತು ಗೀತ-ವಾದ್ಯಶಾಸ್ತ್ರದ ಪಶ್ಚಿಮ ಭಾರತದ ಪ್ರವೃತ್ತಿ ಭೇದಗಳಿಗೆ ಪ್ರವರ್ತಕರೂಪವೆನಿಸಿಕೊಳ್ಳಲು ಅರ್ಹವಾಗಿದೆ. ಈ ಗ್ರಂಥದ ಹಸ್ತಪ್ರತಿ ಬಿಕಾನೇರ್ ಮತ್ತು ಮುಂಬಯಿಯಲ್ಲಿ ದೊರೆತಿದೆ. ಜಿನರತ್ನಕೋಶವೆಂಬ ಸಮುಚ್ಛಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಗುರುತಿಸಲಾಗಿದೆ. | ಸಂಗೀತೋಪನಿಷತ್ ಸಾರೋದ್ಧಾರ- ಸಂಗೀತ ಕ್ಷೇತ್ರದ ತತ್ವಾರ್ಥ ಸಂಗ್ರಹದ ಸಾರದ ಶ್ರೇಷ್ಠ ಕೃತಿ ಎಂಬ ಅರ್ಥವನ್ನು ಹೊರಸೂಸುವ ಈ ಗ್ರಂಥದ ಕರ್ತೃ ಜೈನಮುನಿ ವಾಚನಾಚಾರ್ಯ ಸುಧಾಕಲಶ. ಮಧ್ಯಪ್ರದೇಶ-ಗುಜರಾತ್-ರಾಜಾಸ್ಥಾನ ವಿಭಾಗಗಳಿಗೆ ಸೇರುವ ಈ ಗ್ರಂಥವು ನೃತ್ಯ ಮತ್ತು ಗೀತ-ವಾದ್ಯಶಾಸ್ತ್ರದ ಪಶ್ಚಿಮ ಭಾರತದ ಪ್ರವೃತ್ತಿ ಭೇದಗಳಿಗೆ ಪ್ರವರ್ತಕರೂಪವೆನಿಸಿಕೊಳ್ಳಲು ಅರ್ಹವಾಗಿದೆ. ಈ ಗ್ರಂಥದ ಹಸ್ತಪ್ರತಿ ಬಿಕಾನೇರ್ ಮತ್ತು ಮುಂಬಯಿಯಲ್ಲಿ ದೊರೆತಿದೆ. ಜಿನರತ್ನಕೋಶವೆಂಬ ಸಮುಚ್ಛಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಗುರುತಿಸಲಾಗಿದೆ. | ||
| Line 21: | Line 21: | ||
Natyashastra with Abhinavabharati Commentary. 2012. Ed R S Nagar. Delhi : Parimal Publication | Natyashastra with Abhinavabharati Commentary. 2012. Ed R S Nagar. Delhi : Parimal Publication | ||
Sangītopanishat | Sangītopanishat Saroddhāra.Author: Vacanacarya Sudhakalasa; Editor: Umakant Premanand Shah 1961. http://musicresearchlibrary.net/omeka/items/show/855 | ||
ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೩ : - <nowiki>https://www.youtube.com/channel/UCzsvThi5o-5X1-5kp7jaxVQ</nowiki> / @noopurabhramari1212[[index.php?title=Category:Art and Culture]] | ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೩ : - <nowiki>https://www.youtube.com/channel/UCzsvThi5o-5X1-5kp7jaxVQ</nowiki> / @noopurabhramari1212[[index.php?title=Category:Art and Culture]] | ||
Revision as of 17:10, 7 August 2024
Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1]
ಸಂಗೀತೋಪನಿಷತ್ ಸಾರೋದ್ಧಾರ- ಸಂಗೀತ ಕ್ಷೇತ್ರದ ತತ್ವಾರ್ಥ ಸಂಗ್ರಹದ ಸಾರದ ಶ್ರೇಷ್ಠ ಕೃತಿ ಎಂಬ ಅರ್ಥವನ್ನು ಹೊರಸೂಸುವ ಈ ಗ್ರಂಥದ ಕರ್ತೃ ಜೈನಮುನಿ ವಾಚನಾಚಾರ್ಯ ಸುಧಾಕಲಶ. ಮಧ್ಯಪ್ರದೇಶ-ಗುಜರಾತ್-ರಾಜಾಸ್ಥಾನ ವಿಭಾಗಗಳಿಗೆ ಸೇರುವ ಈ ಗ್ರಂಥವು ನೃತ್ಯ ಮತ್ತು ಗೀತ-ವಾದ್ಯಶಾಸ್ತ್ರದ ಪಶ್ಚಿಮ ಭಾರತದ ಪ್ರವೃತ್ತಿ ಭೇದಗಳಿಗೆ ಪ್ರವರ್ತಕರೂಪವೆನಿಸಿಕೊಳ್ಳಲು ಅರ್ಹವಾಗಿದೆ. ಈ ಗ್ರಂಥದ ಹಸ್ತಪ್ರತಿ ಬಿಕಾನೇರ್ ಮತ್ತು ಮುಂಬಯಿಯಲ್ಲಿ ದೊರೆತಿದೆ. ಜಿನರತ್ನಕೋಶವೆಂಬ ಸಮುಚ್ಛಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಗುರುತಿಸಲಾಗಿದೆ.
ಸುಧಾಕಲಶ : ವೈಯಕ್ತಿಕ ವಿವರಗಳು
ಈತನು ಶ್ವೇತಾಂಬರ ಜೈನ ಸಮುದಾಯದ ಮಾಲಧಾರೀಯ ಗಚ್ಛಕ್ಕೆ ಸೇರಿದ್ದ ಮುನಿ. ಶ್ರೀತಿಲಕ ಮತ್ತು ಶ್ರೀ ರಾಜಶೇಖರ ಸೂರಿ ಎಂಬ ಮುನಿಗಳ ಶಿಷ್ಯ. ಈತನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ರಚನೆಗೊಂಡ ಕಾಲಮಾನ ಸಾಮಾನ್ಯಶಕ ಸುಮಾರು ೧೩೨೪ರಿಂದ ೧೩೫೦ನೇ ಇಸವಿ. ಸುಧಾಕಲಶನು ಇದಕ್ಕಿಂತ ಮೊದಲೇ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ಸಂಗೀತ ಗ್ರಂಥವೊಂದನ್ನು ರಚಿಸಿದ್ದನೆಂದೂ ತಿಳಿದುಬರುತ್ತದೆ. ಜೊತೆಗೆ ಏಕಾಕ್ಷರ ನಾಮಮಾಲಾ ಎಂಬ ೫೦ ಪದ್ಯಗಳ ಪುಸ್ತಿಕೆಯೂ ಈತನ ಹೆಸರಲ್ಲಿ ಕಂಡುಬರುತ್ತದೆ.ಸುಧಾಕಲಶನ ಗುರುಗಳೆನಿಸಿದ ಅನೇಕ ಹಿರಿಯ ಮುನಿಗಳೂ ಸಂಗೀತಶಾಸ್ತ್ರದಲ್ಲಿ ಅಪಾರ ಪ್ರತಿಭಾಸಂಪನ್ನರಾಗಿದ್ದರೆಂಬುದು ತಿಳಿದುಬರುತ್ತದೆ.
ಸುಧಾಕಲಶನ ಗ್ರಂಥವೈಶಿಷ್ಟ್ಯ
ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ಜಿನಸ್ತುತಿ, ಭಾರತೀಸ್ತುತಿ ಹಾಗೂ ಗುರುನಮಸ್ಕಾರ ಶ್ಲೋಕಗಳಿಂದ ಆರಂಭಗೊಳ್ಳುತ್ತದೆ. ಜೊತೆಗೆ ಪ್ರತೀ ಅಧ್ಯಾಯಗಳಲ್ಲೂ ಜಿನಪತಿ, ತೀರ್ಥಂಕರ ಸ್ತುತಿಗಳನ್ನು ಗುರುತಿಸಬಹುದು. ಈ ಗ್ರಂಥವು ಆರು ಅಧ್ಯಾಯಗಳಲ್ಲಿದ್ದು; ಮೊದಲ ನಾಲ್ಕು ಅಧ್ಯಾಯಗಳು ಗೀತ- ಪ್ರಬಂಧ, ಪ್ರಸ್ತಾರಾದಿ ಸೋಪಾಶ್ರಯ ತಾಲ ಪ್ರಕಾಶ, ಗಾನಸ್ವರ ರಾಗಾದಿ ಪ್ರಕಾಶನ, ಚತುರ್ವಿಧ ವಾದ್ಯಪ್ರಕಾಶನ ಎಂಬ ಹೆಸರುಳ್ಳವು. ಇವು ದೇಶೀಪ್ರಬಂಧ, ದೇಶೀತಾಲ, ಶ್ರುತಿ-ಸ್ವರ- ಗಾಯನ, ರಾಗ ಮತ್ತು ವಾದ್ಯಗಳ ವಿವರಣೆಗಳನ್ನು ಹೊಂದಿವೆ. ಐದನೇ ಮತ್ತು ಆರನೇ ಅಧ್ಯಾಯಗಳು ನೃತ್ಯಕ್ಕೆ ಸಂಬಂಧಿಸಿದ- ನೃತ್ಯಪದ್ಧತಿ ಪ್ರಕಾಶನ ಎಂಬ ಅಧ್ಯಾಯಗಳಾಗಿವೆ. ಅದರಲ್ಲೂ ಐದನೇ ಅಧ್ಯಾಯದಲ್ಲಿ ನರಕೃತ ಮತ್ತು ನಾರೀಕೃತ ಎಂಬುದಾಗಿ ನರ್ತಕ -ನರ್ತಕಿಯರ ನೃತ್ಯವಿಭಾಗಗಳನ್ನು ವಿಂಗಡಿಸುತ್ತಾನೆ ಸುಧಾಕಲಶ. ಇಲ್ಲಿ ನರಕೃತವಾದುದು ಅಂದರೆ ನೃತ್ತ ಅಥವಾ ನಾಟಕ ; ನಾರೀಕೃತವೆನ್ನುವುದು ನೃತ್ಯ ಎಂಬುದು ತಿಳಿದುಬರುತ್ತದೆ. ಹಾಗೆಯೇ ಶಿವಭಕ್ತನಾದ ಪಾಲಕ ಎಂಬ ಹೆಸರಿನ ಪ್ರದ್ಯೋತನೆಂಬ ಆವಂತೀ ಜೈನರಾಜನಿಂದ ಭೂಲೋಕದಲ್ಲಿ ನೃತ್ಯವು ಪ್ರಚುರಿಸಲ್ಪಟ್ಟಿತು ಎಂದೂ ಸ್ತುತಿ ಮಾಡುತ್ತಾನೆ. ಹಸ್ತಾದಿ ಅಂಗೋಪಾಂಗ ಅಭಿನಯಗಳು, ಮಾರ್ಗ ಮತ್ತು ದೇಶೀ ಎಂಬ ವಿಭಾಗಗಳಲ್ಲಿ ಸ್ಥಾನಕ - ಚಾರಿಗಳನ್ನು ವ್ಯವಹರಿಸಿದ್ದಾನೆ. ಆರನೇ ಅಧ್ಯಾಯದಲ್ಲಿ ಕರಣ, ಅಂಗಹಾರ, ಭ್ರಮರಿ, ನೃತ್ಯಪದ್ಧತಿ, ನೃತ್ಯ ಶಿಕ್ಷಾರಂಭ ಕ್ರಮ, ಸಭಾಲಕ್ಷಣಗಳನ್ನು ವಿವರಿಸಿದ್ದಾನೆ.
ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ಅನೇಕ ವಿಷಯಗಳಲ್ಲಿ ಮಹತ್ವದ್ದಾಗಿದೆ, ವಿಶಿಷ್ಟವೂ ಆಗಿದೆ. ಲಕ್ಷಣಗಳಲ್ಲಿ ಬಹಳಷ್ಟು ಅನನ್ಯತೆಗಳನ್ನು ಕಾಣುವಂತೆಯೇ ಬರೆಯುತ್ತಾನೆ ಸುಧಾಕಲಶ. ಉದಾಹರಣೆಗೆ ಹೇಳುವುದಾದರೆ- ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥದಲ್ಲಿ ಪಟ್ಟಾವುಜ ವಾದನಕ್ಕೆ ಪೂರಕವಾಗಿ ಘಾತಿಸುವಂತೆ ಏಳು ಬಗೆಯ ಪಾದಕರ್ಮಗಳನ್ನು ಹೆಚ್ಚುವರಿಯಾಗಿ ಕಾಣಬಹುದು. ಚಾರಿಗಳ ನಾಮಕರಣವೂ ಕೊಂಚ ಭಿನ್ನವಾಗಿದೆ. ಭ್ರಮಂತಲ್ಲಿ, ಉತ್ಸಾಂದಿತಾ, ರೇಚಿಕೋರ್ದ್ಧಿಕಾ, ಅಂಚಿತಾ, ವೀಚೀ, ಸಬಾಹುಕಾ, ಉದ್ವೇಷ್ಟಿತ, ಸಂಶ್ಲಿಷ್ಟಾ ಎಂಬ ಭೂಮಿಚಾರಿಗಳೂ; ಆಕಾಶಚಾರಿಗಳ ಪೈಕಿ ನೂಪುರಪಾಟಿಕಾ, ಘೂರ್ಣಿತೋನ್ಮತ್ತ, ತಿರ್ಯಗಾಂಚಿತಾ, ಉತ್ಪ್ಲುತಾಲಗಸಂಸ್ಥಾನ ಮತ್ತು ಸಂಕ್ಷಿಪ್ತಾ ಎಂಬ ಚಾರಿಗಳು ಕಾಣಸಿಗುತ್ತವೆ. ಕರಣಲಕ್ಷಣಗಳಲ್ಲೂ ಸಾಕಷ್ಟು ಭಿನ್ನತೆಯನ್ನು ಈತನ ಸಂಪ್ರದಾಯ ಸೂಚಿಸಿದೆ. ರೇಚಿತ, ಅಂಸಾಂಚಿತ, ಪಾದೋರುಶ್ಲಿಷ್ಟಕ, ಪಾರ್ಷ್ಣಿಸಂಘಟ್ಟಿತಾ, ಲತಾಕುಂಚಿತ ಮುಂತಾದ ಕೆಲವು ಪರ್ಯಾಯ ಕರಣಗಳನ್ನೂ ಲಕ್ಷಣೀಕರಿಸಿದೆ. ಇನ್ನು ಸುತ್ತುವ ತಿರುಗುವ ಚಲನೆಗಳುಳ್ಳ ಭ್ರಮರಿಯ ವಿಭಾಗೀಕರಣವು ಈ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥದಲ್ಲಿ ಕಂಡುಬಂದಿದೆ. ೩೨ ವಿಧದ ಭ್ರಮರಿ ಸಮುಚ್ಚಯದ ಬಗ್ಗೆ ಸುಧಾಕಲಶನು ತಿಳಿಸಿದ್ದಾನೆ. ಅವು ಆಕಾಶ, ಭೂಮಿ ಚಾರಿಗಳಂತೆಯೇ ಪ್ರಯುಕ್ತವಾದಾಗ ಮತ್ತೂ ೩೨ ರೀತಿಯ ವೈಶಿಷ್ಟ್ಯಪೂರ್ಣ ಭ್ರಮರಿಗಳು ಏರ್ಪಡುತ್ತವೆಯೆಂದಿದೆ. ಹೀಗೆ ಭರತಶಾಸ್ತ್ರದ ಪಶ್ಚಿಮದ ವಿಶಿಷ್ಟ ಪರಂಪರೆಯನ್ನು ಗುರುತಿಸಬಹುದಾದ ಲಕ್ಷಣಗಳನ್ನು ಪ್ರಮುಖತಃ ಭ್ರಮರಿಗಳಲ್ಲಿ ನಾನು ಕಂಡುಕೊಂಡಿದ್ದೇನೆ. ಈ ಕುರಿತಾದ ಹೆಚ್ಚಿನ ವಿವರಗಳಿಗೆ ಅಧ್ಯಯನ ಗ್ರಂಥ ಯಕ್ಷಮಾರ್ಗಮುಕುರವನ್ನು[2] ಓದಬಹುದು.
ಸಂಗೀತೋಪನಿಷತ್ ಸಾರೋದ್ಧಾರ ಹೆಸರಿನ ಇನ್ನಿತರ ಗ್ರಂಥಗಳು
ಸಂಗೀತ ಸಾರೋದ್ಧಾರ ಎಂಬ ಮತ್ತೊಂದು ಗ್ರಂಥವು ಶಾರದಾನಂದನ ಎಂಬ ವಿಶೇಷಣವನ್ನು ಪಡೆದ ಕೀಕರಾಜ ಎಂಬಾತನ ಹೆಸರಿನಲ್ಲಿದ್ದು; ಪುಣೆಯ ಭಂಡಾರ್ಕರ್ ಸಂಸ್ಥೆಯಲ್ಲಿ ಇದರ ಹಸ್ತಪ್ರತಿಗಳಿವೆ. ಈ ಕೀಕರಾಜನ ಸಂಗೀತ ಸಾರೋದ್ಧಾರ ಗ್ರಂಥವೂ ಗೀತ, ಸ್ವರ, ರಾಗ, ಪ್ರಕೀರ್ಣಕ, ಗೀತಪ್ರಬಂಧ, ವಾದ್ಯ, ತಾಲ, ನೃತ್ಯ ಎಂಬ ಅಧ್ಯಾಯಗಳನ್ನು ಹೊಂದಿದೆ. ಇದಲ್ಲದೆ ಪರಾಶರಗೋತ್ರೀಯ ರಾಮಕೃಷ್ಣಭಟ್ಟನ ರಾಮಕೌತೂಹಲ ಅಥವಾ ರಾಗಕೌತೂಹಲವೆಂಬ ಹೆಸರಿನ ಗ್ರಂಥವು ಸಂಗೀತ ಸಾರೋದ್ಧಾರ ಎಂಬ ಹೆಸರಿನಿಂದಲೂ ಬಿಕಾನೇರ್ನ ಹಸ್ತಪ್ರತಿ ಕ್ಯಾಟಲಾಗ್ನಲ್ಲಿ ಗುರುತಿಸಬಹುದೆಂದು ಡಾ. ವಿ. ರಾಘವನ್ ಬರೆದಿದ್ದಾರೆ.[3] ಈ ಗ್ರಂಥವೂ ಗೀತ ನೃತ್ಯ-ವಿಷಯಕವಾಗಿದೆಯೆಂದೇ ಹೇಳಲಾಗಿದೆ. ಇನ್ನು ೧೭೦೦-೧೭೫೦ನೇ ಇಸವಿಯಲ್ಲಿದ್ದ ಮೈಸೂರಿನ ಶ್ರೀರಂಗನಾಥನ ಸಂಗೀತಸಾರೋದ್ಧಾರ ಸಂಗೀತಶಾಸ್ತ್ರದುಗ್ಧಾಬ್ಧಿ ಎಂಬ ಕನ್ನಡ-ತೆಲುಗು ಬರೆವಣಿಗೆಯಲ್ಲಿರುವ ಹಸ್ತಪ್ರತಿಯೂ ಮೈಸೂರು: ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿದೆ.[4] ಇದೂ ಗೀತ, ಸ್ವರ, ರಾಗ, ಪ್ರಬಂಧ, ತಾಲ, ನೃತ್ತ ಇತ್ಯಾದಿ ಅಧ್ಯಾಯ ವಿಷಯಗಳನ್ನು ಹೊಂದಿದೆ. ರಂಗಪೂಜೆ, ಪುಷ್ಪಾಂಜಲಿ ವಿಧಿ, ನರ್ತಕ-ನಟಿ ಲಕ್ಷಣ, ಅಂಗೋಪಾಂಗ ಅಭಿನಯಗಳನ್ನು ನೃತ್ತ ಅಧ್ಯಾಯದಲ್ಲಿ ಹೊಂದಿದೆ. ಈ ಸಾರೋದ್ಧಾರ ಗ್ರಂಥಗಳು ಈವರೆಗೂ ಯುಕ್ತರೀತಿಯಿಂದ ಪ್ರಕಟಣೆಯ ಭಾಗ್ಯ ಪಡೆದಿಲ್ಲ.
ಪರಾಮರ್ಶನ ಗ್ರಂಥಗಳು
Natyashastra with Abhinavabharati Commentary. 2012. Ed R S Nagar. Delhi : Parimal Publication
Sangītopanishat Saroddhāra.Author: Vacanacarya Sudhakalasa; Editor: Umakant Premanand Shah 1961. http://musicresearchlibrary.net/omeka/items/show/855
ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೩ : - https://www.youtube.com/channel/UCzsvThi5o-5X1-5kp7jaxVQ / @noopurabhramari1212index.php?title=Category:Art and Culture
- ↑ ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ ಸಂಚಿಕೆ ೪೩ : ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಮತ್ತು ಅದರ ವಿಶೇಷ ಸಂಗತಿಗಳು ಹಾಗೂ ಮಂಡನನ ಸಂಗೀತ ಮಂಡನ ಸೇರಿದಂತೆ ಭಾರತೀಯ ಗೀತ-ನೃತ್ಯ- ಯಕ್ಷಗಾನ ರಂಗಭೂಮಿಗಳಿಗೆ ಜೈನರ ಕೊಡುಗೆಗಳು https://www.noopurabhramari.com/shaastra-ranga-43-sudhakalasha-sngitopanishat-sarodhara-and-other-such-texts//
- ↑ ಈ ಗ್ರಂಥಗಳಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/want-to-subscribe-noopura-bhramari-and-purchase-the-dance-books/
- ↑ https://archive.org/details/AERaghavanVSangitaLiterature0176/page/n5/mode/2up and https://archive.org/details/dli.ministry.16049
- ↑ http://musicresearchlibrary.net/omeka/items/show/1345